ವಿಶ್ವ ಕ್ರಿಕೆಟ್​​ನ ಫೈಯರ್​ಬ್ರಾಂಡ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ… ಕ್ರಿಕೆಟ್​ ಲೋಕದಲ್ಲಿ ಕೊಹ್ಲಿ ನಡೆದಿದ್ದೆ ದಾರಿ, ಆಡಿದ್ದೆ ಆಟ..! ಕಳೆದ ವರ್ಷವಷ್ಟೇ ದಶಕದ ಏಕದಿನ ಕ್ರಿಕೆಟರ್​ ಆಗಿ ಹೊರಹೊಮ್ಮಿರೋ ಕಿಂಗ್ ಕೊಹ್ಲಿ​, ವಿಶ್ವ ಕ್ರಿಕೆಟ್​ನ ಸಾಮ್ರಾಟನಾಗಿ ಹಲವು ದಾಖಲೆಗಳನ್ನ ಬ್ರೇಕ್ ಮಾಡ್ತಾ ಸಾಗ್ತಿದ್ದಾರೆ. ಹೌದು..! ವಿಶ್ವ ಕ್ರಿಕೆಟ್​​ನ ದಾಖಲೆ ವೀರ ಕೊಹ್ಲಿ, ಮುಂದೊಂದು ದಿನ ಕ್ರಿಕೆಟ್​​​ನ​ ಹಲವು ದಾಖಲೆಗಳನ್ನ ಅಳಿಸಿ ಹಾಕುವ ಆಟಗಾರ ಅನ್ನೋದು, ನೂರಕ್ಕೆ ನೂರು ಸತ್ಯ.

1 ವರ್ಷ 5 ತಿಂಗಳು 28 ದಿನಗಳಿಂದ ಸಿಡಿಸಿಲ್ಲ ಒಂದೇ ಒಂದು ಶತಕ..!
ಇಂತಹ ವಿಶ್ವ ಕ್ರಿಕೆಟ್​​ ಸಾಮ್ರಾಟ ಕಳೆದ ಒಂದೂವರೆ ವರ್ಷದಿಂದ ಟೆಸ್ಟ್​​​ ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. 2020ರ ಕ್ಯಾಲೆಂಡರ್​​ನಲ್ಲಂತೂ ಕೊಹ್ಲಿ, ಹೇಳಿಕೊಳ್ಳುವ ಪ್ರದರ್ಶನವನ್ನೇ ನೀಡಲಿಲ್ಲ. ಯೆಸ್​.. ಮಾಡ್ರನ್​ ಡೇ ಕ್ರಿಕೆಟ್​ನ ರೂಲರ್​ ಎನಿಸಿಕೊಂಡಿರುವ ಕೊಹ್ಲಿ, ಸುಮಾರು 1 ವರ್ಷ 5 ತಿಂಗಳು 28 ದಿನಗಳಿಂದ ಶತಕದ ಬರ ಎದುರಿಸುತ್ತಿದ್ದಾರೆ. ಈ ಮೊದಲು ಸರಾಸರಿ ಪ್ರತಿ 6.5 ಇನಿಂಗ್ಸ್‌ಗೆ ಒಂದರಂತೆ ಶತಕ ಗಳಿಸಿ ದಾಖಲೆ ಹೊಂದಿರುವ ಕಿಂಗ್​​​ ಕೊಹ್ಲಿಯ​ ಬೆಂಕಿಯಂಥ ಆಟ, 78 ವಾರಗಳಿಂದ ತಣ್ಣಗಾಗಿದೆ. ಇದು ಫ್ಯಾನ್ಸ್​​ಗೆ ಫುಲ್​ ಡಿಸಪಾಯಿಂಟ್​ ಆಗಿದೆ.

