ಒಂದೇ ಒಂದು ಸಿನಿಮಾದಿಂದ ಹುಟ್ಟಿಕೊಂಡಿದ್ದ ಪ್ರೀತಿ.. ಧನುಷ್ ಮುಗ್ಧ ನಟನೆಗೆ ಮಾರು ಹೋಗಿದ್ದ ಐಶ್ವರ್ಯ


ಪ್ರೀತಿ ಅನ್ನೋದೆ ಹಾಗೆ, ಯಾವಾಗ..? ಎಲ್ಲಿ…?ಹೇಗೆ ಹುಟ್ಟುತ್ತೆ..? ಯಾವಾಗ ಎಂಡ್​ ಆಗುತ್ತೆ ಅನ್ನೋದನ್ನ ಹೇಳಕ್ಕಾಗಲ್ಲ. ಅದರಲ್ಲೂ ಸೆಲೆಬ್ರೆಟಿಗಳ ಪ್ರೀತಿಗೆ, ಮದುವೆಗೆ ವ್ಯಾಲಿಡಿಟಿ ತುಂಬಾ ಕಡಿಮೆ ಬಿಡಿ. ಅಮೀರ್​ ಖಾನ್​ ಕಿರಣ್​ ರಾವ್, ಸಮಂತಾ ನಾಗಚೈತನ್ಯರಂತಹ ಸ್ಟಾರ್​ಗಳ ಡಿವೋರ್ಸ್​ ವಿಚಾರವನ್ನೇ ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲಾಗ್ತಿಲ್ಲ.. ಅಂತದ್ರಲ್ಲಿ, ದಕ್ಷಿಣದ ಸೂಪರ್ ಸ್ಟಾರ್ ಜೋಡಿ ತಮ್ಮ ದಾಂಪತ್ಯವನ್ನ ಎಂಡ್ ಮಾಡಿರುವ ಶಾಕಿಂಗ್ ನ್ಯೂಸ್​ ಬರಸಿಡಿಲಿನಂತೆ ಬಡಿದಿದೆ. ಅದೂ ಬರೋಬ್ಬರಿ 18 ವರ್ಷಗಳ ಸಂಸಾರ ಮಾಡಿದ್ಮೇಲೆ.

ಥಟ್ಟನೆ ನೋಡಿದರೆ ಹೀರೋ ಅಂತ ಅನಿಸೋದೇ ಇಲ್ಲ.. ಇವ್ರನ್ನ ತೋರಿಸಿ ಅರೇ ಇವ್ರೇ ನಮ್ ತಮಿಳು ಸೂಪರ್ ಸ್ಟಾರ್ ಧನುಷ್ ಅಂದ್ರೆ, ಯಾರೂ ಕೂಡ ನಂಬೋದಕ್ಕೆ ಸಿದ್ದರಿರೋದಿಲ್ಲ… ಬಟ್​.. ಇವ್ರು ಧನುಷೇ.. ಮಳೆ ನೀರಲ್ಲಿ, ಕೆಸರಲ್ಲಿ ಫೈಟ್​ ಮಾಡಿ ಒಂದೇ ಒಂದು ಸಿನಿಮಾ ಮೂಲಕ ಚಿತ್ರರಸಿಕರ ಮನಕ್ಕೆ ಲಗ್ಗೆ ಇಟ್ಟ ಕರ್ಣನ್..

