ಒಂದು ಸಿನಿಮಾಗೆ ಸಮಂತಾ ಪಡೆಯುವ ಸಂಭಾವನೆ ಇಷ್ಟೊಂದಾ; ಅಚ್ಚರಿ ಹೊರ ಹಾಕಿದ ಫ್ಯಾನ್ಸ್​ | Samantha Akkineni Hikes Remuneration demanding 3 crore For movie


ಒಂದು ಸಿನಿಮಾಗೆ ಸಮಂತಾ ಪಡೆಯುವ ಸಂಭಾವನೆ ಇಷ್ಟೊಂದಾ; ಅಚ್ಚರಿ ಹೊರ ಹಾಕಿದ ಫ್ಯಾನ್ಸ್​

ಸಮಂತಾ ಅಕ್ಕಿನೇನಿ

ಸಮಂತಾ ಅಕ್ಕಿನೇನಿ ಅವರು ವಿಚ್ಛೇದನದ ನಂತರ ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಶ್ವಾನಗಳನ್ನು ಸಾಕಿ, ಅದರ ಆರೈಕೆಯಲ್ಲಿ ಸಮಯ ಕಳೆಯುತ್ತಾ ನೋವನ್ನು ಮರೆಯುತ್ತಿದ್ದಾರೆ. ಇದರ ಜತೆ ರಿಷಿಕೇಷ, ದುಬೈ ಸೇರಿ ನಾನಾ ಕಡೆ ಪ್ರವಾಸ ತೆರಳಿದ್ದಾರೆ. ಈ ಮಧ್ಯೆ ಸಮಂತಾ ಬಗ್ಗೆ ಹೊಸ ಗಾಸಿಪ್​ ಒಂದು ಹುಟ್ಟಿಕೊಂಡಿದೆ. ಕೆಲ ಖ್ಯಾತ ನಿರ್ದೇಶಕರು ಸಮಂತಾ ಜತೆ ಕೆಲಸ ಮಾಡೋಕೆ ಮುಂದೆ ಬಂದಿದ್ದರು. ಆದರೆ, ಅವರು ಬೇಡಿಕೆ ಇಟ್ಟ ಸಂಭಾವನೆ ಕೇಳಿ ನಿರ್ಮಾಪಕರು ನೋ ಎಂದಿದ್ದಾರೆ ಎನ್ನಲಾಗುತ್ತಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ತೆರೆ ಕಂಡ ನಂತರದಲ್ಲಿ ಸಮಂತಾ ಬೇಡಿಕೆ ಹೆಚ್ಚಿದೆ. ಎಲ್ಲರೂ ಸಮಂತಾ ಕಾಲ್​ಶೀಟ್​ ಪಡೆಯೋಕೆ ಮುಂದೆ ಬಂದಿದ್ದಾರೆ. ಸಮಂತಾ ಮತ್ತೆ ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಳ್ಳೋಕೆ ರೆಡಿ ಆಗಿದ್ದಾರೆ. ಆದರೆ, ಅವರು ದೊಡ್ಡ ಮೊತ್ತದ ಬೇಡಿಕೆ ಇಡುತ್ತಿದ್ದಾರೆ. ಇದು ಸಹಜವಾಗಿಯೇ ನಿರ್ಮಾಪಕರನ್ನು ಚಿಂತೆಗೀಡು ಮಾಡಿದೆ.

ಸಮಂತಾ ಅವರು ದಸರಾಗೆ ದೊಡ್ಡ ಘೋಷಣೆ ಒಂದನ್ನು ಮಾಡಿದ್ದರು. ‘ಖಿಲಾಡಿ’ ಸಿನಿಮಾ ನಿರ್ಮಾಪಕರು ಸಮಂತಾ ಜತೆ ಸಿನಿಮಾ ಘೋಷಣೆ ಮಾಡಿದರೆ, ತೆಲುಗಿನ ಶಿವಲೆಂಕಾ ಕೃಷ್ಣ ಪ್ರಸಾದ್​ ಅವರು ಸಮಂತಾ ಜತೆ ಸಿನಿಮಾ ಮಾಡುವುದಾಗಿ ಅನೌನ್ಸ್​ ಮಾಡಿದ್ದರು. ಈ ಎರಡೂ ಸಿನಿಮಾ ತೆಲುಗು ಹಾಗೂ ತಮಿಳಲ್ಲಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ವಿಚಾರ ಹೊರ ಬಿದ್ದಿಲ್ಲ. ಆದರೆ, ನಾನಿ ನಟಿಸುತ್ತಿರುವ ತೆಲುಗಿನ ‘ದಸರಾ’ ಚಿತ್ರಕ್ಕೆ ಸಮಂತಾ 3 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನುತ್ತಿವೆ ಮೂಲಗಳು.

ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಸೇರಿ ಅನೇಕ ಸ್ಟಾರ್​ ಹೀರೋಯಿನ್​ಗಳು ಒಂದು ಸಿನಿಮಾಗೆ 2-2.5 ಕೋಟಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಿರುವಾಗ ಸಮಂತಾ ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟರೆ ಅದನ್ನು ಒಪ್ಪಿಕೊಳ್ಳೋದು ಹೇಗೆ ಎನ್ನುವ ಚಿಂತೆ ನಿರ್ಮಾಪಕರನ್ನು ಕಾಡುತ್ತಿದೆ. ಹೀರೋಯಿನ್​ಗೆ ಇಷ್ಟು ಸಂಭಾವನೆ ನೀಡಿದರೆ ಸಿನಿಮಾದ ಬಜೆಟ್​ ಕೂಡ ಹೆಚ್ಚಲಿದೆ. ಈ ಬಗ್ಗೆಯೂ ನಿರ್ಮಾಪಕರು ಆಲೋಚಿಸುತ್ತಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ ನೆನಪನ್ನು ಸಂಪೂರ್ಣವಾಗಿ ಡಿಲೀಟ್​ ಮಾಡಿದ ಸಮಂತಾ; ಇಲ್ಲಿದೆ ಸಾಕ್ಷ್ಯ

Samantha: ‘ನಾನು ಪರ್ಫೆಕ್ಟ್​​ ಅಲ್ಲ’; ತಾಯಿ ಹೇಳಿದ ಮಾತುಗಳನ್ನು ಡಿವೋರ್ಸ್​ ಬಳಿಕ ಹಂಚಿಕೊಂಡ ಸಮಂತಾ

TV9 Kannada


Leave a Reply

Your email address will not be published. Required fields are marked *