2019ರ ನವೆಂಬರ್​​ 22ರಂದು ಸಿಡಿಸಿದ್ದೇ ಕೊಹ್ಲಿ ಕೊನೆಯ ಶತಕ..!
ಭಾರತದಲ್ಲಿ ಆಯೋಜನೆಗೊಂಡ ಮೊದಲ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದೇ, ಕೊನೆಯದು. 2019ರ ನವೆಂಬರ್​ 22ರಂದು ನಡೆದ ಈ ಟೆಸ್ಟ್​​ನಲ್ಲಿ 136 ರನ್​ ಗಳಿಸಿದ್ದ ವಿರಾಟ್​ ಕೊಹ್ಲಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದಾದ ಬಳಿಕ ವಿರಾಟ್​ ನೂರರ ಸಂಭ್ರಮ ಆಚರಿಸಿ 13,032 ಗಂಟೆಗಳಾಗಿದೆ. ತಮ್ಮ 11 ವರ್ಷಗಳ ಕ್ರಿಕೆಟ್​ ಬದುಕಿನಲ್ಲಿ ದೀರ್ಘಕಾಲದವರೆಗೆ ಶತಕ ಗಳಿಸಲು ಪರದಾಡಿದ್ದು, ಇದು ಮೂರನೇ ಸಲ..! ಇನ್ನೂ ಟೀಮ್​ ಇಂಡಿಯಾ ಮೈದಾನಕ್ಕೆ ಇಳಿಯೋದು ಒಂದು ತಿಂಗಳು ಬಾಕಿಯಿದ್ದು, ಕೊಹ್ಲಿ ನೂರರ ಸಂಭ್ರಮಕ್ಕೆ ಮತ್ತಷ್ಟು ಲೇಟ್​ ಆಗಲಿದೆ.

ಬಾಂಗ್ಲಾದೇಶದ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ವಿರಾಟ್​, ಅದಾದ ಬಳಿಕ ಫುಲ್​ ಫೆಲ್ಯೂರ್​ ಆದರು. ನ್ಯೂಜಿಲೆಂಡ್​, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​​ ಸರಣಿಗಳಲ್ಲಿ ಕಣಕ್ಕಿಳಿದಿದ್ದ ಅಗ್ರೆಸ್ಸಿವ್​ ಬ್ಯಾಟ್ಸ್​ಮನ್​, ಎದುರಾಳಿ ಬೌಲರ್​​ಗಳ ಮುಂದೆ ಠುಸ್​ ಆದರು. ಬಾಂಗ್ಲಾ ನಂತರ ಆಡಿದ ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ, ಬ್ಯಾಟಿಂಗ್​ ಪ್ರದರ್ಶನ ಹೇಗಿದೆ ಅನ್ನೋದನ್ನ ನೀವೇ ನೋಡಿ..!

2019ರ ನ.22 ಬಳಿಕ ಟೆಸ್ಟ್​​​​ನಲ್ಲಿ ಕೊಹ್ಲಿ​
ಪಂದ್ಯ – 07
ರನ್​ – 288
ಅರ್ಧಶತಕ – 03
ಸರಾಸರಿ – 22.15

WTC​ ಫೈನಲ್​ನಲ್ಲಾದ್ರು ಶತಕದ ಬರ ನೀಗಿಸ್ತಾರಾ ಕೊಹ್ಲಿ..?
ಟೆಸ್ಟ್​ ಕ್ರಿಕೆಟ್​​ನಲ್ಲಿ ಸತತ 13 ಇನ್ನಿಂಗ್ಸ್​​ಗಳಿಂದ ಮೂರಂಕಿ ದಾಟಲು ಪರದಾಡ್ತಿರುವ ವಿರಾಟ್​​ ಕೊಹ್ಲಿ, ಈ ವರ್ಷವಾದ್ರೂ ಶತಕದ ಬರ ನೀಗಿಸ್ತಾರೆ ಅನ್ನೋ ಕನಸಿನಲ್ಲಿದ್ದಾರೆ ಫ್ಯಾನ್ಸ್​​..! ಇತ್ತ ಕೊಹ್ಲಿ ಕೂಡ ಅದೇ ಜೋಷ್​ನಲ್ಲಿದ್ದಾರೆ. ಆದರೆ ಕೊಹ್ಲಿಯ ಕಳಪೆ ಫಾರ್ಮ್​​ ನೋಡಿದ್ರೆ, ಶತಕ ಸಿಡಿಸುತ್ತಾರಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ಟೀಮ್​ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಮತ್ತು ಇಂಗ್ಲೆಂಡ್​​ ಸರಣಿಗಾಗಿ ಇಂಗ್ಲೆಂಡ್​ಗೆ​ ಹಾರಲಿದೆ. ಸರಣಿ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದ್ದು, ಬರೊಬ್ಬರಿ 543 ದಿನಗಳಿಂದ ಫ್ಯಾನ್ಸ್,​ ಆಸೆ ಕೊಹ್ಲಿ ಈಡೇರಿಸುತ್ತಾರಾ ಮುಂದೆ ಗೊತ್ತಾಗಲಿದೆ.