ಬರೋಬ್ಬರಿ 19 ವರ್ಷಗಳ ಹಿಂದೆ ಕಾದಲ್ ಕೊಂಡೈನ್ ಎಂಬ ತಮಿಳಿನ ಚಿತ್ರ ಧನುಷ್ ಅನ್ನೋ ಅಸಾಧಾರಣ ಪ್ರತಿಭೆಯನ್ನ ಕಾಲಿವುಡ್​ ಲೋಕಕ್ಕೆ ಉಡುಗೊರೆಯಾಗಿ ನೀಡಿತ್ತು. ಧುನುಷ್ ಮೊಟ್ಟಮೊದಲ ಬಾರಿಗೆ ಕಾಲಿವುಡ್​​ನ ಬಾಕ್ಸ್​ ಆಫೀಸ್​ನಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದೇ ಈ ಕಾದಲ್ ಕೊಂಡೈನ್ ಮೂವಿಯಲ್ಲಿ. ಅನಾಥ ಆಶ್ರಮದಲ್ಲಿಯೇ ಬೆಳೆಯುವ ಧನುಷ್​ ಮುಂದೊಂದು ದಿನ ಟಾಪ್​ ಕಾಲೇಜ್​ವೊಂದರ ಱಂಕ್ ಹೋಲ್ಡರ್. ರಾತ್ರಿ ಹೊತ್ತು ಕೆಲಸ ಹಗಲೊತ್ತು ಕಾಲೇಜಿನಲ್ಲಿ ನಿದ್ದೆ. ಇವೆಲ್ಲದರ ಮಧ್ಯೆಯೂ ಬಡಹುಡಗನಿಗೆ ಒಲಿಯೋ ವಿದ್ಯೆ. ಆದ್ರೆ, ಎಷ್ಟೇ ಪ್ರಯತ್ನ ಪಟ್ರೂ ಕೊನೆಗೆ ಒಲಿಯದ ಪ್ರೀತಿ.. ಹಾರಿಹೋಗುವ ಪ್ರಾಣಪಕ್ಷಿ.. ಒಂದು ಕಾದಲ್ ಕೊಂಡೇನ್ ಸಿನಿಮಾದ ಒನ್ ಲೈನರ್

ಕಾದಲ್ ಕೊಂಡೈನ್ ಸಿನಿಮಾದಲ್ಲಿ ಮುಗ್ಧ ಮುಗ್ಧವಾಗಿ ಕಾಣಿಸಿಕೊಂಡಿದ್ದ ಕಾಲೇಜು ಹುಡುಗ ಧನುಷ್ ಒಬ್ಬ ದೈತ್ಯ ಪ್ರತಿಭೆ ಅನ್ನೋದನ್ನ ಸಾರಿ ಹೇಳಿತ್ತು. 2003ರಲ್ಲಿ ಕಾಲಿವುಡ್​ ಕೋಟೆಯಲ್ಲಿ ಈ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಟ್ಟಿತ್ತು. ರಾತ್ರೋ ರಾತ್ರಿ ಧುನುಷ್ ಎಂಬ ಸ್ಟಾರ್ ಹುಟ್ಟಿಕೊಂಡಿದ್ದ. ಚಿತ್ರ-ವಿಚಿತ್ರ ಕಥೆಯಿದ್ದ ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲುವುದರ ಜೊತೆಗೆ ಸಾಕಷ್ಟು ಪ್ರಶಸ್ತಿಗಳನ್ನೂ ಮಡಿಲಿಗೆ ಹಾಕಿಕೊಂಡಿತು. ಧನುಷ್ ಆ್ಯಕ್ಟಿಂಗ್ ನೋಡಿ ಇಡೀ ಕಾಲಿವುಡ್ ದಿಗ್ಗಜರೇ ಫಿದಾ ಆಗಿದ್ರು.

