
ಹೀರೋಪಂತಿ 2
‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ.
ನಟ ಟೈಗರ್ ಶ್ರಾಫ್ (Tiger Shroff) ಸಿನಿಮಾಗಳಲ್ಲಿ ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಮೈನವಿರೇಳಿಸುವ ದೃಶ್ಯಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಈ ಮೊದಲು ಇದು ಅನೇಕ ಬಾರಿ ಸಾಬೀತಾಗಿದೆ. ಅವರು ಮಾಡುವ ಸ್ಟಂಟ್ಸ್ಗಳನ್ನು ನೋಡೋಕೆ ಅವರ ಫ್ಯಾನ್ಸ್ ಇಷ್ಟಪಡುತ್ತಾರೆ. ಇತ್ತೀಚೆಗೆ ಅವರ ನಟನೆಯ ‘ಹೀರೋಪಂತಿ 2’ ಸಿನಿಮಾ (Heropanti 2 ) ರಿಲೀಸ್ ಆಗಿತ್ತು. ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆಗಳು ಬಂದವು. ಇನ್ನು, ‘ಕೆಜಿಎಫ್ 2’ ಅಬ್ಬರಕ್ಕೆ ಚಿತ್ರ ನಲುಗಿ ಹೋಗಿತ್ತು. ಹೀಗಾಗಿ, ಕೆಲವೇ ದಿನಗಳಲ್ಲಿ ಟೈಗರ್ ನಟನೆಯ ಸಿನಿಮಾ ಚಿತ್ರಮಂದಿರದಿಂದ ಕಾಲ್ಕಿತ್ತಿತು. ಈಗ ಸಿನಿಮಾ ಒಟಿಟಿಯಲ್ಲಿ ಲಗ್ಗೆ ಇಡುತ್ತಿದೆ.
ಏಪ್ರಿಲ್ 29ರಂದು ಬಾಲಿವುಡ್ನಲ್ಲಿ ಟೈಗರ್ ಶ್ರಾಫ್ ಅಭಿನಯದ ‘ಹೀರೋಪಂತಿ 2’ ಹಾಗೂ ಅಜಯ್ ದೇವಗನ್ ನಟನೆಯ ‘ರನ್ವೇ 34’ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆದವು. ‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ. ಈ ಚಿತ್ರ ಮೊದಲ ದಿನ 6.50 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಚಿತ್ರದ ಒಟ್ಟಾರೆ ಕಲೆಕ್ಷನ್ 25 ಕೋಟಿ ರೂಪಾಯಿ ದಾಟಿಲ್ಲ.
‘ಹೀರೋಪಂತಿ 2’ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಅಮೇಜಾನ್ ಪ್ರೈಮ್ ವಿಡಿಯೋ ಘೋಷಣೆ ಮಾಡಿದೆ. ಟ್ವಿಟರ್ನಲ್ಲಿ ಟೈಗರ್ ಶ್ರಾಫ್ ವಿಡಿಯೋವನ್ನು ಅಮೇಜಾನ್ ಪ್ರೈಮ್ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮೇ 27ರಂದು ಒಟಿಟಿಯಲ್ಲಿ ‘ಹೀರೋಪಂತಿ 2’ ವೀಕ್ಷಿಸುವಂತೆ ಕೋರಿದ್ದಾರೆ. ಸಖತ್ ಫನ್ನಿಯಾಗಿ ಈ ವಿಡಿಯೋ ಮೂಡಿ ಬಂದಿದೆ. ಒಟಿಟಿಯಲ್ಲಿ ಜನರು ಈ ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.