ಕಳೆದ ವರ್ಷದಿಂದ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿರುವ ನಟ ಡಾಲಿ ಧನಂಜಯ, ಸದ್ಯ ಒಂದು ತಿಂಗಳು ತಮ್ಮ ಊರಿನಲ್ಲಿದ್ದು ಬೆಂಗಳೂರಿಗೆ ವಾಪಾಸಾಗಿದ್ದಾರೆ. ಅರೇ.. ಲಾಕ್​ಡೌನ್​ ಟೈಮ್​ನಲ್ಲಿ ಡಾಲಿ ಬೆಂಗಳೂರಲ್ಲಿ ಇರಲಿಲ್ವಾ ಅಂತ ಕೇಳಿದ್ರೆ, ಖಂಡಿತ ಇಲ್ಲ. ಅರಸಿಕೆರೆಯ ತಮ್ಮ ಊರಿಗೆ ಹೋಗಿದ್ದ ಧನಂಜಯಗೆ ಕೊರೊನಾ ವಕ್ಕರಿಸಿತ್ತು. ಧನಂಜಯ ಮಾತ್ರವಲ್ಲ, ಒಂದು ತಿಂಗಳ ಸಮಯದಲ್ಲಿ ಧನಂಜಯ ಮನೆಯಲ್ಲಿ 12 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು. ಅಬ್ಬಾ.. ಒಬ್ರಿಗೆ ಬಂದ್ರೇನೆ ಆ ಆತಂಕ ನೋಡೋಕಾಗಲ್ಲ, ಅಂತದ್ರಲ್ಲಿ ಒಂದೇ ಮನೆಯಲ್ಲಿ 12 ಜನಕ್ಕೆ ಒಂದೇ ತಿಂಗಳಲ್ಲಿ ಕೊರೊನಾ ಬಂದಿತ್ತು ಅಂದಾಗ ನಿಜಕ್ಕೂ ಶಾಕ್​ ಆಗುತ್ತೆ.

ಕೇಳೋದಕ್ಕೆ ಕಷ್ಟ ಅನಿಸಿದ್ರೂ ಇದು ನಿಜ. ಸ್ವತಃ ಡಾಲಿ ಧನಂಜಯ ಈ ಬಗ್ಗೆ ನಿನ್ನೆಯಷ್ಟೆ ಲೈವ್​ವೊಂದರಲ್ಲಿ ಹೇಳಿಕೊಂಡಿದ್ದು, ತಾವು ಪಟ್ಟ ಪಾಡನ್ನ ವಿವರಿಸಿದ್ದಾರೆ. ಇದರ ಜೊತೆಗೆ ‘ಎಲ್ಲರೂ ವ್ಯಾಕ್ಸಿನೇಷನ್​ ಹಾಕಿಸಿಕೊಳ್ಳಿ. ನಮ್ಮ ಫ್ಯಾಮಿಲಿಯಲ್ಲಿ 12 ಜನಕ್ಕೂ ವ್ಯಾಕ್ಸಿನೇಷನ್​ ಆಗಿದ್ದ ಕಾರಣ ಅಷ್ಟಾಗಿ ಯಾರಿಗೂ ತೊಂದರೆಯಾಗಿಲ್ಲ’ ಅಂದಿದ್ದಾರೆ.

‘ಒಂದೇ ತಿಂಗಳಲ್ಲಿ ಮನೆಯಲ್ಲಿ 12 ಜನಕ್ಕೆ ಕೊರೊನಾ ಪಾಸಿಟಿವ್​ ಬಂದು ಗೆದ್ದಿದ್ದೇವೆ. ನಮ್ಮ ಮನೆಯಲ್ಲಿ ಎಲ್ಲರೂ ವ್ಯಾಕ್ಸಿನೇಟ್​ ಆಗಿದ್ದ ಕಾರಣ ಅಷ್ಟಾಗಿ ತೊಂದರೆ ಆಗಿಲ್ಲ. ಈ ಕೊರೊನಾ ಬಂದ ಸಮಯದಲ್ಲಿ ನನ್ನ ಫ್ಯಾಮಿಲಿ ಜೊತೆ ಹೆಚ್ಚಿನ ಸಮಯವನ್ನ ಕಳೆಯುವಂತಾಯ್ತು, ಆ ತೃಪ್ತಿ ನನಗಿದೆ. ನಾನು ಮನೆಯಲ್ಲಿದ್ದಾಗ ಮನೆಯವರಿಗೆಲ್ಲಾ ಒಂದು ಧೈರ್ಯ, ಅದೇ ನನಗೆ ಖುಷಿ. ವ್ಯಾಕ್ಸಿನೇಷನ್​ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಎಲ್ಲಾ ಕೆಲಸಗಳು ಶುರು ಮಾಡಬಹುದು, ಶೂಟಿಂಗ್​ ಕೂಡ ಶುರು ಮಾಡಬಹುದು. ಅಗತ್ಯ ಇರುವವರಿಗೆ ನಮ್ಮ ಕೈಲಾದ ಸಹಾಯ ಮಾಡೋಣ. ನನ್ನಿಂದನೂ ಜಾಸ್ತಿ ಏನೂ ಮಾಡೋದಕ್ಕೆ ಆಗಿಲ್ಲ. ತಕ್ಕ ಮಟ್ಟಿಗೆ ಸಹಾಯ ಮಾಡ್ದೆ ಅಷ್ಟೆ’ ಅಂದಿದ್ದಾರೆ ಧನಂಜಯ.

