ಮ್ಯಾಚ್ ಫಿನಿಷರ್ ರೋಲ್.. ಇದು ಕ್ರಿಕೆಟ್​​ನ ಟಫೆಸ್ಟ್​ ರೋಲ್..! ಯಾಕಂದ್ರೆ, ಇಲ್ಲಿ ಒತ್ತಡ, ಜವಾಬ್ದಾರಿ ಹೆಚ್ಚಿರುತ್ತೆ.. ಕಡಿಮೆ ಎಸೆತಗಳಲ್ಲಿ ತಂಡವನ್ನ ಗೆಲುವಿನ ದಡ ತಲುಪಿಸಬೇಕು. ಆದ್ರೆ ಒಬ್ಬ ಅನುಭವಿ ಕ್ರಿಕೆಟರ್, ಮಧ್ಯಮ ಕ್ರಮಾಂಕದಲ್ಲಿ ಒಂದು ಚಾನ್ಸ್ ಕೊಡಿ ಅಂತ ಅಂಗಲಾಚುತ್ತಿದ್ದಾನೆ.

ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ಗ್ರೇಟ್​ ಮ್ಯಾಚ್​ ಫಿನಿಷರ್. ಲೆಕ್ಕವಿಲ್ಲದಷ್ಟು ಪಂದ್ಯಗಳನ್ನ ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿರುವ ಧೋನಿ, ವಿಶ್ವ ಕ್ರಿಕೆಟ್​​ನ ಸರ್ವಶ್ರೇಷ್ಠ ಫಿನಿಷರ್​ಗಳಲ್ಲಿ ಒಬ್ಬರು. ಆದ್ರೆ ಧೋನಿ ಯುಗಾಂತ್ಯದ ಬಳಿಕ ಟೀಮ್ ಇಂಡಿಯಾಕ್ಕೆ ಬಹುವಾಗಿ ಕಾಡ್ತಿರುವ ಸಮಸ್ಯೆ, ಮ್ಯಾಚ್​​​ ಫಿನಿಷರ್ ರೋಲ್​.

ಮಹೇಂದ್ರ ಸಿಂಗ್ ಧೋನಿ ನಿರ್ಗಮನದ ಬಳಿಕ ಮ್ಯಾಚ್​ ಫಿನಿಷರ್ ಜವಾಬ್ದಾರಿ, ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಿಷಭ್​ ಪಂತ್ ಹೆಗಲಿಗೇರಿತ್ತು. ಆದ್ರೆ ಈ ಯಂಗ್ ಸ್ಟರ್​ಗಳು, ಮಾಹಿಯಷ್ಟು ಸಮರ್ಥವಾಗಿ ಮ್ಯಾಚ್ ಫಿನಿಷರ್ ರೋಲ್ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಒಂದೆರೆಡು ಪಂದ್ಯಗಳನ್ನ ಬಿಟ್ಟರೆ, ಬಹುತೇಕ ಪಂದ್ಯಗಳಲ್ಲಿ ವೈಫಲ್ಯವನ್ನೇ ಅನುಭವಿಸಿದ್ದಾರೆ. ಹಾಗಾಗಿ ಮ್ಯಾಚ್​ ಫಿನಿಷರ್ ರೋಲ್​ಗಾಗಿ ಟೀಮ್ ಇಂಡಿಯಾದಲ್ಲಿ ತ್ರಿವಳಿಗಳ ನಡುವೆ ತೀವ್ರ ಸ್ಪರ್ಧೆ ನಡೀತಿದೆ. ಆದ್ರೀಗ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೋಸ್ಟ್​ ಎಕ್ಸ್​​ಪೀರಿಯನ್ಸ್​ ಪ್ಲೇಯರ್​​ ಒಬ್ಬರು, ಕೂಡ ಮ್ಯಾಚ್ ಫಿನಿಷರ್ ಸ್ಥಾನಕ್ಕೆ ಪೈಪೋಟಿ ನಡೆಸ್ತಿದ್ದಾರೆ.

ಹೌದು..! ಧೋನಿಯಿಂದ ತೆರವಾದ ಮ್ಯಾಚ್ ಫಿನಿಷರ್ ರೋಲ್​​ಗೆ ಎಕ್ಸ್​ಪೀರಿಯನ್ಸ್​ ಪ್ಲೇಯರ್ ಒಬ್ಬರು, ಅಂಗಲಾಚುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಒಂದೇ ಒಂದು ಅವಕಾಶಕೊಟ್ಟರೇ ತಾನೇನು ಅಂತ ಫ್ರೂವ್​ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಹೀಗೆ ಅಂಗಲಾಚುತ್ತಿರುವುದು ಬೇಱರು ಅಲ್ಲ..! ವೆರಿ ವೆರಿ ಟ್ಯಾಲೆಂಟೆಡ್, ದಿನೇಶ್​ ಕಾರ್ತಿಕ್..!

