ಒಂದೂವರೆ ಟನ್​ ಕೋಳಿಗಳ ತುಂಬಿದ್ದ ಕ್ಯಾಂಟರ್​ ಪಲ್ಟಿ; ಎಲ್ಲವೂ ಸಾವು


ಮಂಡ್ಯ: ಚಲಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ ಬರೋಬ್ಬರಿ ಒಂದೂವರೆ ಟನ್ ಕೋಳಿ ಸಾವನ್ನಪ್ಪಿದ ಭಿಕರ ಘಟನೆ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಬಳಿ ನಡೆದಿದೆ.

ರಾಮಚಂದ್ರು ಎಂಬವವರಿಗೆ ಸೇರಿದ ಕೋಳಿ ಫಾರಂನಿಂದ ಸುಗುಣ ಚಿಕನ್ ಕಂಪನಿಗೆ ಸೇರಿದ ಕ್ಯಾಂಟರ್ ಕೋಳಿ ತುಂಬಿಸಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಈ ವೇಳೆ ಚಿಕ್ಕಕೊಪ್ಪಲು ಗ್ರಾಮದ ಬಳಿ ಹೊರಟಿದ್ದಾಗ ರಸ್ತೆ ಕಿರಿದಾದ ಕಾರಣಕ್ಕೆ ಟ್ಯಾಂಕರ್​ ಪಲ್ಟಿಯಾಗಿದೆ ಎನ್ನಲಾಗಿದೆ.

 

ಈ ಘಟನೆಯಿಂದ ಕೋಳಿ ಸಾಕಣಿಕೆದಾರ ಮತ್ತು ಸುಗುಣ ಕಂಪನಿಯವರಿಗೆ ಲಕ್ಷಾಂತರ ರೀಪಾಯಿ ನಷ್ಟವಾಗಿದೆ. ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಒಂದೂವರೆ ಟನ್​ ಕೋಳಿಗಳ ತುಂಬಿದ್ದ ಕ್ಯಾಂಟರ್​ ಪಲ್ಟಿ; ಎಲ್ಲವೂ ಸಾವು appeared first on News First Kannada.

News First Live Kannada


Leave a Reply

Your email address will not be published. Required fields are marked *