ಲಾಕ್​ಡೌನ್​ನಿಂದ ಕಷ್ಟ ಅನುಭವಿಸುತ್ತಿದ್ದ ಚಿತ್ರದುರ್ಗದ ಮಂಗಳಮುಖಿಯರಿಗೆ ನಟ ಕಿಚ್ಚ ಸುದೀಪ್​ ಫುಡ್​ ಕಿಟ್​ ನೀಡುವ ಮೂಲಕ ನೆರವಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿಗೆ ಕರೆ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ತಕ್ಷಣವೇ ನೆರವಿಗೆ ಬಂದ ಕಿಚ್ಚನ ಚಾರಿಟೇಬಲ್​ ಸೊಸೈಟಿ, ಮಂಗಳಮುಖಿಯ ಮನೆಗೆ ದಿನಸಿ ಕಿಟ್​ಗಳನ್ನ ವಿತರಿಸಿದ್ದಾರೆ.

ಕಿಚ್ಚ ಸುದೀಪ್​ ಈ ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷದಿಂದ ಜನರ ಪರವಾಗಿ ನಿಂತು ಮಾಡ್ತಿರುವ ಮಹತ್ಕಾರ್ಯಕ್ಕೆ ಮಂಗಳಮುಖಿಯರು ಖುಷಿ ಪಟ್ಟು ಧನ್ಯವಾದ ತಿಳಿಸಿದ್ದಾರೆ. ದಿನಸಿ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೇ, ಹಣಕಾಸಿನ ಸಹಾಯವನ್ನು ಕಿಚ್ಚ ಸುದೀಪ್​ ಮಾಡಿದ್ದಾರೆ ಅಂತ ಮಂಗಳಮುಖಿಯರು ಹೇಳಿಕೊಂಡಿದ್ದಾರೆ.

‘ಮೊದಲು ಮಾನವನಾಗು’ ಅನ್ನೋ ಒಂದು ಧ್ಯೇಯ ವಾಕ್ಯವನ್ನ ಮೂಲ ಮಂತ್ರವಾಗಿ ಇಟ್ಟುಕೊಂಡು ನಟ ಸುದೀಪ್​ ಹಾಗೂ ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಸಾಕಷ್ಟು ಜನರಿಗೆ ಕಿಚ್ಚ ಸುದೀಪ್​ ಹಾಗೂ ತಂಡ ನೆರವಿನ ಹಸ್ತ ಚಾಚಿದೆ. ಹಸಿವು ಅಂದವರಿಗೆ ಊಟ, ಕಷ್ಟ ಅಂದವರಿಗೆ ದಿನಸಿ ಕಿಟ್​​ಗಳನ್ನ ನೀಡಿದ್ದಾರೆ.

The post ಒಂದೇ ಕರೆಗೆ ಓಗೊಟ್ಟ ಸುದೀಪ್​; ಮಂಗಳಮುಖಿಯರಿಗೆ ಕಿಚ್ಚನ ​ನೆರವು appeared first on News First Kannada.

Source: newsfirstlive.com

Source link