ನವದೆಹಲಿ: ಸದ್ಯ ಜಗತ್ತಿನಾದ್ಯಂತ ಎರಡನೇ ಅಲೆ ಮೂರನೇ ಅಲೆ, ನಾಲ್ಕನೇ ಅಲೆ ರೂಪದಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನ ಕುರಿತು ದಿನಕ್ಕೊಂದು ಕುತೂಹಲಕಾರಿ ಅಂಶಗಳು ಹೊರಬರುತ್ತಲೇ ಇವೆ. ಇದೀಗ ಮಹಿಳೆಯೊಬ್ಬರಲ್ಲಿ ಕೊರೊನಾ ವೈರಸ್ 216 ದಿನಗಳ ಕಾಲ ಇದ್ದು ಕನಿಷ್ಠ 30 ಬಾರಿ ರೂಪಾಂತರಗೊಂಡಿದೆ ಎಂಬ ಅಚ್ಚರಿಯ ವರದಿ ಹೊರಬಿದ್ದಿದೆ.

ದಕ್ಷಿಣ ಆಫ್ರಿಕಾದ 36 ವರ್ಷದ ಮಹಿಳೆಯೋರ್ವರು ಹೆಚ್​ಐವಿ ಪೀಡಿತರಾಗಿದ್ದರು. ಈ ಮಹಿಳೆ ಕೊರೊನಾ ಸೋಂಕಿಗೂ ಒಳಗಾಗಿದ್ದರು. ಇವರ ದೇಹದಲ್ಲಿ ಸುಮಾರು 216 ದಿನಗಳ ಕಾಲ ಅಂದ್ರೆ 7 ತಿಂಗಳಿಗೂ ಹೆಚ್ಚು ಕಾಲ ಬಿಡಾರ ಹೂಡಿಕೊಂಡಿತ್ತು ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದಕ್ಕಿಂತಲೂ ಮತ್ತೊಂದು ಆತಂಕಕಾರಿ ವಿಚಾರ ಎಂದರೆ ಈ ಮಹಿಳೆಯ ದೇಹದಲ್ಲಿ 30 ಕ್ಕೂ ಹೆಚ್ಚು ಬಾರಿ ವೈರಸ್ ರೂಪಾಂತರಗೊಂಡಿದೆಯಂತೆ. ಈ ವಿಚಾರವನ್ನ ವರದಿಯೊಂದರಲ್ಲಿ ಪ್ರಕಟಿಸಲಾಗಿದೆ.

ಈ ವರದಿಯ ಪ್ರಕಾರ ವೈರಸ್ ಇಮ್ಯೂನ್ ಸಿಸ್ಟಮ್ ಕ್ಷೀಣಿಸಿರುವ ದೇಹದಲ್ಲಿ ವೈರಸ್ ಹೆಚ್ಚು ಕಾಲ ಬದುಕುತ್ತದೆ ಮತ್ತು ಹಲವು ಬಾರಿ ರೂಪಾಂತರಗೊಳ್ಳುತ್ತದೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಈ ಅವಧಿಯಲ್ಲಿ ಮಹಿಳೆಯಿಂದ ರೂಪಾಂತರಗೊಂಡ ವೈರಸ್ ಬೇರೊಬ್ಬರ ದೇಹಕ್ಕೆ ಪಸರಿಸಿದೆಯೇ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

The post ಒಂದೇ ಮಹಿಳೆಯ ದೇಹದಲ್ಲಿ 216 ದಿನ ಉಳಿದಿತ್ತು ಕೊರೊನಾ ವೈರಸ್: 30 ಬಾರಿ ರೂಪಾಂತರ appeared first on News First Kannada.

Source: newsfirstlive.com

Source link