
ಗ್ರಂಥಾಲಯದಲ್ಲಿ ಓದುತ್ತಿರುವ ಮಕ್ಕಳು
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಮಿನಿ ಲೈಬ್ರರಿಯೊಂದನ್ನು ರಾಯಚೂರು ನಗರದ ಗಾಜಗಾರಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. ರಂಗರಾವ್ ದೇಸಾಯಿ ಎಂಬವರು ಈ ಗ್ರಂಥಾಲಯವನ್ನು ಆರಂಭಿಸಿದ್ದಾರೆ.
ರಾಯಚೂರು: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಮಿನಿ ಲೈಬ್ರರಿ (library)ಯೊಂದನ್ನು ನಗರದ ಗಾಜಗಾರಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಒಂದು ಗಂಟೆ ಓದಿದರೆ ಒಂದು ಗಿಫ್ಟ್ ಎಂಬ ವಿನೂತನ ಟಾಸ್ಕ್ ಆರಂಭಿಸಲಾಗಿದ್ದು, ಚಿನ್ನರು ಫಿದಾ ಆಗಿದ್ದಾರೆ. ಇಂಥ ಗ್ರಂಥಾಲಯವನ್ನು ಖಾಸಗಿ ಕಂಪನಿಯೊಂದರ ಪ್ರಾಜೆಕ್ಟ್ ಮ್ಯಾನೇಜರ್ ಕಾಡ್ಲೂರು ರಂಗರಾವ್ ದೇಸಾಯಿ (Rangarav Desai) ಅವರು ನಿರ್ಮಾಣ ಮಾಡಿದ್ದಾರೆ. ಗಾಜಗಾರಪೇಟೆಯಲ್ಲಿರುವ ತಮ್ಮ ಹಳೆಯ ಕಟ್ಟಡದಲ್ಲಿ ನಿರ್ಮಾಣ ಮಾಡಿದ್ದಾರೆ.
ಮಕ್ಕಳು ಮನೆಯಲ್ಲಿಯೇ ಕುಳಿತು ಟಿವಿ, ಮೊಬೈಲ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳ ಅಮೂಲ್ಯ ಸಮಯ ವ್ಯರ್ಥವಾಗಬಾರದು ಎಂಬ ಕಾರಣಕ್ಕಾಗಿ ರಂಗರಾವ್ ದೇಸಾಯಿ ಅವರು ಈ ಲೈಬ್ರರಿ ಪ್ರಾರಂಭಿಸಿದ್ದು, ಮಕ್ಕಳಿಗೆ ಕಲಿಕಾಸಕ್ತಿ ಹೆಚ್ಚಿಸಲು ಒಂದು ಗಂಟೆ ಓದಿದರೆ ಒಂದು ಗಿಫ್ಟ್ ಎಂಬ ವಿನೂತನ ಟಾಸ್ಕ್ ಆರಂಭಿಸಿದ್ದಾರೆ.