ಸಿನಿಮಾದಲ್ಲಿ ಬರುವ ಹೀರೋ ಹಾಗೂ ವಿಲನ್ ಗುಂಪಿನ ನಡುವಿನ ಒಂದು ಫೈಟ್ ಭರ್ಜರಿ ಆಗಿರಲಿದೆ. 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆಯಲಾಗಿತ್ತು. ಅಲ್ಲಿ ವಿಶೇಷ ಸೆಟ್ ಹಾಕಿ ಫೈಟ್ ದೃಶ್ಯ ಶೂಟ್ ಮಾಡಲಾಗಿದೆ.
ಆ್ಯಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದರೆ ಸಿನಿಮಾದ ಮೈಲೇಜ್ ಹೆಚ್ಚುತ್ತದೆ. ಹೊಸಹೊಸ ರೀತಿಯಲ್ಲಿ ಫೈಟಿಂಗ್ ದೃಶ್ಯಗಳನ್ನು ತೆರೆಮೇಲೆ ತಂದರೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಈಗ ಶ್ರೀನಗರ ಕಿಟ್ಟಿ (Srinagar Kitty) ನಟನೆಯ ‘ಗೌಳಿ’ ಸಿನಿಮಾ ತಂಡ ಒಂದು ಆ್ಯಕ್ಷನ್ ದೃಶ್ಯಕ್ಕಾಗಿ 35 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈಗಾಗಲೇ ‘ಗೌಳಿ’ ಸಿನಿಮಾ (Gowli Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗ ಈ ಲೇಟೆಸ್ಟ್ ಮಾಹಿತಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಫೈಟ್ ದೃಶ್ಯಗಳು ಹೇಗೆ ಮೂಡಿ ಬಂದಿರಬಹುದು ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿ ಮೂಡಿದೆ.
ರಘು ಸಿಂಗಂ ‘ಗೌಳಿ’ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಹಿಂದೆಂದೂ ಮಾಡಿರದಂಥ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕನ್ನಡದ ಕೆಲ ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ. ಇದಕ್ಕೂ ಪಾತ್ರದ ಹೆಸರಿಗೂ ಏನಾದರೂ ಸಂಬಂಧವಿದೆಯೇ ಎಂಬುದು ಸದ್ಯದ ಕುತೂಹಲ. ಸದ್ಯ ‘ಗೌಳಿ’ ಚಿತ್ರದ ಡಬ್ಬಿಂಗ್ ಕೆಲಸಗಳು ಕೊನೇ ಹಂತದಲ್ಲಿವೆ. ಈ ಪಾತ್ರಕ್ಕಾಗಿ ಕಿಟ್ಟಿ ಅವರು ಉದ್ದವಾದ ಕುರುಚಲು ಗಡ್ಡ ಬಿಟ್ಟಿದ್ದಾರೆ. ಸಿನಿಮಾ ಉದ್ದಕ್ಕೂ ಇದೇ ಗೆಟಪ್ ಇರಲಿದೆ.
ಸಿನಿಮಾದಲ್ಲಿ ಬರುವ ಹೀರೋ ಹಾಗೂ ವಿಲನ್ ಗುಂಪಿನ ನಡುವಿನ ಒಂದು ಫೈಟ್ ಭರ್ಜರಿ ಆಗಿರಲಿದೆ. 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆಯಲಾಗಿತ್ತು. ಅಲ್ಲಿ ವಿಶೇಷ ಸೆಟ್ ಹಾಕಿ ಫೈಟ್ ದೃಶ್ಯ ಶೂಟ್ ಮಾಡಲಾಗಿದೆ. ಕಿಟ್ಟಿ, ಯಶ್ ಶೆಟ್ಟಿ ಜತೆಗೆ 130ಕ್ಕೂ ಅಧಿಕ ಕಲಾವಿದರು ಹಾಗೂ ನುರಿತ ಫೈಟರ್ಸ್ ಭಾಗವಹಿಸಿದ್ದರು. ಯಲ್ಲಾಪುರ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲೂ ಇಂಥದ್ದೇ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗಿದೆ.