ಸಾಮಾನ್ಯವಾಗಿ ಒಂದು ವಿಚಾರ ಅಭಿಮಾನಿಗಳ ತಲೆಯಲ್ಲಿ ಯಾವಾಗಲೂ ಓಡಾಡುತ್ತಲೇ ಇರುತ್ತದೆ. ಅದೇನಂದ್ರೆ ನಮ್ಮ ನೆಚ್ಚಿನ ನಟರು ಒಂದು ಸಿನಿಮಾಗೆ ಎಷ್ಟು ಸಂಬಳ ಅಥವಾ ಸಂಭಾವನೆ ಪಡೆಯುತ್ತಾರೆ ಎಂದು. ಈ ವಿಚಾರವನ್ನು ಯಾವ ನಟರೂ ಸ್ಪಷ್ಟವಾಗಿ ಹೇಳುವುದಿಲ್ಲ. ಎಲ್ಲವೂ ಒಂದು ಅಂದಾಜಿನಲ್ಲಿ ಹೇಳಲಾಗುತ್ತದೆ.
ಒಂದು ಕಾಲದಲ್ಲಿ ಸಾವಿರ ಲೆಕ್ಕದಲ್ಲಿ ಇದ್ದ ಸಂಭಾವನೆ ಈಗ ಕೋಟಿ ಕೋಟಿ ಲೆಕ್ಕದಲ್ಲಿ ಸಾಗುತ್ತಿದೆ. ಆದರೆ ಕೆಲ ಸ್ಟಾರ್ ಹೀರೋಗಳು ಇನ್ನು ಒಂದು ಹೆಜ್ಜೆ ಮುಂದೆ, ಹೋಗಿ ಪರ್ಸೆಂಟೇಜ್ ಲೆಕ್ಕದಲ್ಲಿ ತಮ್ಮ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಈ ಪರ್ಸೆಂಟೇಜ್ ವ್ಯವಹಾರ ಬಾಲಿವುಡ್ನಲ್ಲೇ ಹೆಚ್ಚು. ಸದ್ಯ ನಾವು ಬಾಲಿವುಡ್ ವಿಚಾರವನ್ನು ತಿಳ್ಕೊಂಡು ಬರೋದಾದರೆ , ಪ್ರತಿಯೊಬ್ಬ ನಟನಿಗೂ ಅವರ ಕ್ರೇಜ್ಗೆ ಅನುಗುಣವಾಗಿ ಸಂಭಾವನೆ ನೀಡಲಾಗುತ್ತದೆ.
ಶಾರುಖ್ ಖಾನ್ ಮತ್ತು ಅಮೀರ್ ಕಳೆದ 10 ವರ್ಷಗಳಿಂದ ಪರ್ಸೆಂಟೇಜ್ ಸೂತ್ರವನ್ನು ಅನುಸರಿಸುತ್ತಿದ್ದು, ಮಾಹಿತಿಗಳ ಪ್ರಕಾರ, ತಮ್ಮ ಚಿತ್ರದ ಒಟ್ಟು ಲಾಭದಲ್ಲಿ ಅಮೀರ್ 75% ಮತ್ತು ಶಾರುಖ್ 60% ಪರ್ಸೆಂಟ್ ತೆಗೆದುಕೊಳ್ಳುತ್ತಾರೆ ಇದೇ ಅವರ ಸಂಭಾವನೆ ಕೂಡ. ಪರ್ಸೆಟೇಜ್ ಲೆಕ್ಕ ತೆಗೆದುಕೊಂಡರೂ ಅವರ ಸಂಭಾವನೆ 100 ಕೋಟಿ ಗಡಿ ದಾಟುತ್ತದೆ.
ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್, 2016 ರಲ್ಲಿ ರಿಲೀಸ್ ಆದ ‘ಸುಲ್ತಾನ್’ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದ ಮೊದಲ ಬಾಲಿವುಡ್ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ನಂತರ 2017 ರಲ್ಲಿ ರಿಲೀಸ್ ಆದ ‘ಟೈಗರ್ ಜಿಂದಾ ಹೈ’ ಚಿತ್ರಕ್ಕೆ 130 ಕೋಟಿ ಸಂಭಾವನೆ ಪಡೆದಿದ್ದಾರೆ. ಇದೆಲ್ಲವೂ ಪಾಲುಗಾರಿಕೆಯಲ್ಲಿ ಗಳಿಸಿದ ಸಂಭಾವನೆ.
ಇನ್ನೂ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಇದೇ ಸೂತ್ರವನ್ನು ಅನುಸರಿಸುತ್ತಾರೆ. ಅವರ ಮುಂದಿನ ಸಿನಿಮಾಗಳಿಗೆ 135 ಕೋಟಿ ಸಂಭಾವನೆ ಪಿಕ್ಸ್ ಮಾಡಿದ್ದಾರಂತೆ. ಈ ಲೆಕ್ಕಾಚಾರ ನೋಡಿದ್ರೆ ಸಲ್ಮಾನ್ ಖಾನ್ ಎಲ್ಲಾ ಖಾನ್ಗಳಿಗಿಂತ ಅತೀ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ಖಾನ್ ಎಂದು ಸ್ಪಷ್ಟನೆ ಆಗುತ್ತದೆ.
ಇದಿಷ್ಟು ಬಾಲಿವುಡ್ನ ಸ್ಟಾರ್ ಹೀರೋಗಳ ಕಥೆ ಆದರೆ ಬಾಲಿವುಡ್ ಯುವ ಮತ್ತು ಸ್ಟಾರ್ ಹೀರೋಗಳಿಗೆ ಬೇರೆಯೇ ಸಂಭಾವನೆ ಇದೆ. ಹೃತಿಕ್ ರೋಷನ್ 70 ಕೋಟಿ, ರಣಬೀರ್ ಕಪೂರ್ 70 ಕೋಟಿ, ರಣವೀರ್ ಸಿಂಗ್ 50 ಕೋಟಿ, ಟೈಗರ್ ಶ್ರಾಫ್ 50 ಕೋಟಿ, ವರುಣ್ ಧವನ್ 35 ಕೋಟಿ, ಶಾಹಿದ್ ಕಪೂರ್ 30 ಕೋಟಿ ಮತ್ತು ಜಾನ್ ಅಬ್ರಹಾಂ 20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನೂ ಕೆಜಿಎಫ್ ನಂತರ ಸ್ಯಾಂಡಲ್ವುಡ್ನಲ್ಲೂ ಕೋಟಿ ಸಂಭಾವನೆ ಪ್ರಾರಂಭವಾಗಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಸಂಭಾವನೆ ಎಷ್ಟು ಅಂತಾ ಗೊತ್ತಿಲ್ಲ.