ಬೆಂಗಳೂರು: 12 ವರ್ಷದ ಅಪ್ರಾಪ್ತ ಬಾಲಕನೋರ್ವ ಡೆತ್ ನೋಟ್ ಬರೆದು ನೇಣಿಗೆ ಶರಾಣಾಗಿರುವ ದುರಂತ ಘಟನೆ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ಮನೆಯೊಂದರಲ್ಲಿ ನಡೆದಿದೆ.

ಒಂದು ಸಾಲಿನ ಡೆತ್ ನೋಟ್ ಬರೆದಿಟ್ಟಿರುವ ಬಾಲಕ ತನ್ನ ಸಾವಿಗೆ ಮತ್ತೋರ್ವ ಬಾಲಕ ಕಾರಣ ಎಂದು ಬರೆದಿದ್ದಾನೆ. ಹುಡುಗನ ತಂದೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ರು.. ಅಮ್ಮ ಮನೆ ಕೆಲಸ ಮಾಡಿಕೊಂಡಿದ್ರು.. ನಿನ್ನೆ ಸಂಜೆ ಅಮ್ಮ ಮನೆ ಕೆಲಸ ಮಾಡಿ ಮನೆಗೆ ವಾಪಸ್ಸಾಗಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಬಾಲಕ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಒಂದೇ ಸಾಲಿನ ಡೆತ್​ನೋಟ್ ಬರೆದು ನೇಣಿಗೆ ಶರಣಾದ ಅಪ್ರಾಪ್ತ ಬಾಲಕ.. ಸಾವಿಗೆ ಕಾರಣ ಯಾರು..? appeared first on News First Kannada.

Source: newsfirstlive.com

Source link