ಒಂದು ನಿಮಿಷದಲ್ಲಿ 37 ಟಂಡೆಮ್​ ಪುಶ್​ ಅಪ್ಸ್​ಗಳನ್ನು ಮಾಡುವ ಮೂಲಕ ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್​ ಪಟ್ಟಿ ಸೇರಿದ ಯುವಕರು | Two young egyptians set the guinnes world record in push ups


ಒಂದು ನಿಮಿಷದಲ್ಲಿ 37 ಟಂಡೆಮ್​ ಪುಶ್​ ಅಪ್ಸ್​ಗಳನ್ನು ಮಾಡುವ ಮೂಲಕ ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್​ ಪಟ್ಟಿ ಸೇರಿದ ಯುವಕರು

ಪುಶ್​ ಅಪ್​ ಮಾಡುತ್ತಿರುವ ಯುವಕರು

ಈಜಿಪ್ಟ್​: ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಪುಶ್​ ಅಪ್ಸ್​​(push ups) ಗಳನ್ನು ಮಾಡುವ  ಮೂಲಕ ಈಜಿಪ್ಟ್​ನ ಇಬ್ಬರು ಯುವಕರು ಗಿನ್ನಿಸ್​ ವರ್ಲ್ಡ್ ರೆಕಾರ್ಡ್​​ (Guinnes World Record) ನಿರ್ಮಿಸಿದ್ದಾರೆ. ಹೌದು ಒಂದು ನಿಮಿಷದಲ್ಲಿ 37 ಟಂಡೆಮ್​ ನಕಲ್​ ಪುಶ್​ ಅಪ್ಸ್ (Tandem Knuckle Push Ups) ​ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈಜಿಪ್ಟ್​ನ ಮೊಹಮ್ಮದ್​ ಮೊಹಮ್ಮದ್​ ಅಯೋಬ್​ ಹಾಗೂ ಮೊಹಮ್ಮ ದ್​ ಅಹೆಮದ್​ ಇಬ್ರಾಹಿಂ ಎನ್ನುವ ಇಬ್ಬರು ಯುವಕರು ಈ ಸಾಧನೆ ಮಾಡಿದ್ದಾರೆ. ಈ ಕುರಿತು ವರ್ಲ್ಡ್​ ಗಿನ್ನಿಸ್​ ರೆಕಾರ್ಡ್​ ಇನ್ಸ್ಟಾಗ್ರಾಮ್​ ಪುಟ 1 ನಿಮಿಷದ ಇವರ ವಿಡಿಯೋವನ್ನು  ಹಂಚಿಕೊಂಡಿದೆ. 2021ರ ಸೆಪ್ಟೆಂಬರ್​ನಲ್ಲಿ  ಈ ಸಾಧನೆ ಮಾಡಿದ್ದರು. ಈಗ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ  ಗಿನ್ನೀಸ್​ ರೆಕಾರ್ಡ್ ಸಂಸ್ಥೆ​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 

ನ್ಯೂಸ್​ 18 ವರದಿ ಪ್ರಕಾರ  ಈ ಹಿಂದೆ ಯುಎಸ್​ನ ಟ್ರವಿಸ್​ ಬ್ರೆವೆರ್​ ಮತ್ತು ಸೀಸರ್​ ಸೊಸಾ ಎನ್ನುವ ಇಬ್ಬರು ಯುವಕರು ಒಂದು ನಿಮಷದಲ್ಲಿ 30 ಟಂಡೆಮ್​ ನಕಲ್​ ಪುಶ್​ ಅಪ್ಸ್ ಮಾಡುವ ಮೂಲಕ ವರ್ಲ್ಡ್​ ಗಿನ್ನಿಸ್​ ದಾಖಲೆ ನಿರ್ಮಿಸಿದ್ದರು. ಇದೀಗ ಈಜಿಪ್ಟ್​ನ ಯುವಕರು ಒಂದು ನಿಮಿಷದಲ್ಲಿ 37 ಟಂಡೆಮ್​ ನಕಲ್​ ಪುಶ್​ ಅಪ್ಸ್ ಮಾಡುವ ಮೂಲಕ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಯುವಕರಿಬ್ಬರೂ ಸ್ವಯಂ ಆಸಕ್ತಿವಹಿಸಿ ಅಭ್ಯಾಸ ಮಾಡಿಕೊಂಡು ನಿರ್ಮಿಸಿದ ದಾಖಲೆಯಾಗಿದೆ.

ವಿಡಿಯೋದಲ್ಲಿ ಇಬ್ಬರು ಯುವಕರು ಒಬ್ಬರ ಬೆನ್ನ ಮೇಲೆ ಒಬ್ಬರು ಕಾಲನ್ನು ಇರಿಸಿಕೊಂಡು ಮುಷ್ಟಿಯನ್ನು ನೆಲಕ್ಕೆ ಇರಿಸಿ ದೇಹವನ್ನು ಪುಶ್​ ಅಪ್ಸ್​ ಮಾಡುತ್ತಾರೆ. ಈ ಪುಷ್​ ಅಪ್ಸ್​ಗಳಿಗೆ ಪೆಕ್ಟರಲ್​ ಸ್ನಾಯುಗಳು, ಟ್ರೈಸ್ಪ್ಸ್,ಡೆಲ್ಟೊಯಿಡ್ಸ್​ಗಳು ದೇಹದಲ್ಲಿ ಅವಶ್ಯಕವಾಗಿರಬೇಕುತ್ತದೆ. ಈ ಪುಶ್​ ಅಪ್ಸ್​ಗಳು ದೇಹದ ಉಳಿದ ಡೆಲ್ಟಾಯಿಡ್​ಗಳು, ಸೆರಾಟಸ್​ ಆಂಟೀರಿಯರ್​ಗಳಿಗೆ ಬಲವನ್ನು ನೀಡುತ್ತದೆ ಎಂದು ವರದಿಯಾಗಿದೆ.

ಈ ಹಿಂದೆ 2021ರ ಜುಲೈನಲ್ಲಿ ಮೊಹಮ್ಮದ ಎಹಮದ್​ ಇಬ್ರಾಂ ಬೆನ್ನಿನ ಮೇಲೆ 9 ಕಜಿ ತೂಕದ ಭಾರವನ್ನು ಹೊತ್ತುಕೊಂಡು ಒಂದು ಕಾಲಿನಲ್ಲಿ 76 ಪುಶ್​ ಅಫ್ಸ್​ಗಳನ್ನು ನಿರ್ಮಿಸಿ ದಾಖಲೆ ನಿರ್ಮಿಸಿದ್ದರು ಎಂದು ಗಿನ್ನಿಸ್​ ವರ್ಲ್ಡ್ ರೆಕಾರ್ಡ್​ ಸಂಸ್ಥೆ ತಿಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *