ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಂತ್ರವನ್ನೇ ಗೇಲಿ ಮಾಡಿದ್ದಾರೆ. ಗಾಂಧೀಜಿ ಅವರಿಂದ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್‌ಗೆ ಬೆಂಬಲವೇ ಸಿಗಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಬಾಪು ಮಂತ್ರ ಅನುಸರಿಸಿದರೆ ಸ್ವಾತಂತ್ರ್ಯ ಸಿಗುವುದಿಲ್ಲ, ಬದಲಾಗಿ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ನೀವು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ ಅಂತಾ ಕಂಗನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲೇಖನ ಒಂದನ್ನ ಕಂಗನಾ ಹಂಚಿಕೊಂಡಿದ್ದಾರೆ. ಒಂದೋ ನೀವು ಗಾಂಧಿ ಅಭಿಮಾನಿಯಾಗಬಹುದು ಅಥವಾ ನೇತಾಜಿ ಬೆಂಬಲಿಗರಾಗಬಹುದು. ಇಬ್ಬರ ಬೆಂಬಲಿಗರಾಗಲು ಸಾಧ್ಯವಿಲ್ಲ. ನೀವೇ ನಿರ್ಧರಿಸಿ.. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂಬ ಬಾಪು ಮಂತ್ರ ಅನುಸರಿಸಿದ್ರೆ ಸ್ವಾತಂತ್ರ್ಯ ಸಿಗುವುದಿಲ್ಲ, ಬದಲಾಗಿ ಭಿಕ್ಷೆ ಮಾತ್ರ ಸಿಗುತ್ತದೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರ ಕೈಗಿಟ್ಟಿದ್ದು, ಹೋರಾಟ ಮಾಡುವ ಧೈರ್ಯ ಇಲ್ಲದ ಅಧಿಕಾರದ ಹಸಿವು ಹೊಂದಿರುವವರು ಎಂದು ಕಂಗನಾ ಕಿಡಿಕಾರಿದ್ದಾರೆ. ಯಾರೋ ಕಪಾಳಮೋಕ್ಷ ಮಾಡಿದ್ರೆ, ಇನ್ನೊಂದು ಕೆನ್ನೆಯನ್ನೂ ಅವರಿಗೆ ಕೊಟ್ಟರೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಹೇಳಿಕೊಟ್ಟವರು ಅವರು. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿ.
ಇದನ್ನೂ ಓದಿ: ದೇಶಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ -ಪದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್
ಗಾಂಧಿ, ಭಗತ್ ಸಿಂಗ್ ಅಥವಾ ಸುಭಾಷ್ ಚಂದ್ರ ಬೋಸ್ ಅವರನ್ನು ಎಂದಿಗೂ ಬೆಂಬಲಿಸಲಿಲ್ಲ. ಗಾಂಧೀಜಿಯವರು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಬೇಕೆಂದು ಬಯಸಿದ್ದರು ಎಂಬುದಕ್ಕೆ ಪುರಾವೆ ಇದೆ. ಹೀಗಾಗಿ ನೀವು ಯಾರನ್ನು ಬೆಂಬಲಿಸಬೇಕು ಅನ್ನೋದನ್ನ ಆಯ್ಕೆ ಮಾಡಿಕೊಳ್ಳಿ.
ಇದನ್ನೂ ಓದಿ: ಕಂಗನಾ ‘ಸ್ವಾತಂತ್ರ್ಯ’ ವಿವಾದ; ‘ಕೋಮುವಾದ ಬಿತ್ತಲು ರಣಾವತ್ ಅಧಿಕೃತ ರಾಯಭಾರಿ’ -ಗಾಂಧೀಜಿ ಮರಿ ಮೊಮ್ಮಗ ವಾಗ್ದಾಳಿ