ವಿಶ್ವ ಯೋಗ ದಿನವಾದ ಇಂದಿನಿಂದ ದೇಶದಲ್ಲಿ ಯೂನಿವರ್ಸಲ್ ವ್ಯಾಕ್ಸಿನೇಷನ್ ಪ್ರಾರಂಭವಾಗಿದ್ದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನ್ ನೀಡಲಾಗುತ್ತಿದೆ. ಯೂನಿವರ್ಸಲ್ ವ್ಯಾಕ್ಸಿನೇಷನ್​ನ ಮೊದಲ ದಿನವಾದ ಇಂದು ದಾಖಲೆ ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್ ನಡೆದಿದೆ.

ದೇಶದಾದ್ಯಂತ ಇಂದು ಒಂದೇ ದಿನ 80,96,417 ಡೋಸ್ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಇಷ್ಟು ವಿಶ್ವದಲ್ಲೇ ದೊಡ್ಡಮಟ್ಟದಲ್ಲಿ ನಡೆದ ವ್ಯಾಕ್ಸಿನೇಷನ್ ಇದಾಗಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ.. ಇಂದು ನಡೆದ ದಾಖಲೆ ಮಟ್ಟದ ವ್ಯಾಕ್ಸಿನೇಷನ್ ಸಂತೋಷದಾಯಕ ವಿಷಯ.. ಕೋವಿಡ್​ನಿಂದ ಹೋರಾಡಲು ವ್ಯಾಕ್ಸಿನ್ ಶಕ್ತಿಯು ಆಯುಧ. ವ್ಯಾಕ್ಸಿನ್ ಪಡೆದವರಿಗೆ ಶುಭಾಶಯಗಳು ಹಾಗೂ ಪರಿಶ್ರಮದಿಂದ ಜನರು ವ್ಯಾಕ್ಸಿನ್ ಪಡೆಯುವಂತೆ ನೋಡಿಕೊಳ್ಳುತ್ತಿರುವ ಫ್ರಂಟ್ ಲೈನ್ ವಾರಿಯರ್​ಗಳಿಗೆ ಧನ್ಯವಾದಗಳು. ವೆಲ್​ ಡನ್ ಇಂಡಿಯಾ ಎಂದಿದ್ದಾರೆ.

The post ಒಂದೇ ದಿನ 80 ಲಕ್ಷಕ್ಕೂ ಅಧಿಕ ಡೋಸ್ ವ್ಯಾಕ್ಸಿನೇಷನ್: ದಾಖಲೆ ಬರೆದ ಭಾರತ appeared first on News First Kannada.

Source: newsfirstlive.com

Source link