ಸ್ಟಾರ್​ ನಿರ್ದೇಶಕ ರಾಜಮೌಳಿ ನಿರ್ದೇಶನದ RRR ಸಿನಿಮಾದ ಶೂಟಿಂಗ್​ ಬಹುತೇಕ ಕಂಪ್ಲೀಟ್​ ಆಗಿದೆ. ಇನ್ನೇನಿದ್ರೂ ಎರಡು ಹಾಡುಗಳ ಚಿತ್ರೀಕರಣ ಹಾಗೂ 10 ದಿನಗಳ ಪ್ಯಾಚ್​ ವರ್ಕ್​​ ಮುಗಿಸಿದರೆ ಶೂಟಿಂಗ್​ ಕಂಪ್ಲೀಟ್​. ಆದ್ರೆ ಸದ್ಯ ಬಂದಿರೋ ವಿಚಾರ ಕೇಳಿದ್ರೆ ನೀವು ಕೂಡ ಒಂದು ಕ್ಷಣ ಬೆಚ್ಚಿ ಬೀಳ್ತೀರ. ಹೌದು.. ಶೂಟ್​​ ಮಾಡಲು ಉಳಿದಿರುವ ಎರಡು ಹಾಡುಗಳ ಪೈಕಿ ಒಂದು ಹಾಡನ್ನ ಬರೋಬ್ಬರಿ ಒಂದು ತಿಂಗಳ ಕಾಲ ಚಿತ್ರೀಕರಿಸಲಿದ್ದಾರಂತೆ ನಿರ್ದೇಶಕ ರಾಜಮೌಳಿ.

ಅರೇ.. ಇದೇನಿದು..? ಒಂದು ತಿಂಗಳಲ್ಲಿ ಇಡೀ ಸಿನಿಮಾದ ಶೂಟಿಂಗ್​ ಮುಗಿಸುವ ಈ ಕಾಲದಲ್ಲಿ ರಾಜಮೌಳಿ ಬರೀ ಒಂದು ಹಾಡಿಗಾಗಿ ಒಂದು ತಿಂಗಳು ಮೀಸಲಾಗಿ ಇಡುತ್ತಿದ್ದಾರಲ್ಲ ಅಂತ ನಿಮಗೂ ಅನಿಸಿರಬಹುದು. ಆದ್ರೆ ಇದು ರಾಜಮೌಳಿಯ ದಿ ನ್ಯೂ ಟೆಕ್ನಿಕ್​. ಈಗಾಗಲೇ ಸಿನಿಮಾ ಬಹಳ ಸಮಯವನ್ನ ತೆಗೆದುಕೊಂಡಿದೆ.

ಇನ್ನೂ ಎರಡು ತಿಂಗಳ ಕಾಲ ಶೂಟಿಂಗ್​ ನಡೆಸಿದ್ರೆ ಎಲ್ಲವೂ ಮುಕ್ತಾಯವಾದಂತೆ. ಎಲ್ಲವೂ ಪರ್ಫೆಕ್ಟ್​​ ಆಗಬೇಕು ಅನ್ನುವವರಿಗೆ ಒಂದು ತಿಂಗಳು ಯಾವ ಲೆಕ್ಕ? ರಾಜಮೌಳಿ ಇದೇ ಗುಂಪಿಗೆ ಸೇರುತ್ತಾರೆ. ಅಂದ್ಹಾಗೇ ಈ ಒಂದು ತಿಂಗಳ ಹಾಡಿನಲ್ಲಿ ನಟ ರಾಮ್​ ಚರಣ್​ ಹಾಗೂ ಜೂನಿಯರ್​​ NTR ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ.

ಇನ್ನು ಮತ್ತೊಂದು ಹಾಡಿನ ಚಿತ್ರೀಕರಣವೂ ದೀರ್ಘವಾಗಿಯೇ ಇರಲಿದೆ. ಆದ್ರೆ ಒಂದು ತಿಂಗಳ ಸಮಯವನ್ನ ತೆಗೆದುಕೊಳ್ಳುವುದಿಲ್ಲ. ಈ ಹಾಡಿನಲ್ಲಿ ರಾಮ್​ ಚರಣ್​ ಹಾಗೂ ನಟಿ ಆಲಿಯಾ ಭಟ್​​ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ.

ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ RRR ಸಿನಿಮಾ ತೆರೆ ಕಾಣಲಿದೆ. ಇದಲ್ಲದೇ, ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೂ ಡಬ್ ಆಗಲಿದೆ. ಅಕ್ಟೋಬರ್​ 13ರಂದು RRR ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಡೇಟ್​ ಕೂಡ ಫಿಕ್ಸ್​​ ಮಾಡಿದೆ. ಆದ್ರೆ ಕೊರೊನಾ ಅಬ್ಬರದಲ್ಲಿ ಈ ರಿಲೀಸ್​​ ತಯಾರಿ ಯಶಸ್ವಿಯಾಗುತ್ತಾ ಇಲ್ಲ, ಇದಕ್ಕೆ ಬ್ರೇಕ್​ ಬೀಳುತ್ತಾ ನೋಡಬೇಕು.

The post ಒಂದು ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ ಒಂದು ತಿಂಗಳು; ಏನಿದು ‘ರಾಜ’ಮೌಳಿ ರಹಸ್ಯ? appeared first on News First Kannada.

Source: newsfirstlive.com

Source link