ಚಿತ್ರದುರ್ಗ: ಕೋಟೆನಾಡಿನ ಪೊಲೀಸರು, ಲಾಕ್​ಡೌನ್​ ಸಂದರ್ಭದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡುವುದರ ಜೊತೆಗೆ ವಿನೂತನ ಪ್ರಯೋಗವೊಂದನ್ನ ಮಾಡಿದ್ದಾರೆ.

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರನ್ನ ಕೊರೊನಾ ಟೆಸ್ಟ್​ಗೆ ಒಳಪಡಿಸಲಾಗ್ತಿದೆ. ಅನಗತ್ಯ ಓಡಾಟ ಬಂದ್ ಮಾಡಲು ಇಲ್ಲಿನ ಪೊಲೀಸರು ಈ ವಿಭಿನ್ನ ಪ್ಲಾನ್ ಮಾಡಿದ್ದಾರೆ.

 

ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಪಿಎಸ್ಐ ಕೊರೊನಾ ಟೆಸ್ಟ್ ಮಾಡಿಸಿ, ವರದಿ ಪಾಸಿಟಿವ್ ಬಂದ್ರೆ ನೇರವಾಗಿ ಕೋವಿಡ್ ಕೇರ್ ಸೆಂಟರ್​​​ಗೆ ಶಿಫ್ಟ್ ಮಾಡ್ತಿದ್ದಾರೆ. ಹಳ್ಳಿಗಳಲ್ಲಿ ಕೊರೊನಾ ಟೆಸ್ಟ್​ಗೆ ಒಳಪಡಲು ಜನರು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ನಾಯಕನಹಟ್ಟಿ ಪೊಲೀಸರು ತಮ್ಮ ಈ ಪ್ರಯೋಗದ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ.

The post ಒಂದೇ ಕಲ್ಲಲ್ಲಿ 2 ಹಕ್ಕಿ: ಅನಗತ್ಯವಾಗಿ ಓಡಾಡಿದವ್ರಿಗೆ ಚಿತ್ರದುರ್ಗ ಪೊಲೀಸ್ ಏನ್ ಮಾಡಿದ್ರು ಗೊತ್ತಾ? appeared first on News First Kannada.

Source: newsfirstlive.com

Source link