ಬೆಂಗಳೂರು: ಕೊರೊನಾ ಹೆಸ್ರಲ್ಲಿ ಆಸ್ಪತ್ರೆಗಳಲ್ಲಿ ಹಗಲು ದರೋಡೆ ನಡೀತಿದೆ ಎಂದು ಕೊರೊನಾ ಸೋಂಕು ಪ್ರಾರಂಭವಾದಾಗಿನಿಂದಲೂ ಜನರು ಆರೋಪಿಸುತ್ತಲೇ ಇದ್ದಾರೆ. ಇದೀಗ ಇಂಥದ್ದೇ ಆರೋಪ ಸಪ್ತಗಿರಿ ಆಸ್ಪತ್ರೆಯ ಮೇಲೂ ಕೇಳಿಬಂದಿದೆ.

ಮೃತದೇಹ ಬೇಕು ಅಂದ್ರೆ 6.3 ಲಕ್ಷ ಬಿಲ್ ಕಟ್ಟಿ ಎಂದು ಆಸ್ಪತ್ರೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆಂದು ಮೃತವ್ಯಕ್ತಿಯೋರ್ವರ ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಯೂಟ್ ವಾರ್ಡ್ ಅಂತ ಹೇಳಿ ಜನರಲ್ ವಾರ್ಡ್​​ನಲ್ಲೇ ಟ್ರೀಟ್​​ಮೆಂಟ್ ಕೊಟ್ಟಿದ್ದಾರೆ. ಬಿಲ್ ಕೇಳಿದ್ರೂ ಕೊಡದೆ ಹಣ ಕಟ್ಟಿ ಅಂತ ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಶನಿವಾರ ಸಪ್ತಗಿರಿ ಆಸ್ಪತ್ರೆಗೆ 55 ವರ್ಷದ ವ್ಯಕ್ತಿ ದಾಖಲಾಗಿದ್ದರು.. ಪ್ರೈವೇಟ್ ಆಡ್ಮಿಟ್ ಮಾತ್ರ ಇರೋದಾಗಿ ಸಪ್ತಗಿರಿ ಆಸ್ಪತ್ರೆ ದಾಖಲು ಮಾಡಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಮುಂಗಡವಾಗಿ 2.5 ಲಕ್ಷ ಹಣವನ್ನೂ ಪಡೆದಿದ್ದರಂತೆ.. ಬಳಿಕ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ವ್ಯಕ್ತಿ  ಮೃತಪಟ್ಟಿದ್ದಾರೆ. ಸದ್ಯ 6.3 ಲಕ್ಷ ಬಿಲ್ ಆಗಿದೆ ಎಂದಿರುವ ಆಸ್ಪತ್ರೆ ಬಿಲ್​ ಕೂಡ ಕೊಡದೇ ಬಾಕಿ ಹಣ ಕಟ್ಟುವಂತೆ ಪಟ್ಟು ಹಿಡಿದಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ.

The post ಒಂದೇ ವಾರಕ್ಕೆ 6.3 ಲಕ್ಷ ಬಿಲ್.. ಹಣ ಕಟ್ಟೋವರೆಗೂ ಬಾಡಿ ಕೊಡಲ್ವಂತೆ.. ಕಂಗಾಲಾಯ್ತು ಕುಟುಂಬ appeared first on News First Kannada.

Source: newsfirstlive.com

Source link