ಒಂದಲ್ಲ ಒಂದು ದಿನ ಹಿಜಾಬಿಯೇ ಭಾರತದ ಪ್ರಧಾನ ಮಂತ್ರಿಯಾಗುತ್ತಾಳೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ | One day a Hijabi Girl will become the Prime Minister of India Say Asaduddin Owaisi


ಒಂದಲ್ಲ ಒಂದು ದಿನ ಹಿಜಾಬಿಯೇ ಭಾರತದ ಪ್ರಧಾನ ಮಂತ್ರಿಯಾಗುತ್ತಾಳೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಅಸಾದುದ್ದೀನ್​ ಓವೈಸಿ

ದೆಹಲಿ: ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್​ ಇದೀಗ ರಾಷ್ಟ್ರವ್ಯಾಪಿಯಾಗಿದೆ. ಇತ್ತೀಚೆಗೆ ಪಾಕಿಸ್ತಾನ ಕೂಡ ಈ ವಿವಾದದಲ್ಲಿ ಮೂಗು ತೂರಿಸಿತ್ತು. ಅದಕ್ಕೆ ಆಲ್​ ಇಂಡಿಯಾ ಮಜ್ಲಿಸ್​ ಇ ಇತ್ತೆಹದುಲ್​ ಮುಸ್ಲಿಮೀನ್​ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ತಿರುಗೇಟು ಕೂಡ ನೀಡಿದ್ದರು. ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ, ಭಾರತದ ಆಂತರಿಕ ವಿಚಾರಗಳಿಗೆ ಮೂಗು ತೂರಿಸಲು ಬರಬೇಡಿ ಎಂದು ಹೇಳಿದ್ದರು. ಇದೀಗ ಹಿಜಾಬ್​ ಬಗ್ಗೆ ಮತ್ತೊಂದು ಹೇಳಿಕೆ ನೀಡಿರುವ ಅಸಾದುದ್ದೀನ್​ ಓವೈಸಿ, ಒಂದಲ್ಲ ಒಂದು ದಿನ  ಹಿಜಾಬಿಯೇ ಭಾರತದ ಪ್ರಧಾನಿಯಾಗುತ್ತಾಳೆ ಎಂದಿದ್ದಾರೆ. ಹಿಜಾಬಿ ಎಂದರೆ ಹಿಜಾಬ್​ ಧರಿಸುವ ಮಹಿಳೆ ಎಂದರ್ಥ. ಉತ್ತರ ಪ್ರದೇಶದ ರ್ಯಾಲಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸುವ ಹೆಣ್ಣುಮಕ್ಕಳು ಜಿಲ್ಲಾಧಿಕಾರಿಯಾಗಬಹುದು, ವೈದ್ಯರಾಗಬಹುದು ಅಷ್ಟೇ ಏಕೆ? ಮುಂದೊಂದು ದಿನ ಈ ದೇಶದ ಪ್ರಧಾನಮಂತ್ರಿಯೂ ಆಗುತ್ತಾರೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ.

TV9 Kannada


Leave a Reply

Your email address will not be published.