ಬೆಂಗಳೂರು: ಯಲಹಂಕ ಚಿತಾಗಾರದ ಮುಂದೆ ಪತ್ನಿಯನ್ನ ಕಳೆದುಕೊಂಡ ವ್ಯಕ್ತಿಯೊಬ್ಬರು ಇಂದು ಕಣ್ಣೀರಿಟ್ಟು ಗೋಳಾಡಿದರು. ಕೋವಿಡ್​ನಿಂದ ಮೃತಪಟ್ಟ 31 ವರ್ಷದ  ಮಹಿಳೆ ಗಿರಿಜಾ ಅವರ ಅಂತ್ಯಸಂಸ್ಕಾರಕ್ಕೆ ಮೂರು ದಿನಗಳಿಂದ ಕಾಯುತ್ತಿರೋ ಪತಿ ಶಿವು ತಮ್ಮ ನೋವು ತೋಡಿಕೊಂಡ ದೃಶ್ಯ ಹೃದಯವಿದ್ರಾವಕವಾಗಿತ್ತು.

ನ್ಯೂಸ್​​ಫಸ್ಟ್​ ಜೊತೆ ಮಾತನಾಡಿದ ಶಿವು, ವೀಲ್ ಚೇರ್​ನಲ್ಲಿ ಇಡೀ ಆಸ್ಪತ್ರೆ ಸುತ್ತಿದ್ರೂ ನನ್ನ ಪತ್ನಿಗೆ ಬೆಡ್ ಕೊಡಲಿಲ್ಲ. ಸಪ್ತಗಿರಿ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಮೂರು ಲಕ್ಷ ಕೇಳಿದ್ರು ಅಂತ ಆರೋಪಿಸಿದ್ರು. ಹಾಲು ಮಾರುವ ವ್ಯಕ್ತಿ ನಾನು. ಹಸುವನ್ನ ಮಾರಾಟ ಮಾಡಲು ಹೋದೆ.. ಸೈಟ್ ಮಾರಲಿಕ್ಕೆ ಹೋದೆ. ಆದ್ರೆ ಯಾರೂ ತಗೊಳ್ಲಿಲ್ಲ. ಹಣ ಇಲ್ಲದೆ, ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಕ್ಕೆ ಯಲಹಂಕದ ಸಿಂಗಾಪುರದ ಮನೆಗೆ ಪತ್ನಿಯನ್ನ ಕರೆದುಕೊಂಡು ಹೋದೆ. ನನ್ನ ಹೆಂಡ್ತಿ ಮಂಗಳವಾರ ಮನೆಯಲ್ಲಿ ಸಾವನ್ನಪ್ಪಿದಳು. ಹೆಂಡ್ತಿ ಸತ್ತು ಇವತ್ತಿಗೆ ಮೂರು ದಿನ. ಆಂಬುಲೆನ್ಸ್ ಸಿಗದೇ ಮೂರು ದಿನದಿಂದ ಬರ್ನಿಂಗ್ ಮಾಡಲಿಕ್ಕಾಗಿಲ್ಲ ಅಂತ  ತಿಳಿಸಿದರು.

ಒಂದೇ ವಾರದಲ್ಲಿ ನಮ್ಮ ಕುಟುಂಬದಲ್ಲಿ ಮೂರು ಜನರನ್ನ ಕಳೆದುಕೊಂಡಿದ್ದೀನಿ. ನನ್ನ ಅತ್ತೆ, ನನ್ನ ಅತ್ತೆಯ ಅಮ್ಮ ಹಾಗೂ ನನ್ನ ಹೆಂಡ್ತಿ ಎಲ್ಲರೂ ಸತ್ತೋದ್ರು. ನಾನೊಬ್ಬನೇ ಇದ್ದು ಏನ್ ಮಾಡ್ಲಿ ಅಂತ ಶಿವು ದುಃಖ ವ್ಯಕ್ತಪಡಿಸಿದ್ರು.

 

 

The post ‘ಒಂದೇ ವಾರದಲ್ಲಿ ಹೆಂಡ್ತಿ, ಅತ್ತೆ, ಅವರಮ್ಮ.. ಮೂವರೂ ಸತ್ತೋದ್ರು, ನಾನೊಬ್ಬನೇ ಇದ್ದು ಏನ್ ಮಾಡ್ಲಿ’ – ವ್ಯಕ್ತಿ ಕಣ್ಣೀರು appeared first on News First Kannada.

Source: newsfirstlive.com

Source link