– ಒಬ್ಬಳು ಕಿವುಡು, ಮತ್ತೋಬ್ಬಳಿಗೆ ಮಾತು ಬರಲ್ಲ

ಕೋಲಾರ: ಒಂದೇ ಮುಹೂರ್ತದಲ್ಲಿ ಅಕ್ಕ, ತಂಗಿ ಇಬ್ಬರನ್ನು ವರ ಮದುವೆಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾನೆ. ಈ ದಂಪತಿಯ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸಖತ್ ವೈರಲ್ ಆಗಿದೆ.

ಸೌಭಾಗ್ಯವತಿ ಸುಪ್ರಿಯಾ ಲಲಿತಾರನ್ನ ಚಿರಂಜೀವಿ ರಾಜಕುಮಾರ ಒಂದೇ ಮುಹೂರ್ತದಲ್ಲಿ ಮದುವೆ ಆಗಿರುವ ಫೋಟೊ ಹಾಗೂ ಮದುವೆಯ ಕರೆಯೊಲೆ ಸಖತ್ ವೈರಲ್ ಆಗಿದೆ. ಎಲ್ಲರ ನಂಬಲೇ ಬೇಕಾದ ತಮ್ಮ ಕಲ್ಪನೆಗೆ ಮೀರಿದ ಸನ್ನಿವೇಶ ಇದಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಮೇ 7ರಂದು ನಡೆದ ಮದುವೆ ಫೋಟೊಗಳು ಸಖತ್ ವೈರಲ್ ಆಗಿದೆ. ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ, ತಂಗಿ ಲಲಿತಾಗೆ ಕಿವಿ ಕೇಳಿಸಲ್ಲ ಒಬ್ಬರಿಗೆ ಮದುವೆಯಾದ್ರೆ ಮತ್ತೊಬ್ಬರ ಪರಿಸ್ಥಿತಿ ಹೇಗೆ ಎಂದು ಯೋಚನೆ ಮಾಡಿದ ಪೋಷಕರು ಅಕ್ಕ ತಂಗಿ ಒಬ್ಬನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ.

ಒಂದೇ ಮಂಟಪದಲ್ಲಿ ಇಬ್ಬರನ್ನ ವರಿಸುವ ಸನ್ನಿವೇಶ ಕೇವಲ ಸಿನಿಮಾದಲ್ಲಿ ಮಾತ್ರ ನೋಡಿದ್ದೇವು, ಆದರೆ ಕೋಲಾರದಲ್ಲಿ ನಡೆದಿರುವುದು ಎಲ್ಲೇಡೆ ಸುದ್ದಿಯಾಗುತ್ತಿದೆ. ಈ ಮದುವೆ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರಿಕೆ ಸಖತ್ ವೈರಲ್ ಆಗಿದೆ.

The post ಒಂದೇ ಮುಹೂರ್ತದಲ್ಲಿ ಅಕ್ಕ, ತಂಗಿಯನ್ನ ವರಿಸಿದ ವರ -ವೈರಲ್ ಆಯ್ತು ಮದುವೆ ಫೋಟೊ appeared first on Public TV.

Source: publictv.in

Source link