ಒಂದೇ ಒಂದು ಸಿನಿಮಾದಿಂದ ಹುಟ್ಟಿಕೊಂಡಿದ್ದ ಪ್ರೀತಿ

ಸ್ವತಃ ತಮಿಳು ಸೂಪರ್​ ಸ್ಟಾರ್​ ರಜನಿಕಾಂತ್​ ಕೂಡ ಧನುಷ್​ ನಟನೆಯನ್ನ ನೋಡಿ ವಾವ್​ ಅಂದಿದ್ರಂತೆ. ಅಬ್ಬಾ ಎಂಥಾ ನಟನೆ ಅಂತಾ ಮುಕ್ತವಾಗಿ ಕೊಂಡಾಡಿದ್ದರಂತೆ. ಕಾದಲ್ ಕೊಂಡೈನ್ ಸಿನಿಮಾದಲ್ಲಿ ಧನುಷ್ ಮುಗ್ದ ನಟನೆಗೆ ರಜನಿಕಾಂತ್ ಮಾತ್ರವಲ್ಲ ಸೂಪರ್​​ ಸ್ಟಾರ್​ ತಲೈವಾರ ​ ಮಗಳು ಕೂಡ ಫಿದಾ ಆಗಿದ್ಲು. ಎಲ್ಲಿಯವರೆಗೆ ಅಂದ್ರೆ ಈ ಚಿತ್ರದ ನಟನೆ ರಜನಿಕಾಂತ್ ಪುತ್ರಿ ಐಶ್ವರ್ಯ ಮನದಲ್ಲಿ ಧನುಷ್ ಮೇಲೆ ಪ್ರೇಮದ ಹೂ ಅರಳುವಂತೆ ಮಾಡಿ ಬಿಟ್ಟಿತ್ತು. ಯಾಕಂದ್ರೆ ಈ ಪ್ರೀತಿ ಅನ್ನೋದೆ ಹಾಗೆ ಅಲ್ವಾ..? ಅದು ಎಲ್ಲಿ ಹೇಗೆ..? ಯಾವಾಗ ಹುಟ್ಟುತ್ತೆ ಅನ್ನೋದನ್ನ ಹೇಳಕ್ಕಾಗಲ್ಲ.. ಅದು ಎಲ್ಲಾ ರೀತಿಯ ಕಲ್ಪನೆಗೂ ಊಹೆಗೂ ಮೀರಿದ್ದು. ಅರಮನೆಯಲ್ಲಿ ರಾಣಿಯಂತಿದ್ದ ಯುವತಿಗೂ ಗುಡಿಸಲಿನಲ್ಲಿ ವಾಸಿಸುವ ಯುವಕನ ಜೊತೆ ಲವ್ ಆದ ಎಷ್ಟೋ ಉದಾಹರಣೆಗಳಿವೆ. ಅದೆಷ್ಟೋ ಪ್ರೇಮ ಕಥೆಗಳು ಸಿನಿಮಾ ರೂಪ ಪಡೆದುಕೊಂಡ್ರೆ ಇನ್ನೂ ಕೆಲ ಸಿನಿಮಾ ಕಥೆಗಳು ಮುಂದೆ ಪ್ರೀತಿಯ ಸ್ವರೂಪ ಪಡೆದುಕೊಂಡಿದೆ. ಇಂತಹ ಪ್ರೀತಿಯ ಬಲೆ ತಮಿಳು ಸೂಪರ್​ಸ್ಟಾರ್​ ರಜನಿಕಾಂತ್​ ಮಗಳನ್ನ ಕೂಡ ಬಿಟ್ಟಿಲ್ಲ. ಆಗ ತಾನೆ ಹೀರೋ ಆಗಿ ಮೊದಲ ಬಾರಿಗೆ ನಟಿಸಿದ್ದ ಧನುಷ್​ ಮೇಲೆ ತಮಿಳು ಚಿತ್ರರಂಗದ ಬಿಗ್​ ಬಾಸ್​ ಸೂಪರ್​ ರಜನಿಕಾಂತ್ ಮಗಳೇ ಫಿದಾ ಆಗಿದ್ಲು ಅಂದ್ರೆ ನೀವೆ ಯೋಚ್ನೆ ಮಾಡಿ.


ಹೀಗೆ ಪ್ರೇಮಕ್ಕೆ ಮಾರು ಹೋಗುವ ಧನುಷ್ ಹಾಗೂ ಐಶ್ವರ್ಯ 2004ರಲ್ಲಿಯೇ ಮದುವೆಯಾಗಿಯೂ ಬಿಡ್ತಾರೆ. ಮದುವೆಯಾಗಿ ಬರೋಬ್ಬರಿ 18 ವರ್ಷಗಳ ಕಾಲ ಸುಂದರ ಸಂಸಾರ ನಡೆಸಿದ್ದಾರೆ. ಧನುಷ್ ಐಶ್ವರ್ಯಾಗೆ ಇಬ್ಬರು ಮುದ್ದಾದ ಮಕ್ಕಳೂ ಇದ್ದು ಎಷ್ಟೋ ಜನ ಇವರಿಬ್ಬರ ಜೋಡಿ ನೋಡಿ ಹೊಟ್ಟೆಕಿಚ್ಚುಪಟ್ಟಿದ್ದೂ ಇದೆ. ಹೀಗೆ, ಆದರ್ಶದಂಪತಿಗಳಂತೆ ಬದುಕುತ್ತಿದ್ದ ಇವರಿಬ್ಬರ ಬಾಳಿನಲ್ಲಿ ಯಾವ ಮಸಣಿ ಕಣ್ಣು ಬಿತ್ತೋ ಏನೋ? ನಿನ್ನೆ ರಾತ್ರಿ ಧನುಷ್ ಒಂದು ದೊಡ್ಡ ಬಾಂಬ್ ಸಿಡಿಸಿಯೇಬಿಟ್ರ.


