ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ನಗರ ಪ್ರದೇಶಗಳು ಮಾತ್ರವಲ್ಲದೇ ಹಳ್ಳಿಗಳಲ್ಲೂ ಸೋಂಕಿನ ಹರಡುವಿಕೆ ಗಣನೀಯವಾಗಿ ಜೋರಾಗಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ 88 ಮಂದಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಹೆಚ್ಚು ಕೇಸ್ ಪತ್ತೆಯಾದ ಹಿನ್ನೆಲೆ ಗ್ರಾಮದ ಎರಡು ಬಡಾವಣೆ ಸೀಲ್​​​ಡೌನ್ ಮಾಡಲಾಗಿದೆ.

ಕಳೆದ 3 ದಿನದಿಂದ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಮಾಡಿದ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಿ ಪತ್ತೆ ಮಾಡುವ ಕಾರ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿರತರಾಗುತ್ತಿದ್ದಾರೆ. ರೋಣ ತಾಲೂಕಿಗೆ ಮದುವೆಗೆ ಹೋಗಿ ಬಂದಿದ್ದ ಗ್ರಾಮಸ್ಥರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಅಲ್ಲದೇ ಅಧಿಕಾರಿಗಳು ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

The post ಒಂದೇ ಗ್ರಾಮದ 88 ಮಂದಿಗೆ ಕೊರೊನಾ ಸೋಂಕು.. ಹಳ್ಳಿಗಳಿಗೂ ಶಿಫ್ಟ್ ಆಗ್ತಿದೆ ವೈರಸ್ appeared first on News First Kannada.

Source: newsfirstlive.com

Source link