ವಿಜಯನಗರ: ಕೊರೊನಾ ನಿಯಮ ಸಡಿಲಿಕೆಯಾದ ಹಿನ್ನೆಲೆ ಇಂದಿನಿಂದ ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ.

ಕೊರೊನಾ ಭೀತಿಯ ಹಿನ್ನೆಲೆ ಪುರಾತತ್ವ ಇಲಾಖೆ ಹಂಪಿ ಸೇರಿದಂತೆ ದೇಶದ ಹಲವು ಸ್ಮಾರಕ ಹಾಗೂ ಐತಿಹಾಸಿಕ ಸ್ಥಳಗಳನ್ನ ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಇದೀಗ ಒಂದೂವರೆ ತಿಂಗಳ ಬಳಿಕ ಕೊರೊನಾ ಕಂಟ್ರೋಲ್ ಆದ ಕಾರಣ ಅಧಿಕಾರಿಗಳು ಹಂಪಿ ಭೇಟಿಗೆ ಅವಕಾಶ ನೀಡಿದ್ದಾರೆ.

ಕೊರೊನಾ ನಿಯಮ ಪಾಲಿಸಿ ಹಂಪಿ ಸ್ಮಾರಕಗಳ ವೀಕ್ಷಣೆ ಮಾಡಬಹುದು. ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡೋ ಕಮಲ್ ಮಹಾಲ್, ವಿಜಯವಿಠಲ, ಕಮಲಾಪುರ ಮ್ಯೂಸಿಯಂ , ಬಳ್ಳಾರಿ ಕೋಟೆ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ನ್ಯೂಸ್ ಫಸ್ಟ್‌ಗೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿ ಕಾಳಿಮುತ್ತು ಮಾಹಿತಿ ನೀಡಿದ್ದಾರೆ.

The post ಒಂದೂವರೆ ತಿಂಗಳ ಬಳಿಕ ಇಂದಿನಿಂದ ವಿಶ್ವವಿಖ್ಯಾತ ಹಂಪಿ ಪ್ರವಾಸಿಗರಿಗೆ ಓಪನ್ appeared first on News First Kannada.

Source: newsfirstlive.com

Source link