‘ಐ ವಿಲ್ ಕಿಲ್ ಯು’ ಎಂದು ಪೊಲೀಸ್ ಕಾನ್ಸ್​ಟೇಬಲ್​ ಕೊಲೆಗೆ ಯತ್ನಿಸಿದ್ದ ವಿದೇಶಿ ಪ್ರಜೆ ಅರೆಸ್ಟ್​

‘ಐ ವಿಲ್ ಕಿಲ್ ಯು’ ಎಂದು ಪೊಲೀಸ್ ಕಾನ್ಸ್​ಟೇಬಲ್​ ಕೊಲೆಗೆ ಯತ್ನಿಸಿದ್ದ ವಿದೇಶಿ ಪ್ರಜೆ ಅರೆಸ್ಟ್​

ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೇ ವಿದೇಶಿ ಪ್ರಜೆಗಳ ಹಾವಳಿ ಹೆಚ್ಚಾಗ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ವಿದೇಶಿ ಪ್ರಜೆಯೋರ್ವ ಪೊಲೀಸ್​ ಒಬ್ಬರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಕೊಲೆ ಮಾಡಲು ಯತ್ನಿಸಿದ ಘಟನೆಯೊಂದು ಸಿಲಿಕಾನ್​ ​ ಸಿಟಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಾನಾ ದೇಶದ ಮಾರ್ಗನ್ ಬಂಧಿತ ಆರೋಪಿಯಾಗಿದ್ದು, ರಸ್ತೆಯಲ್ಲಿ ಜಗಳವಾಡ್ತಿದ್ದ ನಾಲ್ವರು ವಿದೇಶಿ ಪ್ರಜೆಗಳನ್ನು ಪ್ರಶ್ನಿಸಿದ ಹೆಡ್​ ಕಾನ್ಸ್​ಟೇಬಲ್​ ಆರಿಫ್ ಪಾಷಾ ಮೇಲೆ ಮಾರ್ಗನ್​ ಹಲ್ಲೆ ಮಾಡಿದ್ದ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಐ ವಿಲ್​ ಕಿಲ್​ ಯು ಎಂದು ಹಲ್ಲೆ ಮುಂದಾಗಿದ್ದ. ಆ ಬಳಿಕ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿ ವೇಳೆ ಪೊಲೀಸರಿದ್ದ ಚೀತಾ ಬೈಕ್​ಗೆ ಕಾರನ್ನು ಗುದ್ದಿ ಸಿನಿಮಾ ಸ್ಟೈಲ್​ನಲ್ಲಿ ಎಸ್ಕೇಪ್​ ಆಗಿದ್ದ ಎನ್ನಲಾಗಿದೆ.

ಪೊಲೀಸರು ಬೈಕ್​ನಿಂದ ಜಿಗಿದಿದ್ದು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಬಳಿಕ ಆರೋಪಿ ಮಾರ್ಗನ್​ ಉತ್ತರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯ ಬೆನ್ನತ್ತಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ವಾರಣಾಸಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ವಿದೇಶಿ ಪ್ರಜೆ ಸಿಕ್ಕಿ ಬಿದ್ದಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

The post ‘ಐ ವಿಲ್ ಕಿಲ್ ಯು’ ಎಂದು ಪೊಲೀಸ್ ಕಾನ್ಸ್​ಟೇಬಲ್​ ಕೊಲೆಗೆ ಯತ್ನಿಸಿದ್ದ ವಿದೇಶಿ ಪ್ರಜೆ ಅರೆಸ್ಟ್​ appeared first on News First Kannada.

Source: newsfirstlive.com

Source link