 ‘ಇಬ್ಬರೂ ದೂರಾಗುತ್ತಿದ್ದೇವೆ’

18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದಲೇ ಕೂಡಿತ್ತು. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ಜೋಡಿಯಾಗಿದ್ದ ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ. ಓಂ ನಮಃ ಶಿವಾಯ ಸ್ಪ್ರೆಡ್ ಲವ್
-ಧನುಷ್, ತಮಿಳು ನಟ

ಧನುಷ್​ ಮಾಡಿದ ಇದೇ ಪೋಸ್ಟನ್ನ ತಮ್ಮ ಸೋಶೀಯಲ್​ ಮೀಡಿಯಾಗಳಲ್ಲಿ ಶೇರ್ ಮಾಡಿದ ಐಶ್ವರ್ಯಾ, ಇದಕ್ಕೆ ತಲೆ ಬರಹ ಅಗತ್ಯ ಇಲ್ಲ, ನಿಮ್ಮಿಂದ ಕೇವಲ ಅರ್ಥೈಸಿಕೊಳ್ಳುವ ಮನಸ್ಸು ಮತ್ತು ಪ್ರೀತಿ ಬೇಕಾಗಿದೆ ಎಂದು ಅದನ್ನ ರೀಪೋಸ್ಟ್​ ಮಾಡಿದ್ದು ಅಭಿಮಾನಿಗಳ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿತ್ತು.

18 ವರ್ಷಗಳ ದಾಂಪತ್ಯಕ್ಕೆ ಸ್ಟಾರ್ ದಂಪತಿಯ ಗುಡ್​​ಬೈ


ವಿಚ್ಛೇದನದ ಬಗ್ಗೆ ಖುದ್ದು ಮಾಹಿತಿ ನೀಡಿದ ನಟ ಧನುಷ್
ಆರಂಭದಲ್ಲಿ ಧನುಷ್​ ಪೋಸ್ಟ್​ ನೋಡಿದ ಜನರು ಇದು ನಿಜನಾ ಸುಳ್ಳಾ ಎಂದು ಗೊಂದಲದ ಗೂಡಲ್ಲಿ ಸಿಲುಕಿಕೊಂಡಿದ್ರು. ಅದ್ಯಾವಾಗ ಐಶ್ವರ್ಯಾ ಕೂಡ , ಧನುಷ್​ ಪೋಸ್ಟ್​ನ್ನ ಶೇರ್​ ಮಾಡಿದ್ರೋ ನೋಡಿ, ಅವಾಗ್ಲೆ ಧುನುಷ್​ ಹಾಗೂ ಐಶ್ವರ್ಯಾ ಪರಸ್ಪರ ದೂರ ಆಗಿದ್ದಾರೆ ಅನ್ನೋದು ಜನರಿಗೂ, ಅಭಿಮಾನಿಗಳಿಗೂ ಕನ್ಫರ್ಮ್​ ಆಯ್ತು. ಧನುಷ್-ಐಶ್ವರ್ಯಾ ಡಿವೋರ್ಸ್​ ಮ್ಯಾಟರ್​ ಹೊರ ಬೀಳುತ್ತಿದ್ದಂಗೆ ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿತ್ತು.


