ಒಂದಾದ ಮಂಸೋರೆ ಮತ್ತು ರಾಜ್​​. ಬಿ ಶೆಟ್ಟಿ.. ಇಬ್ಬರು ಹೇಳೋಕೆ ಹೊರಟ ಕಥೆಯೇನು?


ತಮ್ಮ ವಿಶೇಷ ಸಿನಿಮಾಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ವಿಶೇಷ ನಿರ್ದೇಶಕರೆಂದೇ ನಾಮಾಂಕಿತರಾದವರು ಯುವ ನಿರ್ದೇಶಕ ಮಂಸೋರೆ. ಈಗ ಮಂಸೋರೆ ಅವರ ಬತ್ತಳಿಕೆಯಿಂದ ಮತ್ತೊಂದು ಚಿತ್ರ ಹೊರ ಬರಲಿದೆ.

ಮಂಸೋರೆ ಅವರ ಸಿನಿಮಾಗಳ ಟೈಟಲ್​ಗಳೇ ವಿಚಿತ್ರವಾಗಿರುತ್ತದೆ ಮತ್ತು ಎಲ್ಲರನ್ನೂ ಆಕರ್ಷಣೆ ಮಾಡುತ್ತದೆ. ಈ ಹಿಂದೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾಗಳು ಕೂಡ ಇದೇ ಲಿಸ್ಟ್​ನಲ್ಲಿ ಸೇರಿದೆ. ಹರಿವು, ನಾತಿಚರಾಮಿ ಮತ್ತು ಆಕ್ಟ್ 1978 ಚಿತ್ರಗಳನ್ನು ಮಾಡಿ ಜನರ ಮನಸ್ಸನ್ನು ಗೆದ್ದಿದ್ದಲದೆ, ರಾಷ್ಟ್ರಪ್ರಶಸ್ತಿಗಳನ್ನು ಗೆದ್ದಿದ್ದರು. ಸದ್ಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ಮುಂದಿನ ಚಿತ್ರ ‘19.20.21’. ನಾವು ಮೊದಲೇ ಹೇಳಿದ ಹಾಗೆ ಟೈಟಲ್​ ಮೂಲಕವೇ ಜನರ ಮನಸ್ಸನ್ನು ಕೊರೆಯುವ ಕೆಲಸ ಮಾಡಿದ್ದಾರೆ ನಿರ್ದೇಶಕ ಮಂಸೋರೆ.

ಮಂಸೋರೆ ತಮ್ಮ ಮುಂದಿನ ಚಿತ್ರಕ್ಕೆ ‘19,20,21’ಎಂದು ಶೀರ್ಷಿಕೆ ನೀಡಲಾಗಿದ್ದು, ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಪೋಸ್ಟರ್​​​ನಲ್ಲೂ ತಮ್ಮ ಕ್ರಿಯೇಟಿವಿಟಿ ತೋರಿಸಿರುವ ಮಂಸೋರೆ, ಒಬ್ಬ ವ್ಯಕ್ತಿ ಕಣ್ಣುಮುಚ್ಚಿ ನಿಂತಿದ್ದಾನೆ. ರಕ್ತದ ಕಲೆಗಳಿಂದ ತುಂಬಿರುವ ಅವನ ಕೈಗಳಿಗೆ ಕೈಕೋಳವನ್ನು ಹಾಕಲಾಗಿದೆ. ಪೋಸ್ಟರ್​ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ ನಿರ್ದೇಶಕ ಮಂಸೋರೆ.

ಪ್ರತಿ ಚಿತ್ರದಲ್ಲೂ ಒಂದು ಯೂನಿಕ್​ ಕಥೆ ಹೇಳುವ ನಿರ್ದೇಶಕ ಮಂಸೋರೆ, ‘19.20.21’ ಚಿತ್ರದಲ್ಲಿ ಸರ್ಕಾರದಿಂದ ಉಂಟಾದ ಮಾನವ ಹಕ್ಕುಗಳ ಉಲ್ಲಂಘನೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ಈ ಚಲನಚಿತ್ರವು ಸರ್ಕಾರ ಮತ್ತು ವ್ಯವಸ್ಥೆಯ ಕೈಯಲ್ಲಿ ನರಳುತ್ತಿರುವ ಸಾಮಾನ್ಯ ಜನರ ಸಮಸ್ಯೆಗಳನ್ನು ತೋರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಪ್ರಸಿದ್ಧ ನಟರು ಮತ್ತು ರಂಗಭೂಮಿ ಹಿನ್ನೆಲೆಯ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದು, ನಾನು ರಾಜ್ ಬಿ ಶೆಟ್ಟಿ ಅವರ ಇತ್ತೀಚಿನ ಚಿತ್ರ ‘ಗರುಡ ಗಮನ ವೃಷಬ ವಾಹನ’ ದಲ್ಲಿ ನೋಡಿದ್ದೇನೆ. ಆ ಚಿತ್ರದಲ್ಲಿ ಅವರು ಉತ್ತಮ ನಿರ್ದೇಶಕರಷ್ಟೇ ಅಲ್ಲ ಅತ್ಯುತ್ತಮ ನಟನೂ ಹೌದು ಎಂಬುದು ನನಗೆ ಅರ್ಥವಾಯಿತು ಎಂದು ಹೇಳಿದ್ದಾರೆ.

ಸದ್ಯ ಪೋಸ್ಟರ್​ ಮತ್ತು ಟೈಟಲ್​ ಮೂಲಕ ಸದ್ದು ಮಾಡುತ್ತಿರುವ ‘19.20.21’ ಚಿತ್ರವನ್ನು ಆದಷ್ಟು ಬೇಗ ರಿಲೀಸ್​ ಮಾಡಲು ನಿರ್ದೇಶಕ ಮಂಸೋರೆ ನಿರ್ಧಾರ ಮಾಡಿದ್ದಾರಂತೆ.

News First Live Kannada


Leave a Reply

Your email address will not be published. Required fields are marked *