ಬೆಂಗಳೂರು: ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ. ಅವರ ಚಿಕಿತ್ಸೆಗೆ ಎಲ್ಲಾ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಇದೆ.ಇದಕ್ಕೆ ಸಂಬಂಧಿಸಿದ ತಜ್ಞರು ಇದ್ದಾರೆ. 17 ಸರ್ಕಾರಿ ವೈದ್ಯಕೀಯ ಕಾಲೇಜು ಇವೆ ಅಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಔಷಧಿ ಕೊರತೆ ಇರುವುದು ಸತ್ಯ. ಈ ಬಗ್ಗೆ ಸಚಿವ ಸದನಾಂದ ಗೌಡ ಜೊತೆ ನಿಕಟ ಸಂಕರ್ಪದಲ್ಲಿದ್ದೇವೆ. ಔಷಧಿಯ ಉತ್ಪಾದನೆ ಆಗ್ತಾ ಇದೆ ಎಂದರು. ಈಗ ನಮ್ಮ ರಾಜ್ಯದಲ್ಲಿ 300 ಕೇಸ್​ಗಳು ಇವೆ. 1000 ವಯಲ್ಸ್ ಔಷಧ ಕಳಿಸಿಕೊಡೋ ನಿರೀಕ್ಷೆ ಇದೆ. ಎಷ್ಟು ವಯಲ್ಸ್ ಬೇಕು ಅನ್ನೋದು ರೋಗಿಗಳ ಮೇಲೆ ನಿರ್ಧರಿಸಲಾಗುತ್ತದೆ. ಕೇಂದ್ರದಿಂದ 1150 ವಯಲ್ಸ್ ಬಿಡುಗಡೆ ಮಾಡಿದ್ದಾರೆ. ಇವತ್ತು 1000 ವಯಲ್ಸ್ ಬರುವ ಸಾಧ್ಯತೆ ಇದೆ. ನಾವು 20 ಸಾವಿರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ರು.

ರಾಜ್ಯದಲ್ಲಿ ಎಷ್ಟು ಜನ ಬ್ಲಾಕ್ ಫಂಗಸ್​​ನಿಂದ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸಂಜೆ ಮಾಹಿತಿ ನೀಡುವುದಾಗಿ ಸುಧಾಕರ್ ತಿಳಿಸಿದರು. ಇದೇ ವೇಳೆ ಕಪ್ಪು ಫಂಗಸ್​ ಇನ್​ಫೆಕ್ಷನ್ ಉಂಟಾಗಲು ಕಾರಣಗಳೇನು ಎಂಬ ಬಗ್ಗೆ ನಾವು ರಚನೆ ಮಾಡಿದ ತಜ್ಞರ ತಂಡ ವರದಿ ನೀಡಿದೆ ಎಂದು ತಿಳಿಸಿದ್ರು.

ತಜ್ಞರ ಪ್ರಕಾರ ಬ್ಲಾಕ್​ ಫಂಗಸ್​ ಉಂಟಾಗಲು ಕಾರಣಗಳು

 1. ಹೆಚ್ಚು ಸ್ಟಿರಾಯ್ಡ್  ಬಳಕೆ.
 2. ಕೊಳಾಯಿ ನೀರನ್ನ ಬಳಸುವುದರಿಂದ.
 3.  ಡಯಾಬಿಟಿಸ್ ಇರುವವರಲ್ಲಿ ಕಪ್ಪು ಫಂಗಸ್​ ಬರುತ್ತೆ.
 4. ಐಸಿಯುಗಳಲ್ಲಿ ವೆಂಟಿಲೇಟರ್ ಬಳಸುವ ವಿಧಾನದಲ್ಲಿ ಸ್ವಚ್ಚತೆ ಇಲ್ಲದೆ ಹೋದ್ರೆ ಬರುತ್ತೆ.
 5. ಒಂದೇ ಮಾಸ್ಕ್ ಬಹಳ ಕಾಲ ಉಪಯೋಗ ಮಾಡಿದ್ರೆ.
 6. ಆಕ್ಸಿಜನ್ ಸೋರ್ಸ್ ಸೇರಿದಂತೆ ಅನೇಕ ವಿಧಾನಗಳಲ್ಲಿ ಬ್ಲ್ಯಾಕ್ ಫಂಗಸ್ ಬರುತ್ತೆ .

ಇದಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅಂತ ತಜ್ಞರು ಹೇಳಿದ್ದಾರೆ. ಹೀಗಾಗಿ ಎಲ್ಲಾ ಕಡೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದ್ರು.

ಸೂಚನೆಗಳು

 • ಆಸ್ಪತ್ರೆಗಳಲ್ಲಿ ಕಟ್ಟಡಗಳ ನಿರ್ಮಾಣ, ಕಟ್ಟಡಗಳ ರಿನೋವೇಷನ್ ಮಾಡಬಾರದು‌.
 • ಕೋವಿಡ್ ವಾರ್ಡ್ ನಲ್ಲಿ ಬೇರೆ ಬೇರೆಯವರು ಹೋಗಲು ಅವಕಾಶ ನೀಡಬಾರದು.
 • ಯಾರನ್ನು ಕೋವಿಡ್ ವಾರ್ಡ್ ನಲ್ಲಿ ಬಿಡಿಬಾರದು ಅಂತ ಸೂಚನೆ ನೀಡಲಾಗಿದೆ.
 • ಪ್ರತಿ ಪಾಳಿಯಲ್ಲಿ ಆಸ್ಪತ್ರೆಗಳ ಫ್ಲೋರ್, ವಾರ್ಡ್ ಸ್ಯಾನಿಟೈಸ್ ಮಾಡಬೇಕು.
 • ಆಕ್ಸಿಜನ್, ವೆಂಟಿಲೇಟರ್ ರೋಗಿಗಳನ್ನ ಇರುವ ಜಾಗದಲ್ಲಿ ಶುಚಿತ್ವ ಕಾಪಾಡಬೇಕು.
 • ಸ್ಟಿರಾಯ್ಡ್ ಅಧಿಕ ಬಳಕೆ ಮಾಡಬಾರದು ಅಂತ ಸಲಹೆ ನೀಡಲಾಗಿದೆ.
 • ಕೋವಿಡ್ ಗುಣಮುಖ ಆದ ಮೇಲೆ, ENT ಸ್ಪೆಷಲಿಸ್ಟ್ ಹಾಗೂ ಫಿಸಿಶಿಯನ್ಸ್ ಮತ್ತೊಮ್ಮೆ ಆ ರೋಗಿಯ ಪರೀಕ್ಷೆ ಮಾಡಬೇಕು.
 • ಹಂತದ ಹಂತವಾಗಿ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ.
 • ಇನ್ಫೆಕ್ಷನ್ ಕಡಿಮೆ ಮಾಡಲು ಬೇಕಾದ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ರು.

ಇನ್ನು18 ವರ್ಷ ಮೇಲ್ಪಟ್ಟವರಿಗೆ ಯಾವಾಗಿನಿಂದ ಲಸಿಕೆ ಕೊಡ್ತೀವಿ ಅಂತ ಕೆಲವೇ ದಿನಗಳಲ್ಲಿ ಸ್ಪಷ್ಟನೆ ಕೊಡ್ತೀನಿ. ಇದಕ್ಕಾಗಿ ಸ್ಪಷ್ಟವಾದ ಪ್ಲ್ಯಾನ್ ಮಾಡ್ತೀವಿ ಎಂದು ಹೇಳಿದರು.

The post ಒಂದೇ ಮಾಸ್ಕ್​ ದೀರ್ಘಕಾಲ ಬಳಸಿದ್ರೆ ಹುಷಾರ್..ಪ್ರಾಣ ಹಿಂಡುತ್ತೆ ಬ್ಲಾಕ್​ ಫಂಗಸ್​ appeared first on News First Kannada.

Source: newsfirstlive.com

Source link