ಕೋಲಾರ: ಗ್ರಾಮಕ್ಕೆ ಅಂಬ್ಯುಲೆನ್ಸ್ ಬಂದರೆ ಮರ್ಯಾದೆ ಹೋಗುತ್ತೆ ಎಂದು ಮುಜುಗರಕ್ಕೊಳಗಾದ ಕುಟುಂಬವೊಂದು ಒಂದೇ ಬೈಕ್‍ನಲ್ಲಿ ಐವರು ಕ್ವಾರಂಟೈನ್ ಕೇಂದ್ರಕ್ಕೆ ಪ್ರಯಾಣ ಬೆಳೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಒಂದೇ ಬೈಕ್ ನಲ್ಲಿ ಐವರು ಸೋಂಕಿತರ ಕ್ವಾರಂಟೈನ್ ಕೇಂದ್ರಕ್ಕೆ ಪ್ರಯಾಣಿಸಿರೊ ಫೋಟೋ ವೈರಲ್ ಆಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬುರಕಾಯಲಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಸೇರಿ ತನ್ನ ಮೂವರು ಮಕ್ಕಳೊಂದಿಗೆ ಚಲ್ದಿಗಾನಹಳ್ಳಿ ಗ್ರಾಮದ ಕ್ವಾರೆಂಟೈನ್ ಕೇಂದ್ರದಲ್ಲಿ ದಾಖಲಾಗಿದ್ದಾರೆ.

ಲಕ್ಷ್ಮೀಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಪರೀಕ್ಷೆ ಮಾಡಿದ್ದ ಕುಟುಂಬಸ್ಥರ ಮೊಬೈಲ್ ಗೆ ಮೆಸೇಜ್ ಸಿಗುತ್ತಿದ್ದಂತೆ, ಆಂಬ್ಯುಲೆನ್ಸ್ ಸೇವೆ ಇದ್ದರು, ಬೈಕ್ ನಲ್ಲೇ ತೆರಳಿದ್ದಾರೆ. ಬುರಕಾಯಲಕೋಟೆ ಗ್ರಾಮದಲ್ಲಿ ಒಟ್ಟು 12 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಗ್ರಾಮವನ್ನು ಪಂಚಾಯಿತಿ ಅಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.

The post ಒಂದೇ ಬೈಕಿನಲ್ಲಿ ಕೋವಿಡ್ ಕೇಂದ್ರಕ್ಕೆ ತೆರಳಿದ ಐವರು appeared first on Public TV.

Source: publictv.in

Source link