ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್: ಸಾವಿಗೂ ಮುನ್ನ ಸ್ನೇಹಿತನಿಗೆ ಕಳಿಸಿದ್ದ ಸಂದೇಶದಲ್ಲಿತ್ತು ಕಾರಣ – bengaluru family suicide case reason revealed by whatsapp message sent before death


ಆತ್ಮಹತ್ಯೆ ಮಾಡಿಕೊಂಡ ಸಂತೋಷ್, ಮೋಸದ ಸುಳಿಗೆ ಸಿಲುಕಿ ನೊಂದಿದ್ದ. ಸಾವಿಗೂ ಮುನ್ನ ತನ್ನ ಗೆಳೆಯನಿಗೆ “ಐ ಹೇಟ್ ಮೈ ಲೈಫ್” ಎಂದು ಸಂದೇಶ ಕಳಿಸಿದ್ದ.

ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿತ್ತು. ಸದ್ಯ ಈಗ ಈ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ವಾಟ್ಸಾಪ್ ಸಂದೇಶದ ಮೂಲಕ ಆತ್ಮಹತ್ಯೆಯ ಕಾರಣ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಸಂತೋಷ್, ಮೋಸದ ಸುಳಿಗೆ ಸಿಲುಕಿ ನೊಂದಿದ್ದ. ಸಾವಿಗೂ ಮುನ್ನ ತನ್ನ ಗೆಳೆಯನಿಗೆ “ಐ ಹೇಟ್ ಮೈ ಲೈಫ್” ಎಂದು ಸಂದೇಶ ಕಳಿಸಿದ್ದ. ಮೊಸದ ಸುಳಿಗೆ ಸಾಕ್ಷಿಯಾದ 30 ಲಕ್ಷದ ಬಗ್ಗೆ ಉಲ್ಲೇಖ ಮಾಡಿದ್ದ. ಸಾವಿನ ಹಿಂದೆ ಹಣಕಾಸಿನ ವ್ಯವಹಾರದ ವಿಚಾರ ಇರುವುದಾಗಿ ಸಂದೇಶದಲ್ಲಿ ತಿಳಿಸಿದ್ದ. ಸಾಯುವುದಕ್ಕೂ ಮುನ್ನ ಸ್ನೇಹಿತನಿಗೆ ಕಳಿಸಿದ ಆ ಭಾವನಾತ್ಮಕ ಮೆಸೇಜ್​ನಿಂದ ಕುಟುಂಬದ ಆತ್ಯಹತ್ಯೆಯ ಸತ್ಯ ಬಯಲಾಗಿದೆ.

TV9 Kannada


Leave a Reply

Your email address will not be published.