ಯಸ್​.. ತಮಿಳಿನ ಖ್ಯಾತ ನಟ ಧನುಷ್ ಮತ್ತು ಸೂಪರ್​ ಸ್ಟಾರ್ ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. 18 ವರ್ಷಗಳವರಗೆ ಜೊತೆಯಾಗಿ ಬಾಳಿದ ಈ ಜೋಡಿ ಇದೀಗ ತಮ್ಮ ಬದುಕಿನ ಪಥ ಬದಲಿಸಿದ್ದಾರೆ. 2004ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಬೇರೆಯಾಗಿರುವುದಾಗಿ ತಿಳಿಸಿದೆ. 2022ರ ಇಸವಿಯ ಮೊದಲನೇ ಸ್ಟಾರ್ ವಿಚ್ಛೇದನ ಇದಾಗಿದ್ದು, ಅಭಿಮಾನಿಗಳಿಗೆ ಮತ್ತಷ್ಟು ಆಘಾತ ಮೂಡಿಸಿದೆ. ಯಾಕಂದ್ರೆ, ಕಳೆದ ವರ್ಷವಷ್ಟೇ ಚೆನ್ನೈನ ಪೊಯೆಸ್ ಗಾರ್ಡನ್​ನಲ್ಲಿ ರಜನಿಕಾಂತ್ ಮನೆಯ ಬಳಿಯೇ ಈ ಜೋಡಿ ಹೊಸಾ ಸೈಟ್ ಖರೀದಿಸಿ ಮನೆ ಕಟ್ಟಲು ಗುದ್ದಲಿ ಪೂಜೆ ಕೂಡಾ ನೆರವೇರಿಸಿದ್ದರು. ಈಗ ಇಬ್ಬರೂ ತಮ್ಮ ತಮ್ಮ ದಾರಿ ನೋಡಿಕೊಳ್ಳುವುದರ ಬಗ್ಗೆ ಘೋಷಣೆ ಮಾಡಿಕೊಂಡಿರೋದು ನಂಬಲು ಅಸಾಧ್ಯ ಎನ್ನುವಂತೆ ಮಾಡಿದೆ.. ಯಾಕಂದ್ರೆ, ಇವರಿಬ್ಬರ ಪ್ರೀತಿ ಮುರಿದುಬೀಳುವಷ್ಟು ದುರ್ಬಲವಂತೂ ಆಗಿರಲಿಲ್ಲ. ಇಬ್ಬರದ್ದೂ ಸ್ಟ್ರಾಂಗ್ ಲವ್, ಸವಾಲುಗಳ ಪ್ರವಾಹದ ವಿರುದ್ಧವೇ ಈಜಿ ಜಯಿಸಿದ ಪ್ರೇಮ ಅನ್ನೋದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ, ಇಬ್ಬರೂ ಜೊತೆಗಿದ್ದದ್ದು ಒಂದಲ್ಲ, ಎರಡಲ್ಲ.. ಬರೋಬ್ಬರಿ 18 ವರ್ಷ

ಧನುಷ್ ಮುಗ್ಧ ನಟನೆಗೆ ಮಾರು ಹೋಗಿದ್ದ ಐಶ್ವರ್ಯ

ಕಾದಲ್ ಕೊಂಡೈನ್ ಸಿನಿಮಾದಲ್ಲಿ ಧನುಷ್​ ಮುಗ್ಧ ನಟೆನೆಗೆ ರಜನಿಕಾಂತ್ ಮಗಳು ಐಶ್ವರ್ಯಾ ಫಿದಾ ಆಗ್ತಿದ್ದಂಗೆ ಇಬ್ಬರು ಪ್ರೀತಿಯ ಬಲೆಯಲ್ಲಿ ಬೀಳ್ತಾರೆ. ಹಾಗಾದ್ರೆ ಇವರ ಲವ್ ಶುರುವಾಗಿದ್ದೇಗೆ..? ತನ್ನ ಮಗಳ ಲವ್ ಮ್ಯಾಟರ್​ ಗೊತ್ತಾಗ್ತಿದ್ದಂಗೆ ರಜನಿಕಾಂತ್​ ಮಾಡಿದ್ದೇನು..? ಆ ಇಂಟ್ರೆಸ್ಟಿಂಗ್​ ಕಹಾನಿಯನ್ನ ಹೇಳ್ತೀವಿ ಮುಂದಿನ ಸ್ಟೋರಿಯಲ್ಲಿ..

News First Live Kannada


Leave a Reply

Your email address will not be published. Required fields are marked *