ಅರಸಿಕೆರೆ ಟೌನ್​ಗೆ ಬಂದು ಸಿನಿಮಾ ಡೌನ್​ಲೋಡ್​ ಮಾಡ್ತಿದ್ದೆ

ಧನಂಜಯ ಊರಲ್ಲಿ ನೆಟ್​ವರ್ಕ್​ ಅಷ್ಟಾಗಿ ಚೆನ್ನಾಗಿಲ್ಲ ಅಂದಿದ್ದಾರೆ. ಹಾಗಾದ್ರೆ ಮನೆಯಲ್ಲಿ ಹೇಗೆ ಕಾಲ ಕಳೆದ್ರಿ ಅಂತ ಕೇಳಿದಾಗ, ‘ಹೆಚ್ಚಾಗಿ ಆಡಿಯೋ ಬುಕ್​ಗಳನ್ನ ಕೇಳಿಸಿಕೊಳ್ತಿದ್ದೆ. ಇದನ್ನ ಹೊರತುಪಡಿಸಿ ಬಹಳ ಸಿನಿಮಾಗಳನ್ನ ನೋಡ್ತಿದ್ದೆ. ಆದ್ರೆ ನಮ್ಮ ಊರಲ್ಲಿ ನೆಟ್​ವರ್ಕ್​ ಇಲ್ಲ. ಸೋ.. ಅರಸಿಕೆರೆಗೆ ಬಂದಾಗ ಸಿನಿಮಾಗಳನ್ನ ಡೌನ್​ಲೋಡ್​ ಮಾಡ್ಕೊಂಡು ಊರಿಗೆ ಹೋಗಿ ನೋಡ್ತಿದ್ದೆ.

ಡಾಲಿ ಧನಂಜಯ, ನಟ.

‘ಇನ್ನು ಎರಡನೇ ಅಲೆ ಬಗ್ಗೆ ಯಾರಿಗೂ ಯಾವುದೇ ಐಡಿಯಾ ಇರಲಿಲ್ಲ. ಮೊದಲನೇ ಅಲೆ ಬಂದಾಗ ಚೆನ್ನಾಗೇ ಊರು-ಊರಿಗೆ ಹೋಗಿ ಶೂಟಿಂಗ್​ ಮಾಡ್ಕೊಂಡು ಬಂದಿದ್ದೀನಿ. ಅವಾಗ ಅಷ್ಟಾಗಿ ಅದರ ಬಗ್ಗೆ ಯೋಚಿಸಿಲ್ಲ. ಅಷ್ಟಾಗಿ ಕೋವಿಡ್​ ಸೀರಿಯಸ್​ನೆಸ್​​ ಗೊತ್ತಾಗ್ಲಿಲ್ಲ. ಎರಡನೇ ಅಲೆ ಬಂದಾಗಲೇ ಎಲ್ಲವೂ ಅರ್ಥ ಆಗಿದ್ದು. ಎಲ್ಲರೂ ವ್ಯಾಕ್ಸಿನೇಟ್​ ಆಗಿ ಮುಂದಿನ ವರ್ಷದಿಂದಾದ್ರೂ ಎಲ್ಲರೂ ಕೆಲಸ ಶುರು ಮಾಡೋ ಥರ ಆದ್ರೆ ಅದೇ ಖುಷಿ. ಖಂಡಿತವಾಗ್ಲೂ ಎಲ್ಲರೂ ಜಾಗೃತೆಯಿಂದ ಇರಬೇಕು. ಹಾಗಂತ ನಮಗೆ ಲಾಕ್​ಡೌನ್​ನಲ್ಲೇ ಇರೋದಕ್ಕೆ ಆಗಲ್ಲ. ಎಲ್ಲರೂ ಮುಂಜಾಗ್ರತೆಯಿಂದ ಇದ್ದು, ಸರ್ಕಾರ ಕೂಡ ಮುಂದೆ ಏನಾಗುತ್ತೆ ಅನ್ನೋದನ್ನ ಸ್ಟಡಿ ಮಾಡಿ, ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು, ಜನರನ್ನ ಗೈಡ್​ ಮಾಡಬೇಕು’ ಅನ್ನೋದು ನಟ ಡಾಲಿ ಧನಂಜಯ ಮಾತು.

ವಿಶೇಷ ಬರಹ: ರಕ್ಷಿತಾ, ಫಿಲ್ಮ್​ ಬ್ಯೂರೋ

The post ‘ಒಂದು ತಿಂಗಳಲ್ಲಿ ಮನೆಯಲ್ಲಿ 12 ಜನಕ್ಕೆ ಕೊರೊನಾ ಬಂದು ವಾಸಿಯಾಯ್ತು’- ಡಾಲಿ ಧನಂಜಯ appeared first on News First Kannada.

Source: newsfirstlive.com

Source link