ಒಂದೆಡೆ ಸೇರಿದ ಆಮಿರ್, ಸಲ್ಮಾನ್ ಹಾಗೂ ಶಾರುಖ್ ಖಾನ್; ಮುಂಜಾನೆ ನಾಲ್ಕು ಗಂಟೆವರೆಗೆ ಪಾರ್ಟಿ | Salman Khan Shah Rukh Khan Aamir Khan Party Together In Galaxy apartment


ಸೆಲೆಬ್ರಿಟಿಗಳ ಮನೆಯಲ್ಲಿ ಆಗಾಗ ಪಾರ್ಟಿ ನಡೆಯುತ್ತಿರುತ್ತದೆ. ಆದರೆ, ಈ ವಿಚಾರ ಗುಟ್ಟಾಗಿ ಇಡಲಾಗುತ್ತದೆ. ಈಗ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿ ವಿಚಾರ ಲೀಕ್ ಆಗಿದೆ.

ಒಂದೆಡೆ ಸೇರಿದ ಆಮಿರ್, ಸಲ್ಮಾನ್ ಹಾಗೂ ಶಾರುಖ್ ಖಾನ್; ಮುಂಜಾನೆ ನಾಲ್ಕು ಗಂಟೆವರೆಗೆ ಪಾರ್ಟಿ

ಶಾರುಖ್​, ಶಾರುಖ್​, ಆಮಿರ್ ಖಾನ್

ಆಮಿರ್ ಖಾನ್, ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ ಬಾಲಿವುಡ್​ನ ಸಕ್ಸಸ್​ಫುಲ್ ಹೀರೋಗಳು. ಇವರ ಮಧ್ಯೆ ಆಗಾಗ ಭಿನ್ನಾಭಿಪ್ರಾಯ ಬಂದು ಒಬ್ಬರ ಮುಖ ಒಬ್ಬರು ನೋಡಿಕೊಳ್ಳದೇ ಇರುವ ಪರಿಸ್ಥಿತಿ ಬಂದಿದ್ದೂ ಇದೆ. ಆದರೆ, ಈಗ ಕಾಲ ಬದಲಾಗಿದೆ. ಮೂವರ ಮಧ್ಯೆ ಅನ್ಯೋನ್ಯತೆ ಇದೆ. ಇತ್ತೀಚೆಗೆ ಈ ಮೂವರು ಒಂದೆಡೆ ಸೇರಿದ್ದಾರೆ. ಒಟ್ಟಾಗಿ ಮೂವರು ಪಾರ್ಟಿ ಮಾಡಿದ್ದಾರೆ. ಮುಂಜಾನೆ ನಾಲ್ಕು ಗಂಟೆವರೆಗೆ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ.

ಸೆಲೆಬ್ರಿಟಿಗಳ ಮನೆಯಲ್ಲಿ ಆಗಾಗ ಪಾರ್ಟಿ ನಡೆಯುತ್ತಿರುತ್ತದೆ. ಆದರೆ, ಈ ವಿಚಾರ ಗುಟ್ಟಾಗಿ ಇಡಲಾಗುತ್ತದೆ. ಈಗ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿ ವಿಚಾರ ಲೀಕ್ ಆಗಿದೆ. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದಲ್ಲಿರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಈ ಮೂವರು ಸೇರಿದ್ದಾರೆ. ಮೇ 16ರಂದು ಈ ಗೆಟ್​​ಟುಗೆದರ್ ನಡೆದಿದೆ.

ಆಮಿರ್ ಖಾನ್ ಅವರು ಈ ಪಾರ್ಟಿಗೆ ಮೊದಲು ಬಂದರು. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ‘ಟೈಗರ್ 3’ ಸೆಟ್​ನಿಂದ ನೇರವಾಗಿ ಈ ಪಾರ್ಟಿಗೆ ತೆರಳಿದ್ದಾರೆ. ಈ ಪಾರ್ಟಿ ವೇಳೆ ತಮ್ಮ ವೃತ್ತಿ ಜೀವನಗಳ ಬಗ್ಗೆ ಇವರು ಚರ್ಚೆ ಮಾಡಿದ್ದಾರೆ.

ಸಲ್ಲು, ಶಾರುಖ್​ ಹಾಗೂ ಆಮಿರ್​ಗೆ ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿದ್ದರು. ಈ ಪೈಕಿ ಶಾರುಖ್ ಖಾನ್​ ‘ಟೈಗರ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸಾಧಾರಣ ಗೆಲುವು ಕಂಡಿದೆ. ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

TV9 Kannada


Leave a Reply

Your email address will not be published. Required fields are marked *