ಬೆಂಗಳೂರು: ಕೊರೊನಾ ಎಷ್ಟೊಂದು ಕ್ರೂರಿ ಅಂದ್ರೆ, ಸಂಬಂಧ, ಭಾವನೆಗಳಿಗೆ ಲೆಕ್ಕವೇ ಕೊಡೋದಿಲ್ಲ ಅಷ್ಟು ಕ್ರೂರಿ ಕೊರೊನಾ. ಇದೀಗ, ಇದೇ ಕೊರೊನಾ ಇಬ್ಬರು ಹೆಣ್ಣುಮಕ್ಕಳನ್ನ ಅನಾಥರನ್ನಾಗಿ ಮಾಡಿದೆ.

ನಗರದ ರಾಮಮೂರ್ತಿ ನಗರದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಇಬ್ಬರು ಹೆಣ್ಣುಮಕ್ಕಳ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಇತ್ತೀಚೆಗಷ್ಟೇ ತಾಯಿ ಕೊರೊನಾಗೆ ಬಲಿಯಾಗಿದ್ದಾರೆ. ತಂದೆ- ತಾಯಿಯನ್ನ ಕಳೆದುಕೊಂಡಿರೋ ಈ ಹೆಣ್ಣು ಮಕ್ಕಳು ಕಣ್ಣೀರು ಹಾಕ್ತಿದ್ದಾರೆ.

ಮೇ 6 ರಂದು 57 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿತ್ತು. ಸುಮಾರು ಆಸ್ಪತ್ರೆಗಳಿಗೆ ಅಲೆದಾಡಿದ್ರೂ ಬೆಡ್​ ಸಿಕ್ಕಿಲ್ಲ. ಕೊನೆಗೆ ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ತಾಯಿಯನ್ನ ತಮ್ಮ ಮಕ್ಕಳು ದಾಖಲಿಸಿದ್ದರು. ಬಿಬಿಎಂಪಿಗೆ ಕಾಲ್ ಮಾಡಿದ್ರೆ ನೋ ರೆಸ್ಪಾನ್ಸ್, ಐಸಿಯು ಬೆಡ್​ಗೆ ಹಣ ಕೊಡ್ತಿವಿ ಅಂದ್ರು ಬೆಡ್ ಕೊಡಲಿಲ್ಲ, ರೆಮ್​ಡಿಸಿವರ್ ಇಂಜೆಕ್ಷನ್ ನನ್ನು ನಾವೇ ತಂದು ಕೊಟ್ಟಿದ್ದೆವು.. ಆದ್ರೂ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಅಸಲಿಗೆ, ನಮ್ಮ ತಾಯಿಗೆ ರೆಮ್​ಡಿಸಿವಿರ್ ಇಂಜೆಕ್ಷನ್ ತಲುಪಿದೆಯೋ ಇಲ್ಲವೋ ಎಂದು ಅನುಮಾನ ಅಂತಾರೆ ಮಕ್ಕಳು.

ಉಸಿರಾಟದ ಸಮಸ್ಯೆ ತೀವ್ರಗೊಂಡು ಮೇ 10ಕ್ಕೆ ತಾಯಿ ಕೊರೊನಾಗೆ ಬಲಿಯಾಗಿದ್ದಾರೆ. ಮೃತಪಟ್ಟ ಬಳಿಕ ಶವವನ್ನ ರವಾನೆ ಮಾಡಲು ಐದೇ ನಿಮಿಷಕ್ಕೆ ಪಾಲಿಕೆ ಸಿಬ್ಬಂದಿ ಬಂದೊದ್ದಾರೆ. ಬೆಡ್​ ಕೊಡಿಸಿ ಅಂತ ಕೇಳೋದಕ್ಕೆ ಫೋನ್​ ಮಾಡಿದ್ರೆ, ರಿಸೀವ್​ ಮಾಡಿಲ್ಲ ಅನ್ನೋದು ಮಕ್ಕಳ ಆರೋಪ.

The post ಐಸಿಯು ಬೆಡ್​ಗೆ ಹಣ ಕೊಡ್ತೀವಿ ಅಂದ್ರೂ ಬೆಡ್​ ಕೊಡ್ಲಿಲ್ಲ- ತಂದೆ-ತಾಯಿ ಕಳೆದುಕೊಂಡ ಮಕ್ಕಳು appeared first on News First Kannada.

Source: newsfirstlive.com

Source link