ಯೆಸ್​​..! ಕಳೆದೆರೆಡು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಡಿಕೆ, ಈಗ ಟಿ20 ವಿಶ್ವಕಪ್​​ ಟಾರ್ಗೆಟ್​ ಮಾಡಿದ್ದಾರೆ. ಮುಂದಿನ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯೋ ಹಂಬಲದಲ್ಲಿರೋ ನಿದಾಸ್ ಟ್ರೋಫಿ ಮ್ಯಾಚ್ ವಿನ್ನರ್​ ದಿನೇಶ್​ ಕಾರ್ತಿಕ್, ಟಿ20 ತಂಡದಲ್ಲಿ ಒಂದೇ ಒಂದು ಅವಕಾಶ ನೀಡಿದರೆ, ಮ್ಯಾಚ್​ ಫಿನಿಷರ್ ರೋಲ್ ಪ್ಲೇ ಮಾಡುವುದಾಗಿ ತಿಳಿಸಿದ್ದಾರೆ.

ಜವಾಬ್ದಾರಿ ನಿಭಾಯಿಸುವೆ..!
ಟೀಮ್ ಇಂಡಿಯಾಕ್ಕೆ ಖಂಡಿತವಾಗಿ ಒಬ್ಬ ಫಿನಿಷರ್ ಬೇಕಿದೆ. ನಮ್ಮಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಆದ್ರೆ ನನ್ನ ಗಮನ ಮಧ್ಯಮ ಕ್ರಮಾಂಕದ ಮೇಲಿದೆ. ಇದು ವಿಶೇಷ ಸ್ಲಾಟ್, ಪಂದ್ಯಗಳನ್ನ ಗೆಲ್ಲಿಸುವ ಸಾಮರ್ಥ್ಯ ಹಾಗೂ ಉತ್ತಮ ಮೊತ್ತ ಹೊಂದಿಸುವ ಸಾಮರ್ಥ್ಯವಿದೆ ಎಂದು ನಾನು ಭಾವಿಸುತ್ತೇನೆ.

ದಿನೇಶ್​ ಕಾರ್ತಿಕ್, ಕ್ರಿಕೆಟಿಗ

2019ರ ಏಕದಿನ ವಿಶ್ವಕಪ್​ ಬಳಿಕ ಸೈಡ್​ಲೈನ್..!
2019ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ಏಕದಿನ ವಿಶ್ವಕಪ್​​ನಲ್ಲಿ ಸ್ಥಾನ ಗಿಟ್ಟಿಸಿದ್ದ ದಿನೇಶ್​ ಕಾರ್ತಿಕ್, ಕಳಪೆ ಪ್ರದರ್ಶನದ ಕಾರಣ ವಿಶ್ವಕಪ್ ಟೂರ್ನಿ ಬಳಿಕ ತಂಡದಿಂದ ಕೈಬಿಡಲಾಯ್ತು. ಸೆಮಿಫೈನಲ್​ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ತಂಡದ ಕೈಹಿಡಿಯದ ದಿನೇಶ್​ ಕಾರ್ತಿಕ್, ನಂತರ ಟಿ20 ತಂಡದಿಂದಲ್ಲೂ ಸ್ಥಾನ ಕಳೆದುಕೊಂಡರು.! ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿನೇಶ್​, ಕಳಪೆ ಪ್ರದರ್ಶನ ಕಾರಣವೇ, ಸ್ಥಾನ ಕಳೆದುಕೊಳ್ಳಲು ಕಾರಣ ಎಂದಿದ್ದಾರೆ.

ಕಳಪೆ ಪ್ರದರ್ಶನ ಮುಳುವಾಯ್ತು..!
ನಾನು ಈ ಹಿಂದೆ ಉತ್ತಮ ಆಡಿದ್ದೇನೆ. ವಿಶ್ವಕಪ್ ನಂತರ ನಾನು ತಂಡದಿಂದ ಹೊರಗುಳಿದಿದ್ದರೂ ಸಹ, ಅಲ್ಲಿಯವರೆಗೆ ಟಿ20 ಫಾರ್ಮೆಟ್​ನಲ್ಲಿ ಉತ್ತಮವಾಗಿ ಆಡಿದ್ದೇನೆ ಎಂದು ಭಾವಿಸುವೆ. ಆದರೆ ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದಾಗಿ ನಾನು ಟಿ20 ತಂಡದಿಂದ ಹೊರಬಂದಿದ್ದೇನೆ.

