ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿಬ್ಬಂದಿ ಹಾಗೂ ಶಿಕ್ಷಕರ ಕರ್ತವ್ಯದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಿಬ್ಬಂದಿ ಹಾಗೂ ಶಿಕ್ಷಕರ ಕರ್ತವ್ಯ ಹಾಗೂ ಜವಬ್ದಾರಿಗಳು ಏನೇನು ಎಂಬುದನ್ನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜುಲೈ ಮೂರನೇ ವಾರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತದೆ ಎನ್ನಲಾಗಿದ್ದು ಈ ಬೆನ್ನಲ್ಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಪರೀಕ್ಷಾ ಕೇಂದ್ರ ರಚನೆ ಹೇಗಿರಬೇಕು..?

  • ವಿದ್ಯಾರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರವಿರಬೇಕು.
  • ಒಂದು ಡೆಸ್ಕ್​ನಲ್ಲಿ ಓರ್ವ ವಿದ್ಯಾರ್ಥಿ ಮಾತ್ರ ಕೂರುವಂತೆ ವ್ಯವಸ್ಥೆ ಮಾಡಬೇಕು.
  • ಒಂದು ಕೊಠಡಿಗೆ 12 ವಿದ್ಯಾರ್ಥಿಗಳನ್ನಷ್ಟೇ ಕೂರಿಸಬೇಕು.
  • ಪರೀಕ್ಷಾ ಕೇಂದ್ರ ರಚನೆ 100 ಜನಕ್ಕೆ ಸಿಮಿತವಾಗಿರುವಂತೆ ಇರಬೇಕು.
  • ಪರೀಕ್ಷಾ ಕೇಂದ್ರ ರಚನೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆಯಾಗಬಾರದು

ಇದಷ್ಟೇ ಅಲ್ಲದೇ ಜಿಲ್ಲಾ ನಿರ್ದೇಶಕರು ಹಾಗೂ ಉಪನಿರ್ದೇಶಕರ ಜವಾಬ್ದಾರಿಗಳು ಏನೇನು.. ಪರೀಕ್ಷಾ ಸಮಯ ಹಾಗೂ ಬೆಲ್ ಮಾಡುವುದು ಹೇಗೆ..? ಪರೀಕ್ಷಾ ಬಂಡಲ್ ಸಿದ್ಧತೆ ಹಾಗೂ ಗೌಪ್ಯತೆ ಹೇಗೆ ಕಾಪಾಡಬೇಕು..? ಪರೀಕ್ಷಾ ಕೇಂದ್ರಗಳ ರಚನೆ ಮತ್ತು ವಿಗಂಡನೆ ಹೇಗಿರಬೇಕು..? ಜಿಲ್ಲಾ ಮಟ್ಟದಲ್ಲಿ ನಿರ್ದೇಶಕರು ಪರೀಕ್ಷೆಗೆ ಮಾಡಿಕೊಳ್ಳಬೇಕಾದ ಸಿದ್ಧತೆ ಏನು.? ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಸಿದ್ಧತೆ ಹೇಗಿರಬೇಕು..? ಅಲ್ಲದೇ ಕ್ಷೇತ್ರ ಶಿಕ್ಷಣಧಿಕಾರಿಗಳ ಪರೀಕ್ಷಾ ಜವಾಬ್ದಾರಿಗಳನ್ನ ವಿಗಂಡಿಸಿ ಇಲಾಖೆ ಸುತ್ತೋಲೆ ಹೊರಡಿಸಿದೆ.

The post ಒಂದು ಹಾಲ್​ನಲ್ಲಿ 12 ವಿದ್ಯಾರ್ಥಿಗಳಿಗಷ್ಟೇ ಅವಕಾಶ: SSLC ಪರೀಕ್ಷೆ ಹೇಗೆ ನಡೆಯಲಿದೆ..? appeared first on News First Kannada.

Source: newsfirstlive.com

Source link