ದಾವಣಗೆರೆ: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರದಿದ್ದ ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಂದ ಆದರ್ಶಗೊಂಡ ಒಂದೇ ಗ್ರಾಮದ 60ಕ್ಕೂ ಅಧಿಕ ಅಭಿಮಾನಿಗಳು ನೇತ್ರದಾನ ಮಾಡುವುದಾಗಿ ನಿರ್ಧರಿಸಿದ್ದಾರೆ.
ಹೌದು.. ಪುನೀತ್ ಸಾವಿನ ಬಳಿಕ ತಮ್ಮ ನೇತ್ರಗಳನ್ನು ದಾನ ಮಾಡಿ ನಾಲ್ವರ ಬಾಳಿಗೆ ಬೆಳಕು ನೀಡಿದ್ದರು. ಇನ್ನು ಅವರ ದಾರಿಯಲ್ಲೇ ಸಾಗುವುದಾಗಿ ನಿರ್ಧಾರ ಕೈಗೊಂಡಿರುವ ತಾಲೂಕಿನ ಚಟ್ಟೋಬನಹಳ್ಳಿ ತಾಂಡಾದ ಯುವಕರು ಕಣ್ಣು ದಾನ ಮಾಡುವುದದಾಗಿ ತಿಳಿಸಿದ್ದಾರೆ. ಅಪ್ಪು ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೆ ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಹೀಗಾಗಿ ಅವರ ಆದರ್ಶಗಳು ನಮಗೆ ಮಾದರಿಯಾಗಿದ್ದು ಈ ನಿರ್ಧಾರ ಕೈಗೊಂಡಿರುವುದಾಗಿ ಯುವಕರು ತಿಳಿಸಿದ್ದಾರೆ.
ಕೇವಲ 110 ಮನೆಗಳಿರೋ ಚಿಕ್ಕ ಊರಲ್ಲಿ ಬಂಜಾರ ಸಮುದಾಯದರೇ ಅಧಿಕವಾಗಿದ್ದಾರೆ. ಪುನೀತ್ ಅಗಲಿಕೆಯಿಂದ ಒಂದು ವಾರ ಶೋಕದಲ್ಲಿ ಮುಳುಗಿದ್ದ ಗ್ರಾಮಸ್ಥರು ನೇತ್ರದಾನದ ಮೂಳಕ ಅಪ್ಪುಗೆ ವಿನೂತನ ರೀತಿ ಗೌರವ ನೀಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ:ಅಪ್ಪು ನೇತ್ರದಾನ: ನಾಲ್ವರಲ್ಲ, ಇನ್ನೂ ಹಲವರ ‘ಬಾಳಿಗೆ ಬೆಳಕು’ ನೀಡಲಿದ್ದಾರೆ ಪುನೀತ್.. ಹೇಗೆ ಗೊತ್ತಾ?