ಐಫೆಲ್​ ಟವರ್​ ಮುಂದೆಯೇ ಲಿಪ್​ಲಾಕ್ ಮಾಡಿದ ಬಾಲಿವುಡ್​​ ಸಿಂಗರ್ಸ್; ಯಾರವರು?

ಬಾಲಿವುಡ್​ನ ಫೇಮಸ್​ ಸಿಂಗರ್​ ನೇಹಾ ಕಕ್ಕರ್​ ಮತ್ತು ಪತಿ ರೋಹನ್​ ಪ್ರೀತ್​ ಸಿಂಗ್​ ದಂಪತಿಗಳು ಸದ್ಯ ಜಾಲಿ ಮೂಡ್​ಗೆ ಜಾರಿದ್ದಾರೆ. ಈ ದಂಪತಿಗಳು ಆಗಾಗ ಫಾರೀನ್​ ಟ್ರಿಪ್​ಗೆ ಹೋಗುತ್ತಿರುತ್ತಾರೆ. ಜೊತೆಗೆ ತಮ್ಮ ಅಭಿಮಾನಿ ಕುಲಕ್ಕೆ ಸೋಷಿಯಲ್​ ಮೀಡಿಯಾಗಳ ಮೂಲಕ ಹೊಸ ಹೊಸ ಫೋಟೋಗಳನ್ನು ಪೋಸ್ಟ್​ ಮಾಡಿ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಸದ್ಯ ಪ್ಯಾರಿಸ್​​ ಪ್ರವಾಸದಲ್ಲಿರುವ ಅವರು ಒಂದು ಫೋಟೋವನ್ನು ಶೇರ್​ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

ಹೌದು ಕೆಂಪು ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಸಿಂಗಿಂಗ್​ ಸ್ಟಾರ್​  ಐಫೆಲ್​ ಟವರ್​ ಮುಂದೆ ನಿಂತುಕೊಂಡು ಚೆಂದುಟಿಯ ಚುಂಬನದಲ್ಲಿ ಬ್ಯೂಸಿಯಾಗಿದ್ದಾರೆ. ಈ ಪೋಟೋವನ್ನು ಅವರು ತಮ್ಮ ಇನ್ಸಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡು ಕೆಲವು ಸಾಲಗಳನ್ನು ಬರೆದುಕೊಂಡಿದ್ದಾರೆ. ‘ಜೀವನದಲ್ಲಿ ಯಾವುದು ಶಾಶ್ವತವಲ್ಲ ನಾವು ಒಂದು ದಿನ ಈ ಭೂಮಿಯನ್ನು ಬಿಟ್ಟು ಹೋಗುತ್ತೇವೆ. ಆದ್ದರಿಂದ ಇರೋವರೆಗೂ ಪ್ರೀತಿಯಲ್ಲೆ ಜೀವಿಸಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.

ನೇಹಾ ಶೇರ್​ ಮಾಡಿರುವ ಫೋಟೋಗೆ ಸಹೋದರ ಟೋನಿ ಕಕ್ಕರ್​ ಕಾಮೆಂಟ್​ ಮಾಡಿದ್ದು ಈ ಚಿತ್ರ ಪಿಕ್ಚರ್​ ಆಫ್​ ದ ಇಯರ್​ ಎಂದಿದ್ದಾರೆ. ಇನ್ನು ಚಿತ್ರಕ್ಕೆ ರೋಹನ್​ಪ್ರೀತ್​ ಕೂಡ ಕಾಮೆಂಟ್​ ಮಾಡಿದ್ದು ಜನರು ಐಫೆಲ್​ ಟವರನ್ನು ಪ್ರೀತಿಸುವುದಕ್ಕಿಂತ ಹೆಚ್ಚಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.

 

News First Live Kannada

Leave a comment

Your email address will not be published. Required fields are marked *