ಬೆಂಗಳೂರು: ರಾಜ್ಯದಲ್ಲಿ ಇಂದು 14,874 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,61,740 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,76,614 ಕೊರೊನಾ ಟೆಸ್ಟ್​ಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 34,804 ಮಂದಿಗೆ ಸೋಂಕು ಪಾಸಿಟಿವ್ ಆಗಿದೆ, ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 13,39,201 ಕ್ಕೆ ಏರಿಕೆಯಾಗಿದೆ.

ಇಂದು ಸೋಂಕಿನಿಂದ ಚಿಕಿತ್ಸೆ ಪಡೆದು 6,982 ಮಂದಿ ಗುಣಮುಖರಾಗಿದ್ದಾರೆ, ಇಲ್ಲಿವರೆಗೆ ಸೋಂಕಿನಿಂದ 10,62,594 ಮಂದಿ ಗುಣಮುಖರಾದಂತಾಗಿದೆ. ಇಂದು ಸೋಂಕಿನಿಂದಾಗಿ 143 ಮಂದಿ ಸಾವನ್ನಪ್ಪಿದ್ದು ಕೊರೊನಾದಿಂದ ಈವರೆಗೆ 14,426 ಮಂದಿ ಸಾವನ್ನಪ್ಪಿದಂತಾಗಿದೆ. ಸದ್ಯ ರಾಜ್ಯದಲ್ಲಿ 2,62,162 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 1,492 ಸೋಂಕಿತರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್​ನಲ್ಲಿ ಹೇಳಿದೆ.

The post ಒಂದೇ ದಿನ ರಾಜ್ಯದಲ್ಲಿ 34,804 ಮಂದಿಗೆ ಪಾಸಿಟಿವ್.. 143 ಸಾವು appeared first on News First Kannada.

Source: News First Kannada
Read More