ಒಂದೇ ತಂಡದಲ್ಲಿ ಅವಳಿ-ಜವಳಿ ಸಹೋದರರು..! | England vs New Zealand: Jamie Overton joins twin brother Craig in hosts’ squad for third Test


England vs New Zealand: ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3 ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯರು 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.

ಒಂದೇ ತಂಡದಲ್ಲಿ ಸಹೋದರರು ಕಾಣಿಸಿಕೊಳ್ಳುವುದು ಸಾಮಾನ್ಯ. ಟೀಮ್ ಇಂಡಿಯಾ ಪರ ಇರ್ಫಾನ್ ಪಠಾಣ್-ಯೂಸುಫ್ ಪಠಾಣ್ ಆಡಿದ್ದರು. ಹಾಗೆಯೇ ಪಾಂಡ್ಯ ಬ್ರದರ್ಸ್​ ಹಾರ್ದಿಕ್ ಹಾಗೂ ಕೃನಾಲ್ ಕೂಡ ಕಾಣಿಸಿಕೊಂಡಿದ್ದರು. ಇನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ಜಿಂಬಾಬ್ವೆ, ಪಾಕಿಸ್ತಾನ್ ಸೇರಿದಂತೆ ಅನೇಕ ತಂಡಗಳಲ್ಲಿ ಸಹೋದರರು ಜೊತೆಯಾಗಿ ಆಡಿದ್ದಾರೆ. ಇದಾಗ್ಯೂ ಇತ್ತೀಚಿನ ದಿನಗಳಲ್ಲಿ ಅವಳಿ-ಜವಳಿ ಸಹೋದರರು ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅಂತಹದೊಂದು ಅಪರೂಪದ ಕ್ಷಣಕ್ಕೆ ಕ್ರಿಕೆಟ್ ಅಂಗಳ ಸಾಕ್ಷಿಯಾಗುವ ಸಾಧ್ಯತೆಯಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾದ ಇಂಗ್ಲೆಂಡ್​ ತಂಡದಲ್ಲಿ ಅವಳಿ-ಜವಳಿ ಸಹೋದರರಿದ್ದಾರೆ.

14 ಸದಸ್ಯರ ಇಂಗ್ಲೆಂಡ್ ಬಳಗದಲ್ಲಿ ಜೇಮೀ ಓವರ್ಟನ್ ಹಾಗೂ ಕ್ರೇಗ್ ಓವರ್ಟನ್ ಸ್ಥಾನ ಪಡೆದಿದ್ದಾರೆ. ಈ ಅವಳಿ ಸಹೋದರರು ನೋಡಲು ಸಹ ಒಬ್ಬರನ್ನೊಬ್ಬರು ಬಹುತೇಕ ಹೋಲುತ್ತದೆ. ಇದಾಗ್ಯೂ ಜೇಮಿಗಿಂತ ಕ್ರೇಗ್ ಕೇವಲ 3 ನಿಮಿಷಗಳ ಹಿರಿಯರು ಎಂಬುದು ವಿಶೇಷ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 3 ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯ ಜೂನ್ 23 ರಿಂದ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆಯಲಿದೆ.

ಈ ಪಂದ್ಯದಲ್ಲಿ ಓವರ್‌ಟನ್ ಸಹೋದರರು ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆದರೆ, ಇಂಗ್ಲೆಂಡ್‌ ಪರ ಆಡಿದ ಮೊದಲ ಅವಳಿ ಸಹೋದರರು ಎಂಬ ಖ್ಯಾತಿ ಕ್ರೇಗ್-ಜೇಮಿ ಪಾಲಾಗಲಿದೆ. ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಅವಳಿ ಸಹೋದರರಾಗಿ ಈ ಹಿಂದೆ ಆಸ್ಟ್ರೇಲಿಯಾದ ಸ್ಟೀವ್ ವಾ ಹಾಗೂ ಮಾರ್ಕ್ ವಾ ಕಾಣಿಸಿಕೊಂಡಿದ್ದರು. ಇದಾಗ್ಯೂ ಇಬ್ಬರು ಒಬ್ಬರನ್ನೊಬ್ಬರು ಹೋಲುತ್ತಿರಲಿಲ್ಲ. ಹಾಗೆಯೇ ​ಅವಳಿ ಸಹೋದರಾದ ಹ್ಯಾಮಿಶ್ ಮಾರ್ಷಲ್ ಮತ್ತು ಜೇಮ್ಸ್ ಮಾರ್ಷಲ್ ನ್ಯೂಜಿಲೆಂಡ್​ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಇಂಗ್ಲೆಂಡ್ ತಂಡದಲ್ಲಿ ಅವಳಿ ಜವಳಿ ಜೋಡಿ ಕಾಣಿಸಿಕೊಂಡಿದ್ದು, ಇಬ್ಬರಿಗೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗಲಿದೆಯಾ ಕಾದು ನೋಡಬೇಕಿದೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3 ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯರು 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಇದಾದ ಬಳಿಕ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗುರಿ ಬೆನ್ನತ್ತಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ಇದೀಗ ಈ ಸರಣಿಯ ಕೊನೆಯ ಪಂದ್ಯವು ಜೂನ್ 23 ರಿಂದ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಗೆಲ್ಲುವ ಮೂಲಕ ಕಿವೀಸ್ ಬಳಗವನ್ನು ವೈಟ್ ವಾಶ್ ಮಾಡುವ ಇರಾದೆಯಲ್ಲಿದೆ ಬೆನ್ ಸ್ಟೋಕ್ಸ್ ಬಳಗ.

ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಫೋಕ್ಸ್, ಜಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್‌ಟನ್, ಜೇಮೀ ಓವರ್‌ಟನ್, ಮ್ಯಾಥ್ಯೂ ಪಾಟ್ಸ್, ಆಲಿ ಪೋಪ್, ಜೋ ರೂಟ್.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.