ತಿರುವನಂತಪುರಂ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ದೇಶದ ಜನ ಹೋರಾಡುತ್ತಿದ್ದು, ಸದ್ಯ ಲಸಿಕೆಯ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಕೇರಳ ಮಾಡೆಲ್ ಲಸಿಕಾ ಅಭಿಯಾನ ಆರಂಭವಾಗಿದ್ದು, ಒಂದು ಹನಿಯೂ ವೇಸ್ಟ್ ಮಾಡಲಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇರಳಕ್ಕೆ ಕೇಂದ್ರ ಸರ್ಕಾರ 73,38,860 ಡೋಸ್ ಲಸಿಕೆ ನೀಡಿದೆ. ಇದರಲ್ಲಿ 74,26,164 ಡೋಸ್ ಲಸಿಕೆಯನ್ನು ಕೇರಳ ಜನರಿಗೆ ನೀಡಲಾಗಿದೆ ಎಂದಿದ್ದಾರೆ.

ಒಂದು ವ್ಯಾಕ್ಸಿನ್ ವೈಲ್‍ನಲ್ಲಿ 10 ಡೋಸ್ ಇರುತ್ತದೆ. ಆದರೆ ವೇಸ್ಟೇಜ್ ಫ್ಯಾಕ್ಟರ್ ಎಂದು ಒಂದು ಡೋಸ್‍ನಷ್ಟು ಜಾಸ್ತಿ ಹಾಕಿರುತ್ತಾರೆ. ಇದಕ್ಕೆ ರಾಜ್ಯದ ಆರೋಗ್ಯ ಇಲಾಖೆಯೇ ಕಾರಣ. ನರ್ಸ್‍ಗಳ ಸಹಾಯದಿಂದ ಮಾತ್ರ ಈ ಸಾಧನೆ ಸಾಧ್ಯವಾಯಿತು. ಸಂಕಷ್ಟ ಸಮಯದಲ್ಲಿ ಆರೋಗ್ಯ ಇಲಾಖೆಯ ಈ ಕೆಲಸ ಅಭಿನಂದನಾರ್ಹ ಎಂದು ಸಿಎಂ ತಿಳಿಸಿದ್ದಾರೆ.

The post ಒಂದು ಹನಿಯೂ ವೇಸ್ಟ್ ಮಾಡಲಿಲ್ಲ- ಇದು ಕೇರಳ ಮಾಡೆಲ್ ಲಸಿಕಾ ಅಭಿಯಾನ appeared first on Public TV.

Source: publictv.in

Source link