ಈ ಹಿಂದೆ ಎರಡು ಬಾರಿ ಶತಕದ ಬರ ಎದುಸಿದ್ದ ವಿರಾಟ್​..!
ಈ ಹಿಂದೆ 2011ರ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ಆಡಿದ 24 ಇನಿಂಗ್ಸ್‌ಗಳಲ್ಲಿ ಒಂದು ಬಾರಿ ಕೂಡ ಶತಕ ಸಿಡಿಸಿರಲಿಲ್ಲ. ಈ ಸಂದರ್ಭದಲ್ಲಿ ಕೊಹ್ಲಿ, 17 ಏಕದಿನ ಮತ್ತು 7 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದರು. ಇದಾದ ಮೂರು ವರ್ಷಗಳ ನಂತರ 2014ರಲ್ಲಿ ಮತ್ತೊಮ್ಮೆ ಶತಕದ ಬರ ಎದುರಿಸಿದ್ದ ವಿರಾಟ್​, ಫೆಬ್ರವರಿ-ಅಕ್ಟೋಬರ್‌ ಅವಧಿಯಲ್ಲಿ 10 ಟೆಸ್ಟ್‌, 8 ಏಕದಿನ ಮತ್ತು 7 ಟಿ-20 ಸೇರಿ, ಓರ್ಠಠೂ 25 ಇನಿಂಗ್ಸ್‌ ಆಡಿದ್ದರೂ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲ..!

ಒಟ್ನಲ್ಲಿ… 2019ರ ನವೆಂಬರ್​ ನಂತರ 2020ರಲ್ಲಿ ಸೆಂಚುರಿಲೆಸ್ ಆದ ಕೊಹ್ಲಿ, ಬ್ಯಾಟಿಂಗ್​ನಲ್ಲೂ ಸಮರ್ಥ ಪ್ರದರ್ಶನ ನೀಡುವಲ್ಲಿ ಫೇಲ್​ ಆಗಿದ್ದಾರೆ. ಈ ವರ್ಷ ಕೂಡ ಇಂಗ್ಲೆಂಡ್​ ವಿರುದ್ಧ ಟೆಸ್ಟ್​​ ಸರಣಿಯಲ್ಲೂ ಕಹಿ ಅನುಭವಿಸಿರುವ ಕೊಹ್ಲಿ, ಮುಂದಿನ ಸರಣಿಗಳಲ್ಲಾದರೂ 18 ತಿಂಗಳ ಸಮಸ್ಯೆಗೆ ಬ್ರೇಕ್​ ಹಾಕ್ತಾರಾ ಅನ್ನೋದನ್ನ, ಕಾದು ನೋಡಬೇಕಿದೆ.

The post ಒಂದುವರೆ ವರ್ಷದಿಂದ ಅಭಿಮಾನಿಗಳಿಗೆ ನಿರಾಸೆ- WTC ಫೈನಲ್​ನಲ್ಲಾದ್ರೂ ಶತಕ ಸಿಡಿಸ್ತಾರಾ ಕೊಹ್ಲಿ..? appeared first on News First Kannada.

Source: newsfirstlive.com

Source link