ಜಯಂತಿ ಹಿನ್ನಲೆಯಲ್ಲಿ ಮೂರ್ತಿಯನ್ನು ಸ್ವಚ್ಚಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಂತನ ಕಣ್ಣಿನಲ್ಲಿ ಬಿಟ್ಟು ಬಿಡಲಾರದೆ ಹನಿ ಹನಿ ಕಣ್ಣೀರು ಸುರಿಯುತ್ತಿದೆ.
[embed]https://www.youtube.com/watch?v=-CouRQfOtaM[/embed]
ಹುಬ್ಬಳ್ಳಿ: ಹನುಮ ಜಯಂತಿ ದಿನದಂದು ಹನುಮಂತ ಕಣ್ಣೀರು (Crying) ಹಾಕಿರುವಂತಹ ಅಚ್ಚರಿ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಬಳಿಯಿರುವ ಬುಡರಸಿಂಗಿ ಗ್ರಾಮದ ಹನುಮಂತ ದೇವಸ್ಥಾನದಲ್ಲಿ ನಡೆದಿದೆ. ಜಯಂತಿ ಹಿನ್ನಲೆಯಲ್ಲಿ ಮೂರ್ತಿಯನ್ನು ಸ್ವಚ್ಚಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಮಂತ ಕಣ್ಣಿನಲ್ಲಿ ಬಿಟ್ಟು ಬಿಡಲಾರದೆ ಹನಿ ಹನಿ ಕಣ್ಣೀರು ಸುರಿಯುತ್ತಿದೆ. ಕಣ್ಣೀನಲ್ಲಿ ನೀರು ನೋಡಿ ಅಚ್ಚರಿಗೊಂಡ ಗ್ರಾಮಸ್ಥರು ಘಟನೆ ನೋಡಲು ಮುಗಿಬಿದ್ದಾರೆ. ಕಲಬುರಗಿ ನಗರದಲ್ಲಿ ಕೇಸರಿ ನಂದನ ಯುವ ಬ್ರಿಗೇಡ್ ವತಿಯಿಂದ ಅದ್ದೂರಿ ಹನುಮ ಜಯಂತಿ ಆಚರಣೆ ಮಾಡಲಾಯಿತು. ನಗರದ ಹಲವಡೆ 4 ಅಡಿ ಎತ್ತರದ ಹನುಮಾನ ಮೂರ್ತಿಯ ಶೋಭಾಯಾತ್ರೆ ಮಾಡಲಾಗಿದ್ದು, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.