ಬೆಳಗಾವಿ: ಒಂದೇ ನಾಯಿಯಿಂದ 15 ಜನರ ಮೇಲೆ ದಾಳಿ ನಡೆದಿರೋ ಘಟನೆ ಸವದತ್ತಿ ತಾಲೂಕಿನ ಮೂರು ಗ್ರಾಮಗಳಲ್ಲಿ ನಡೆದಿದೆ. ಎರಡು ಗಂಟೆ ಅವಧಿಯಲ್ಲಿ ಮೂರು ಗ್ರಾಮಗಳ 15ಜನರ ಮೇಲೆ ದಾಳಿ ನಡೆದಿದೆ.

ಯರಝರವಿ, ಮಳಗಲಿ, ಹೊಸೂರ ಗ್ರಾಮಗಳಲ್ಲಿ ಹುಚ್ಚುನಾಯಿಯ ದಾಳಿ ನಡೆದಿದ್ದು.. ಮಲ್ಲವ್ವ, ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ಧಪ್ಪ, ಸವಿತಾ ಎಂಬುವವರಿಗೆ ನಾಚಿ ಕಚ್ಚಿದೆ. ಗಾಯಗೊಂಡವರಿಗೆ ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹುಚ್ಚು ನಾಯಿಯ ದಾಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

The post ಒಂದೇ ಶ್ವಾನದಿಂದ 2 ಗಂಟೆ ಅವಧಿಯಲ್ಲಿ 15 ಜನರ ಮೇಲೆ ದಾಳಿ.. ಬೆಚ್ಚಿಬಿದ್ದ ಜನರು appeared first on News First Kannada.

Source: newsfirstlive.com

Source link