ಒಂದು ಕಡೆ ದಿವ್ಯಾ ಉರುಡುಗ.. ಮತ್ತೊಂದು ಕಡೆ ದಿವ್ಯಾ ಸುರೇಶ್​ ಕಣ್ಣೀರು.. ನಡೆದಿದ್ದೇನು..?

ಒಂದು ಕಡೆ ದಿವ್ಯಾ ಉರುಡುಗ.. ಮತ್ತೊಂದು ಕಡೆ ದಿವ್ಯಾ ಸುರೇಶ್​ ಕಣ್ಣೀರು.. ನಡೆದಿದ್ದೇನು..?

ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ವೈಮನಸ್ಸಿನ ಗಾಳಿ ಸುಳಿಯುತ್ತಲೇ ಇದೆ. ಸೋಲು ಗೆಲವು ಜೀವನದ ಒಂದು ನಾಣ್ಯದ ಎರಡು ಮುಖ ಎದ್ದಂಗೆ. ಸೋಲು ಪಾಠ ಹೇಳಿಕೊಟ್ಟರೆ ಗೆಲವು ಸ್ಥಾನ ನೀಡುತ್ತದೆ. ಅಷ್ಟಕ್ಕೂ ಇಲ್ಲಿ ಹೇಗೆ ಗೆದ್ದೆ ಎನ್ನುವುದಕ್ಕಿಂತ. ಗೆಲವು ಮುಖ್ಯ ಅಷ್ಟೇ.

ಈಗ ಬಿಗ್​ ಬಾಸ್​ ಆಟ ಕೂಡ ಹಾಗೇ. ನಿನ್ನೆ ನಡೆದ ಟಾಸ್ಕ್​ನಲ್ಲಿ ಎಲ್ಲರೂ ತಮ್ಮ ಅಸ್ತಿತ್ವದ ಉಳಿವಿಗಾಗಿ ಪ್ರಯತ್ನ ನಡೆಸಿದ್ರು. ದಿವ್ಯಾ ಸುರೇಶ್​ ಅವರು ಎಷ್ಟೇ ನೋವಲ್ಲಿದ್ದರೂ ಗೆಲ್ಲಲೇಬೇಕು ಎಂಬ ಹಠದಿಂದ ಆಡಿದ್ರು. ಆದ್ರೆ ತಂಡದ ಗೆಲುವು ಕೊಂಚದ್ರಲ್ಲಿ ಮಿಸ್​ ಆಗುತ್ತದೆ. ಇದು ಅವರಿಗೆ ಸಹಿಸಲಾಗದ ಹತಾಶೆಯನ್ನುಂಟು ಮಾಡಿದ್ದು ಸುಳ್ಳಲ್ಲ. ಇದ್ರಿಂದ ನೊಂದ ದಿವ್ಯಾ ಎಸ್..​ ಮಂಜು ಮತ್ತು ರಘು ಅವರ ಮುಂದೆ ಕಣ್ಣೀರು ಹಾಕ್ತಾರೆ.

ಇತ್ತ, ಗೆದ್ದ ತಂಡ ಕೆ.ಪಿ ನೇತೃತ್ವದ ತಂಡ ಸೂರ್ಯ ಸೇನೆ ಕ್ಯಾಪ್ಟನ್​ಶಿಪ್​ ಟಾಸ್ಕ್​ಗೆ ವೈಯಕ್ತಿಕವಾಗಿ ಫೈಟ್​ ಮಾಡ್ತಾರೆ. ಆದ್ರೆ, ವಿಜಯಲಕ್ಷ್ಮೀ ಒಲಿದಿದ್ದು ಮಾತ್ರ ದಿವ್ಯಾ ಉರುಡುಗ ಅವರಿಗೆ. ಯಾವ ಸ್ಪರ್ಧಿ ಹೆಚ್ಚು ಬಟ್ಟೆ ಧರಿಸುತ್ತಾರೆ ಅವ್ರು ಟಾಸ್ಕ್‌ನ ವಿಜೇತರಾಗ್ತಾರೆ ಅಂತಾ ಬಿಗ್‌ಬಾಸ್ ಅನೌನ್ಸ್ ಮಾಡ್ತಾರೆ. ಆಗ ಶುರುವಾಯ್ತು ನೋಡಿ.

ಎಲ್ಲರೂ ಎದ್ನೋ ಬಿದ್ನೋ ಅಂತಾ ಎಲ್ಲೆಲ್ಲಿತ್ತೋ ಅಷ್ಟು ಬಟ್ಟೆ ಹಾಕೋತಾರೆ. ಒಬ್ಬೊಬ್ಬರು ಒಬ್ಬೊಬರಿಗೆ ಹೆಲ್ಪ್ ಮಾಡ್ತಾರೆ. ದಿವ್ಯಾ, ಅರವಿಂದ್, ವೈಷ್ಣವಿ, ಪ್ರಶಾಂತ್, ಚಂದ್ರಚೂಡ್‌ ಅಂಡ್ ಶಮಂತ್‌ ಬಟ್ಟೆ ಮೇಲೆ ಬಟ್ಟೆ ಹಾಕೋತಾರೆ. ಟೈಮ್ ಮುಗಿದ್ಮೇಲೆ ಎಲ್ಲರೂ ರೋಬೋ ಥರಾ ನಡೆಯೋಕೆ ಶುರು ಮಾಡಿದ್ರು. ಅರವಿಂದ್‌ ಅಂತಾ ಬಾಡಿಬಿಲ್ಡರ್‌ ಥರಾನೇ ನಡೆದುಕೊಂಡು ಬಂದರು. ಆದ್ರೆ, ಈ ಟಾಸ್ಕ್‌ನಲ್ಲಿ ವಿಜೇತರಾಗಿದ್ದು ದಿವ್ಯಾ ಉರುಡುಗ.

