ಐಸಿಸಿ ಗದ್ದುಗೆ ಮೇಲೆ ಜಿಂಬಾಬ್ವೆ ಕಣ್ಣು; ಬಿಸಿಸಿಐ ಬೆಂಬಲ ಕೇಳುವುದಿಲ್ಲ ಎಂದ ಮುಕುಹ್ಲಾನಿ! – Zimbabwe Cricket Chairman Tavengwa Mukuhlani Planning To Contest ICC Chairman Elections


ಮುಕುಹ್ಲಾನಿ ಅವರು ಸಣ್ಣ ಸದಸ್ಯ ರಾಷ್ಟ್ರಗಳು ಮತ್ತು ಸಹವರ್ತಿ ರಾಷ್ಟ್ರಗಳ ಧ್ವನಿಯಾಗಲು ಬಯಸುವುದಾಗಿ ಹೇಳಿಕೊಂಡಿರುವುದಲ್ಲದೆ, ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಕಷ್ಟು ಅನುಭವವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಈ ಬಾರಿ ಜಿಂಬಾಬ್ವೆ ಕ್ರಿಕೆಟ್ ತಂಡ (Zimbabwe cricket team) ಟಿ20 ವಿಶ್ವಕಪ್‌ನಲ್ಲಿ (T20 World Cup) ಅದ್ಭುತ ಪ್ರದರ್ಶನ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪಾಕಿಸ್ತಾನದ ವಿರುದ್ಧ 1 ರನ್‌ಗಳ ಜಯ ಸಾಧಿಸುವುದರೊಂದಿಗೆ ಪಾಕ್ ತಂಡದ ಸೇಮಿಸ್ ಕನಸನ್ನೇ ನುಚ್ಚುನೂರು ಮಾಡಿತ್ತು. ಹೀಗಾಗಿ ಇಡೀ ವಿಶ್ವವೇ ಜಿಂಬಾಬ್ವೆ ಪ್ರದರ್ಶನವನ್ನು ಕೊಂಡಾಡುತ್ತಿದೆ. ಇದೆಲ್ಲವುಗಳೊಂದಿಗೆ ಈಗ ಜಿಂಬಾಬ್ವೆ ಕ್ರಿಕೆಟ್​ ಮಂಡಳಿಯ ಹಾಲಿ ಅಧ್ಯಕ್ಷ ಐಸಿಸಿಯನ್ನಾಳುವ ಮಹದಾಸೆಯನ್ನು ಹೊರಹಾಕಿದ್ದಾರೆ. ಮುಂದಿನ ವಾರ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಐಸಿಸಿ ಅಧ್ಯಕ್ಷರ (ICC chairman) ಚುನಾವಣೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ಗ್ರೆಗ್ ಬಾರ್ಕ್ಲಿ (Tavengwa Mukuhlani) ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಹೊಸ ನಿಯಮಗಳ ಆಧಾರದ ಮೇಲೆ ಚುನಾವಣೆ

ಐಸಿಸಿ ಮಂಡಳಿಯಲ್ಲಿ ಒಟ್ಟು 16 ಸದಸ್ಯ ಮತದಾರರಿದ್ದಾರೆ. ಇವರಲ್ಲಿ ಒಬ್ಬ ಸ್ವತಂತ್ರ ನಿರ್ದೇಶಕ (ಇಂದ್ರ ನೂಯಿ) ಮತ್ತು ಮೂರು ಅಸೋಸಿಯೇಟ್ ದೇಶಗಳ ಸದಸ್ಯರು ಸೇರಿದಂತೆ 12 ಸದಸ್ಯರು ಪೂರ್ಣಾವಧಿಯ ದೇಶಗಳವರು. ಕಳೆದ ಬಾರಿ ಮೂರನೇ ಎರಡರಷ್ಟು ಬಹುಮತದ ಪ್ರಕಾರ ಅಧ್ಯಕ್ಷರನ್ನು ನಿರ್ಧರಿಸಲಾಗಿತ್ತು, ಆದರೆ ಈ ಬಾರಿ ಹೊಸ ನಿಯಮಗಳ ಪ್ರಕಾರ ಐಸಿಸಿಯ ಹೊಸ ಅಧ್ಯಕ್ಷರನ್ನು ನಿರ್ಧರಿಸಲು ಸರಳ ಬಹುಮತದ ಅಗತ್ಯವಿದೆ.

TV9 Kannada


Leave a Reply

Your email address will not be published.