ಬೆಂಗಳೂರು: ಬೆಳ್ಳಿ ಪರದೆಯ ಮೇಲೆ ಭರ್ಜರಿ ಧೂಳೆಬ್ಬಿಸಿ ಶತಕೋಟಿ ರೂಪಾಯಿ ಬಾಚಿಕೊಂಡು ಬೀಗುತ್ತಿರುವ ಕನ್ನಡದ ರಾಬರ್ಟ್ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಏಪ್ರಿಲ್ 25 ರಂದು ಅಮೇಜಾನ್ ಪ್ರೈಮ್ ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಕೋವಿಡ್ ಪಿಡುಗಿನ ನಂತರ ಬಿಡುಗಡೆಯಾದ ಸ್ಟಾರ್ ನಟನ ಸಿನಿಮಾ ‘ರಾಬರ್ಟ್’ ಸಿನಿಮಾ ಚಿತ್ರರಂಗಕ್ಕೆ ಮತ್ತೆ ಹೊಸತನ ತಂದು ಕೊಟ್ಟಿತ್ತು. ಬಿಡುಗಡೆಯಾದ ಮೊದಲ ವಾರ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ್ ಕಂಡು ಬಾಕ್ಸ್ ಆಫೀಸ್‍ನಲ್ಲಿಯೂ ಗೆಲುವಿನ ನಗೆ ಬೀರಿತು. ಇಡೀ ರಾಜ್ಯಾದ್ಯಂತ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಈ ಸಿನಿಮಾ ಇದೀಗ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗುತ್ತಿದೆ.

ತರುಣ್ ಕಿಶೋರ್ ನಿರ್ದೇಶನದ ರಾಬರ್ಟ್ ಸಿನಿಮಾ, ಕನ್ನಡ, ತೆಲುಗು, ತಮಿಳು ಮಲಯಾಳಂತ ಹಾಗೂ ಹಿಂದಿಯಲ್ಲಿ ಪ್ರದರ್ಶನವಾಗಲಿದೆ. ರಾಬರ್ಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೊತೆ ಆಶಾ ಭಟ್ ನಾಯಕಿಯಾಗಿ ನಟಿಸಿದ್ದರು. ವಿನೋದ್ ಪ್ರಭಾಕರ್, ಸೋನೆಲ್ ಮಾಂಟೇರಿಯೋ, ರವಿಶಂಕರ್ ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ರಾಬರ್ಟ್ ಸಿನಿಮಾ ಕಣ್ತುಂಬಿಕೊಳ್ಳದವರು ಏಪ್ರಿಲ್ 25ರ ನಂತರ ಒಟಿಟಿಯಲ್ಲಿ ನೋಡಬಹುದು.

ಸಿನೆಮಾ – Udayavani – ಉದಯವಾಣಿ
Read More