ಒಂಟಿಕಾಲಿನಲ್ಲಿ 10 ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಿಲ್ಲದವರಿಗೆ ಸಾವಿನ ಅಪಾಯ ಹೆಚ್ಚು! | Study Says Balancing on one leg for 10 seconds may predict likelihood of living or dying


ಒಂಟಿಕಾಲಿನಲ್ಲಿ ಕನಿಷ್ಠ 10 ನಿಮಿಷಗಳ ಕಾಲವೂ ನಿಲ್ಲಲು ಸಾಧ್ಯವಾಗದವರಿಗೆ ಸಾವಿನ ಅಪಾಯ ಹೆಚ್ಚು ಎಂದು ಸಂಶೋಧನೆಯೊಂದು ತಿಳಿಸಿದೆ. ಮಧ್ಯವಯಸ್ಕರು ಕನಿಷ್ಠ 10 ನಿಮಿಷಗಳ ಕಾಲ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದೇ ಇದ್ದರೆ ಸಾವು ಬೇಗ ಸಂಭವಿಸಬಹುದು ಎಂದು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾದ ವರದಿಯಲ್ಲಿ ತಿಳಿಸಲಾಗಿದೆ.

ಒಂಟಿಕಾಲಿನಲ್ಲಿ ಕನಿಷ್ಠ 10 ನಿಮಿಷಗಳ ಕಾಲವೂ ನಿಲ್ಲಲು ಸಾಧ್ಯವಾಗದವರಿಗೆ ಸಾವಿನ ಅಪಾಯ ಹೆಚ್ಚು ಎಂದು ಸಂಶೋಧನೆಯೊಂದು ತಿಳಿಸಿದೆ. ಮಧ್ಯವಯಸ್ಕರು ಕನಿಷ್ಠ 10 ನಿಮಿಷಗಳ ಕಾಲ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದೇ ಇದ್ದರೆ ಸಾವು ಬೇಗ ಸಂಭವಿಸಬಹುದು ಎಂದು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್​ ಮೆಡಿಸಿನ್​ನಲ್ಲಿ ಪ್ರಕಟಿಸಲಾದ ವರದಿಯಲ್ಲಿ ತಿಳಿಸಲಾಗಿದೆ.

ವರದಿ ಪ್ರಕಾರ ಹಲವು ರೀತಿಯ ಆರೋಗ್ಯ ಸಮಸ್ಯೆಯಿದ್ದರೂ ಯಾವುದೇ ಸಪೋರ್ಟ್​ ಇಲ್ಲದೆ ನಿಲ್ಲಬಲ್ಲವರು ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ, ಅದೇ ಯಾವುದೇ ಸಮಸ್ಯೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲವಾದರೂ ಒಂಟಿ ಕಾಲಿನಲ್ಲಿ ಕೆಲವೇ ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಾಗದೇ ಇದ್ದರೂ ಸಾವಿನ ಅಪಾಯ ಅಂಥವರಿಗೆ ಹೆಚ್ಚಿದೆ ಎಂದು ಹೇಳಲಾಗಿದೆ. 10 ವರ್ಷಗಳಲ್ಲೇ ಸಾವನ್ನಪ್ಪಬಹುದು ಎಂದು ಹೇಳಲಾಗಿದ್ದು, ಅಂಥವರಲ್ಲಿ ಶೇ.84ರಷ್ಟು ಮಂದಿ ಮೃತಪಡುವ ಸಾಧ್ಯತೆ ಇದೆ.

2009ರಲ್ಲಿ ಬ್ರೆಜಿಲ್​ನಲ್ಲಿ ಸಂಶೋಧನೆಯೊಂದು ನಡೆದಿತ್ತು, ಅಲ್ಲಿ 50 ವರ್ಷ ಮೇಲ್ಪಟ್ಟ 1702 ಮಂದಿ ಭಾಗವಹಿಸಿದ್ದರು. ಅವರೆಲ್ಲರಿಗೂ ಒಂಟಿ ಕಾಲಿನಲ್ಲಿ ನಿಲ್ಲುವಂತೆ ಸೂಚಿಸಲಾಗಿತ್ತು. ಒಂಟಿ ಕಾಲಿನಲ್ಲಿ ನಿಂತು ಕಾಲಿನ ಪಕ್ಕ ಎರಡು ಕೈಗಳನ್ನು ನೇರವಾಗಿರಿಸಿ, ಎದುರು ನೋಡುವಂತೆ ತಿಳಿಸಲಾಗಿತ್ತು. ಐದರಲ್ಲಿ ಒಬ್ಬರು ಇದನ್ನು ಮಾಡುವಲ್ಲಿ ವಿಫಲರಾದರು. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳು ಕೂಡ ಇತ್ತು ಎಂಬುದು ತಿಳಿದುಬಂದಿದೆ.

60 ಸೆಕೆಂಡುಗಳ ಕಾಲ ಒಂಟಿ ಕಾಲಿನಲ್ಲಿ ನಿಲ್ಲುವಂತೆ ಸೂಚಿಸಲಾಯಿತು, ಹಾಗೆಯೇ ಕೇವಲ 10 ಸೆಕೆಂಡುಗಳ ಕಾಲವೂ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದವರಲ್ಲಿ ಶೇ.17.5 ರಷ್ಟು ಮಂದಿ ಬೇಗ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ದೇಹವನ್ನು ಬ್ಯಾಲೆನ್ಸ್ ಮಾಡುವುದು ಒಂದು ದೈಹಿಕ ಪರೀಕ್ಷೆಯೆಂಬಂತೆ ತೆಗೆದುಕೊಳ್ಳಲಾಯಿತು, ಬ್ರೆಜಿಲ್, ಯುಕೆ, ಫಿನ್​ಲೆಂಡ್, ಆಸ್ಟ್ರೇಲಿಯಾ ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಪ್ರತಿ ವರ್ಷವೂ 6,80,000 ಮಂದಿ ಮೃತಪಡುತ್ತಿದ್ದಾರೆ. ಸಾವಿನ ಅಪಾಯ ಯಾರಿಗೆ ಹೆಚ್ಚಿದೆ ಎಂದು ಅರಿಯಲು ಈ ಒಂಟಿಕಾಲಿನ ಪರೀಕ್ಷೆಯನ್ನು ಸಂಶೋಧಕರು ನಡೆಸಿದ್ದರು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.