ಮೈಸೂರು: ವಾರದ ಅಂತರದಲ್ಲಿ ಇಬ್ಬರು ಸಹೋದರರು ಕೊರೊನಾಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಪ್ರಸಾದ್( 31) ರಾಘವೇಂದ್ರ (33) ಮೃತರಾಗಿದ್ದಾರೆ. ಮೈಸೂರಿನ ಬಂಡಿಪಾಳ್ಯ ನಿವಾಸಿಯಾದ ನವೀನ್ ಅವರ ಇಬ್ಬರು ಹಿರಿಯ ಸಹೋದರರು ಒಂದು ವಾರದ ಅಂತರದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.

ಕಳೆದ ವಾರ ನವೀನ್ ಅವರ ಎರಡನೇ ಅಣ್ಣ ಪ್ರಸಾದ್ ಸಾವನ್ನಪ್ಪಿದ್ದರು. ಇಂದು ಮೊದಲನೇ ಅಣ್ಣ ರಾಘವೇಂದ್ರ ಕೊರೊನಾಗೆ ಬಲಿಯಾಗಿದ್ದಾರೆ. ಆಸ್ಪತ್ರೆಯಿಂದ ಕೊನೆ ಕ್ಷಣದಲ್ಲಿ ಪತ್ನಿ ಹಾಗೂ ತಮ್ಮನಿಗೆ ವೀಡಿಯೋ ಕಾಲ್ ಮಾಡಿದ್ದ ರಾಘವೇಂದ್ರ, ನಾನು ಗುಣಮುಖನಾಗಿ ಬರುವೆ ಎಂದು ಹೇಳಿದ್ದರು.

ವೀಡಿಯೋ ಕಾಲ್ ಮಾಡಿದ ಮರು ದಿನವೇ ಸಾವನ್ನಪ್ಪಿದ್ದಾರೆ. ಇಬ್ಬರು ಅಣ್ಣರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಮೃತ ಸಹೋದರನ ಕೊನೆಯ ತಮ್ಮ ನವೀನ್ ಆರೋಪಿಸಿದ್ದಾರೆ. ಇಬ್ಬರು ಸಹೋದರರನ್ನುಕೇದುಕೊಂಡು ಕಣ್ಣೀರು ಹಾಕಿದ್ದಾರೆ.

The post ಒಂದು ವಾರದ ಅಂತರದಲ್ಲಿ ಅಣ್ಣ, ತಮ್ಮ ಕೊರೊನಾಗೆ ಬಲಿ appeared first on Public TV.

Source: publictv.in

Source link