‘ಐಸಿಸಿ ಪ್ಲೇಯರ್ ಆಫ್ ದಿ ಮಂತ್’ನಲ್ಲಿ ಭಾರತೀಯರ ಪಾರಮ್ಯ: ಈ ಬಾರಿ ಭುವನೇಶ್ವರ್ ಗೆ ಗೌರವ

ಮುಂಬೈ: ಐಸಿಸಿ ನೀಡುವ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಭಾರತದ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ತೋರಿದ ಗಮನಾರ್ಹ ಪ್ರದರ್ಶನದಿಂದ ಮಾರ್ಚ್ ತಿಂಗಳ ಈ ಗೌರವಕ್ಕೆ ಭುವನೇಶ್ವರ್ ಪಾತ್ರರಾಗಿದ್ದಾರೆ.

ಮಾರ್ಚ್ ತಿಂಗಳ ಈ ಗೌರವಕ್ಕೆ ಅಫ್ಘಾನಿಸ್ಥಾನದ ರಶೀದ್ ಖಾನ್ ಮತ್ತು ಜಿಂಬಾಬ್ವೆ ತಂಡದ ಸೀನ್ ವಿಲಿಯಮ್ಸ್ ಅವರು ಭುವನೇಶ್ವರ್ ಕುಮಾರ್ ಜೊತೆಗೆ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ಈ ವರ್ಷದ ಜನವರಿಯಿಂದ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಆರಂಭಿಸಿದ್ದು, ಪುರುಷರ ವಿಭಾಗದಲ್ಲಿ ಇದುವರೆಗಿನ ಎಲ್ಲಾ ಪ್ರಶಸ್ತಿಗಳೂ ಭಾರತೀಯರ ಪಾಲಾಗಿದ್ದು ವಿಶೇಷ. ಜನವರಿ ತಿಂಗಳ ಗೌರವಕ್ಕೆ ರಿಷಭ್ ಪಂತ್, ಫೆಬ್ರವರಿ ತಿಂಗಳಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಚ್ ತಿಂಗಳಲ್ಲಿ ಭುವನೇಶ್ವರ್ ಕುಮಾರ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಕ್ರೀಡೆ – Udayavani – ಉದಯವಾಣಿ
Read More