ದಿನೇಶ್​ ಕಾರ್ತಿಕ್, ಕ್ರಿಕೆಟಿಗ

ಮುಂದಿನ ಎರಡು ವಿಶ್ವಕಪ್ ಟೂರ್ನಿಗಳನ್ನ ಗುರಿಯಾಗಿಸಿರುವ ದಿನೇಶ್​ ಕಾರ್ತಿಕ್​ಗೆ​, ಸದ್ಯಕ್ಕೆ ಟೀಮ್ ಇಂಡಿಯಾ ಎಂಟ್ರಿ ಅಸಾಧ್ಯದ ಮಾತಾಗಿದೆ. ಆದ್ರೆ 2022ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯೋ ವಿಶ್ವಕಪ್​​​ ತಂಡದಲ್ಲಿ ಏನಾದರೂ ಸ್ಥಾನ ಪಡೆಯಬೇಕೆಂದರೆ, ದೇಶಿ ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಭಾರೀ ಕಸರತ್ತನ್ನೇ ನಡೆಸಬೇಕಿದೆ.

ಪವಾಡ ಸೃಷ್ಟಿಸಿದರೂ ತಂಡದಲ್ಲಿ ಸ್ಥಾನ ಕಷ್ಟಸಾಧ್ಯ..!
ಹೌದು..! ದೇಶಿ ಕ್ರಿಕೆಟ್ ಹಾಗೂ ಐಪಿಎಲ್​ನಲ್ಲಿ ದಿನೇಶ್​, ಪವಾಡವನ್ನೇ ಸೃಷ್ಟಿಸಿದ್ದರೂ, 2022ರ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯೋದು ಕಷ್ಟಸಾಧ್ಯ..! ಯಾಕಂದ್ರೆ, ಈಗಾಗಲೇ ಟಿ20 ತಂಡದಲ್ಲಿ ವಿಕೆಟ್ ಕೀಪರ್​ ಕಮ್ ಬ್ಯಾಟ್ಸ್​ಮನ್​ಗಳಾಗಿ ರಿಷಭ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶಾನ್, ಕೆ.ಎಲ್.ರಾಹುಲ್… ಹೀಗೆ ಸಾಲು ಸಾಲು ಯುವ ಆಟಗಾರರ ದಂಡೇ ಇದೆ. ಅದ್ರಲ್ಲೂ ಸದ್ಯ ದಿನೇಶ್​ ಕಾರ್ತಿಕ್​ ವಯಸ್ಸು 36… ಹಾಗಾಗಿ ತಂಡದಲ್ಲಿ ಸ್ಥಾನ ಪಡೆಯೋದು ಅಷ್ಟು ಸುಲಭವಲ್ಲ ಅನ್ನೋದು, ಎಕ್ಸ್​ಪರ್ಟ್​ಗಳ ಮಾತಾಗಿದೆ.

ಒಟ್ಟಿನಲ್ಲಿ ಕಾಮೆಂಟೇಟರ್​ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರೋ ದಿನೇಶ್​, ಟೆಕ್ನಿಕಲಿ ಸೂಪರ್ ಬ್ಯಾಟ್ಸ್​ಮನ್ ಅನ್ನೋದರಲ್ಲಿ ಎರಡು ಮಾತಿಲ್ಲ..! ಆದ್ರೆ, ಯುವ ಆಟಗಾರರನ್ನ ದಾಟಿ, ಟಿ20 ತಂಡಕ್ಕೆ ಹೇಗೆ ಎಂಟ್ರಿಕೊಡ್ತಾರೆ ಅನ್ನೋದೇ, ಯಕ್ಷಪ್ರಶ್ನೆ…

The post ‘ಒಂದೇ ಒಂದು ಚಾನ್ಸ್​ ಕೊಡಿ ಪ್ಲೀಸ್’- ಟಿ20 ವಿಶ್ವಕಪ್ ಟಾರ್ಗೆಟ್ ಮಾಡಿದ ದಿನೇಶ್​ ಕಾರ್ತಿಕ್ appeared first on News First Kannada.

Source: newsfirstlive.com

Source link