ಇದು ಯಾಕೆ ಇಂಪಾರ್ಟ್‌ಟೆಂಟ್ ಅಂದ್ರೆ, ಬಿಗ್‌ಬಾಸ್ ಸೀಸನ್‌-8ರ ಮೊಟ್ಟ ಮೊದಲ ಮಹಿಳಾ ಕ್ಯಾಪ್ಟನ್ ಅಂದ್ರೆ ಅದು ದಿವ್ಯಾ ಉರುಡುಗ. ಮೊನ್ನೆ ಮೊನ್ನೆ ತಾನೇ ಇದೇ ವಿಚಾರವಾಗಿ ಪ್ರಿಯಾಂಕಾ ಜೊತೆ ಮನಸ್ತಾಪವೂ ಉಂಟಾಗಿತ್ತು. ಮೊಟ್ಟೆ ಟಾಸ್ಕ್‌ನಲ್ಲಿ ಫೈನಲ್‌ ಸ್ಟೇಜ್‌ವರೆಗೂ ಹೋಗಿ ಸೋತಿದ್ದ ಪ್ರಿಯಾಂಕ.. ಇದಕ್ಕೆ ದಿವ್ಯಾ, ಕ್ಯಾಪ್ಟನ್‌ ಆದ್ರೆ ನಾನೇ ಮೊದ್ಲು ಆಗ್ಬೇಕು. ಪ್ರಿಯಾಂಕಾ ಆಗಿಲ್ಲ ಅದೇ ಸಮಾಧಾನ ಅಂತಾ ಹೇಳಿದ್ರು. ಇದರಿಂದ ದಿವ್ಯಾ ಹಾಗೂ ಪ್ರಿಯಾಂಕಾ ನಡುವೆ ಅಸಮಾಧಾನ ಏರ್ಪಟ್ಟಿತ್ತು. ಆದ್ರೆ, ವಿಚಾರ ಏನಂದ್ರೆ ಈಗ ದಿವ್ಯಾ ಉರುಡುಗ ತಾವು ಅಂದುಕೊಂಡಂತೆ ಫಸ್ಟ್‌ ಮಹಿಳಾ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟನ್ ಅಂತಾ ಅನೌನ್ಸ್ ಮಾಡಿದಾಗ ದಿವ್ಯಾ ಆನಂದ ಬಾಷ್ಫ ಸುರಿಸಿದರು. ಅವರನ್ನ ಕಂಟ್ರೋಲ್ ಮಾಡೋದು ಕೂಡ ಕಷ್ಟವಾಗಿತ್ತು. ಇದೇ ವೇಳೆ ಅರವಿಂದ್ ಕೂಡ ಕಣ್ಣೀರಿಟ್ಟರು. ದಿವ್ಯಾ ಕ್ಯಾಪ್ಟನ್ ಆಗಿದ್ದಕ್ಕೆ ಎಮೋಷನಲ್ ಆದ ಅರವಿಂದ್‌ ಖುಷಿ ಪಟ್ಟರು.
ಇಲ್ಲಿ ಅವರಿಗೆ ಬಿಗ್​ ಬಿ ಮನೆಯ ಎಲ್ಲಾ ಮಹಿಳಾ ಮಣಿಯರು ಬೇದಭಾವ ತೊರದೇ ಸಹಾಯ ಮಾಡುತ್ತಾರೆ. ಇದು ಅವರ ಖುಷಿಗೆ ಇನ್ನೊಂದು ಕಾರಣ. ಹೀಗಾಗಿ ದಿವ್ಯಾ ತಮ್ಮ ಗೆಲುವನ್ನು ಅವರಿಗೆ ಡೆಡಿಕೇಟ್​ ಮಾಡ್ತಾರೆ.

ಇನ್ನು ಮಂದೆ ದಿವ್ಯಾ ಉರುಡುಗ ಅವರ ಕ್ಯಾಪ್ಟನ್​ಶಿಪ್​ನಲ್ಲಿ ಮನೆ ಹೇಗೆ ನಡೆಯುತ್ತದೆ. ಏನೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋದನ್ನ ಕಾದು ನೋಡೋಣ..

The post ಒಂದು ಕಡೆ ದಿವ್ಯಾ ಉರುಡುಗ.. ಮತ್ತೊಂದು ಕಡೆ ದಿವ್ಯಾ ಸುರೇಶ್​ ಕಣ್ಣೀರು.. ನಡೆದಿದ್ದೇನು..? appeared first on News First Kannada.

Source: newsfirstlive.com

Source link