ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸೆಕೆಂಡ್ ಇನಿಂಗ್ಸ್ ಶುರು ಮಾಡಲು ಬಂದಿರುವ ಸ್ಪರ್ಧಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆಗಳು ಬಂದಿದೆ. ಸದ್ಯ ಬುಧವಾರದಿಂದ ಬಿಗ್‍ಬಾಸ್ ಶೋ ಮರು ಆರಂಭವಾಗಿದ್ದು, ಮನೆಯಿಂದ ಹೊರ ಹೋದ ನಿಧಿ ಸುಬ್ಬಯ್ಯಗೆ ಸಾಕಷ್ಟು ಮದುವೆ ಪ್ರಪೋಸಲ್ಸ್ ಬಂದಿದೆ ಎಂದು ನಿಧಿಸುಬ್ಬಯ್ಯ ಹೇಳಿದ್ದಾರೆ.

43 ದಿನಗಳ ಹೊರಗಡೆ ಹೋದ ನಂತರ ಏನು ಬದಲಾವಣೆಗಳಿತ್ತು ಎಂದು ಕಿಚ್ಚ ಪ್ರಶ್ನಿಸಿದಾಗ, ನಿಧಿ ಸುಬ್ಬಯ್ಯ ತುಂಬಾ ಜನರು ತುಂಬಾ ಪ್ರೀತಿ ಕೊಡ್ತಿದ್ದಾರೆ ಎನ್ನುತ್ತಾರೆ. ಈ ಮಧ್ಯೆ ಪ್ರಪೋಸಲ್ಸ್ ತುಂಬಾ ಬಂದಿದ್ಯಂತೆ ಎಂದು ಕಿಚ್ಚ ಕೇಳಿದಾಗ, ಇದಕ್ಕೆ ನಿಧಿ ಸುಬ್ಬಯ್ಯ ನಾಚುತ್ತಾ, ಯೆಸ್ ತುಂಬಾ ಜನ ಕಳುಹಿಸಿದ್ದಾರೆ ಅದರಲ್ಲಿ ಒಬ್ಬರು ಐ ವಾಂಟ್ ಟೂ ಮ್ಯಾರಿ ಯು ಎಂದು ಕಳುಹಿಸಿದ್ದರು, ಅದಕ್ಕೆ ನಾನು ಇನ್‍ಸ್ಟಾಗ್ರಾಮ್‍ನಲ್ಲಿ ಖಂಡಿತ, ನಿಮ್ಮ ಮನೆಯ ಅಡ್ರೆಸ್ ಕಳುಹಿಸಿ ಎಂದು ರಿಪ್ಲೈ ಮಾಡಿದ್ದೇನೆ ಎಂದು ಹೇಳಿದ್ದೇನೆ ಎಂದರು.

ಮದುವೆಯಾಗಲು ಅಡ್ರೆಸ್ ಯಾಕೆ ಬೇಕು ಎಂದು ಸುದೀಪ್ ಕೇಳಿದಾಗ, ಅವನನ್ನು ಹೆದರಿಸಲು ಹಾಗೇ ಹೇಳಿದೆ, ಅದಕ್ಕೆ ಅವನು ಅಯ್ಯಯ್ಯೋ ಮ್ಯಾಮ್ ಪ್ಲೀಸ್ ಬೇಜಾರು ಮಾಡಿಕೊಳ್ಳಬೇಡಿ. ನಾನು ನಿಮ್ಮ ಅಭಿಮಾನಿ ಎಂದು ಹೀಗೆ ಹೇಳಿದರು, ಅಷ್ಟಲ್ಲದೇ ನೂರಕ್ಕೂ ಹೆಚ್ಚು ಜನರು ಐ ಲವ್ ಯೂ, ಐ ಲವ್ ಯೂ ಎಂದು ಮೇಸೆಜ್ ಮಾಡಿದ್ದರು. ಯಾವುದಕ್ಕೂ ರಿಪ್ಲೈ ಮಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಟೂ ವಿಲರ್ ಮಾತ್ರವಿಲ್ಲ – ದಿವ್ಯಾ ಕಾಲೆಳೆದ ಸುದೀಪ್

The post ಐ ವಾಂಟೂ ಮ್ಯಾರಿ ಯು ಅಂದವರ ಮೇಲೆ ನಿಧಿ ಕೆಂಡ appeared first on Public TV.

Source: publictv.in

Source link