ಇತ್ತೀಚೆಗಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸೋಲಿಗಿಂತಲೂ ಭಾರೀ ಸದ್ದು ಮಾಡಿದ್ದು ಬಿಜೆಪಿ ಶಾಸಕಿ ಚಂದನಾ ಬೌರಿಯವರ ಗೆಲುವು. ಚುನಾವಣೆ ಗೆದ್ದ ಮೊದಲ ದಿನದಿಂದಲೂ ಸದಾ ಸುದ್ದಿಯಲ್ಲಿರುವ ಶೌರಿ ಬೌರಿ ಅವರನ್ನು ಕಂಡರೆ ಕ್ಷೇತ್ರದ ಜನರಿಗೆ ಅಪಾರವಾದ ಗೌರವ ಮತ್ತು ಪ್ರೀತಿ. ಇದಕ್ಕೆ ಕಾರಣ ಚಂದನ ಒಬ್ಬ ಕೂಲಿ ಕಾರ್ಮಿಕನ ಪತ್ನಿ.

30 ವರ್ಷದ ಚಂದನಾ ಸಾಲ್ಟೋರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಟಿಎಂಸಿ ನಾಯಕ ಸಂತೋಷ್ ಕುಮಾರ್ ಮೊಂಡಲ್ ಎಂಬುವರ ವಿರುದ್ಧ 4 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಜನರು ಈಕೆಯನ್ನು ಗೆಲ್ಲಿಸಿದ್ದಕ್ಕೂ ಸಾರ್ಥಕ ಎಂಬಂತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸರಳ ಜನಪ್ರಿಯ ಶಾಸಕಿ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಕಳೆದೊಂದು ವಾರದಿಂದ ಶಾಸಕಿ ಚಂದನಾ ತಮ್ಮ ಮಗುವನ್ನು ಬಿಟ್ಟು ವಿಧಾನಸಭಾ ಕಲಾಪಕ್ಕಾಗಿ ಕೊಲ್ಕತ್ತಾದಲ್ಲಿ ಬೀಡುಬಿಟ್ಟಿದ್ದಾರೆ. ಪ್ರತೀ ದಿನ ಹೊಸ ಶಾಸಕರಿಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ತರಗತಿಗೆ ಚಾಚೂ ತಪ್ಪದೆ ಅಟೆಂಡ್​ ಮಾಡುತ್ತಾರೆ. ತಮ್ಮ ಕ್ಷೇತ್ರದಲ್ಲೂ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಶಾಸಕಿಗೂ ಮಗನದ್ದೇ ಚಿಂತೆ.

ಹೌದು, ಎಷ್ಟೇ ಬ್ಯುಸಿಯಿದ್ದರೂ ಚಂದನಾ ತಮ್ಮ ಮಗುವನ್ನು ನೋಡದೇ ಮಾತ್ರ ಇರಲಾಗುವುದಿಲ್ಲ. ಕಳೆದ ಒಂದು ವಾರದಿಂದ ತನ್ನ ಕೂಸನ್ನು ನೋಡದೆ ಚಂದನಾ ವಿಲವಿಲ ಒದ್ದಾಡಿಬಿಟ್ಟಿದ್ದಾರೆ. ಕಲಾಪದಿಂದ ಬಂದ ಕೂಡಲೇ ಚಂದನಾ ತಮ್ಮ ಮಗುವನ್ನು ಎತ್ತಿ ಅಪ್ಪಿಕೊಂಡು ಮುದ್ದಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತಾಡಿರುವ ಚಂದನಾ, ನನ್ನ ಮಗುವನ್ನು ನೋಡಿದ ಕೂಡಲೇ ಹೋದ ಜೀವ ವಾಪಸ್ಸು ಬಂತು. ಇವನು ನನ್ನ ಪ್ರಾಣ, ಯಾವತ್ತಿಗೂ ನನ್ನ ಮಗನನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಚಂದನ. ಈ ತಾಯಿ ಪ್ರೀತಿಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಂದನಾರ ಪತಿ ಕಲ್ಲು ಕೆಲಸ ಮಾಡುವ ದಿನಗೂಲಿ ನೌಕರ. ಚಂದನಾ ಮೂರು ಮಕ್ಕಳ ತಾಯಿ, ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ.

The post ಒಂದು ವಾರ ಮುದ್ದಿನ ಮಗನನ್ನ ನೋಡದೇ ಒದ್ದಾಡಿದ ಶಾಸಕಿ ಚಂದನಾ ಬೌರಿಯ ಎಮೋಷನಲ್ ಕಥೆ appeared first on News First Kannada.

Source: newsfirstlive.com

Source link