ಒಟಿಟಿಯಲ್ಲಿ ‘RRR’ ವೀಕ್ಷಿಸಲು ಹೆಚ್ಚುವರಿ ಹಣ ನೀಡಬೇಕಿಲ್ಲ; ನಿರ್ಧಾರ ಬದಲಿಸಿ ಸಿಹಿ ಸುದ್ದಿ ನೀಡಿದ ಜೀ5 | RRR OTT world premiere: Zee5 changes RRR movie OTT release plan


ಒಟಿಟಿಯಲ್ಲಿ ‘RRR’ ವೀಕ್ಷಿಸಲು ಹೆಚ್ಚುವರಿ ಹಣ ನೀಡಬೇಕಿಲ್ಲ; ನಿರ್ಧಾರ ಬದಲಿಸಿ ಸಿಹಿ ಸುದ್ದಿ ನೀಡಿದ ಜೀ5

ಆರ್​ಆರ್​ಆರ್

RRR OTT Release: ಪೇ ಪರ್​ ವ್ಯೂ ಮಾದರಿಯಲ್ಲಿ ಸಿನಿಮಾ ಪ್ರಸಾರ ಮಾಡಲು ತೀರ್ಮಾನಿಸಿದ್ದ ಜೀ5 ಒಟಿಟಿ ಸಂಸ್ಥೆ ಈಗ ತನ್ನ ನಿರ್ಧಾರ ಬದಲಿಸಿದೆ. ಇದು ಚಂದಾದಾರರಿಗೆ ಖುಷಿ ನೀಡಿದೆ.

ಟಾಲಿವುಡ್​ ಹೀರೋಗಳಾದ ರಾಮ್​ ಚರಣ್​ ಹಾಗೂ ಜ್ಯೂ. ಎನ್​ಟಿಆರ್ ಮುಖ್ಯ ಭೂಮಿಕೆ ನಿಭಾಯಿಸಿದ ‘ಆರ್​ಆರ್​ಆರ್​’ ಸಿನಿಮಾ (RRR Movie) ಚಿತ್ರಮಂದಿರದಲ್ಲಿ ಬಹುದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಅನೇಕ. ಈಗ ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. ಮೇ 20ರಂದು ಪ್ರೇಕ್ಷಕರು ಮನೆಯಲ್ಲೇ ಕುಳಿತು ಈ ಸಿನಿಮಾ ವೀಕ್ಷಿಸಬಹುದು. ಜೀ5 ಒಟಿಟಿ (OTT Platform) ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. ಈ ಮೊದಲು ಒಟಿಟಿ ಪ್ರಸಾರಕ್ಕೆ ಒಂದಿಷ್ಟು ಷರತ್ತು ಹಾಕಲಾಗಿತ್ತು. ಈಗಾಗಲೇ ಜೀ5 ಚಂದಾದಾರರಾಗಿದ್ದರೂ ಕೂಡ ಹೆಚ್ಚುವರಿ ಹಣ ನೀಡಿ ‘ಆರ್​ಆರ್​ಆರ್​’ ಸಿನಿಮಾವನ್ನು ವೀಕ್ಷಿಸಬೇಕು ಎಂದು ಹೇಳಲಾಗಿತ್ತು. ಆದರೆ ಆ ನಿರ್ಧಾರದಿಂದ ಜೀ5 (Zee5) ಹಿಂದೆ ಸರಿದಿದೆ. ಜನರಿಂದ ತೀವ್ರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಹೊಸ ಸುದ್ದಿ ನೀಡಲಾಗಿದೆ. ಈಗಾಗಲೇ ಸಬ್​ಸ್ಕ್ರಿಪ್ಷನ್​ ಹೊಂದಿರುವವರು ಯಾವುದೇ ಹೆಚ್ಚುವರಿ ಹಣ ನೀಡದೇ ‘ಆರ್​ಆರ್​ಆರ್’ ಸಿನಿಮಾವನ್ನು ನೋಡಬಹುದು ಎಂದು ತಿಳಿಸಿದೆ. ಈ ಸುದ್ದಿ ಕೇಳಿ ಫ್ಯಾನ್ಸ್​ ಖುಷಿ​ ಆಗಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ಅಸಲಿ ಮಜಾ ಇರುವುದೇ ಅದರ ಮೇಕಿಂಗ್​ನಲ್ಲಿ. ಅದ್ದೂರಿಯಾಗಿ ಮೂಡಿಬಂದಿರುವ ದೃಶ್ಯಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೇಕ್ಷಕರು ಎಂಜಾಯ್​ ಮಾಡಿದ್ದಾರೆ. ಈಗ ಒಟಿಟಿಯಲ್ಲೂ 4K ರೆಸೊಲ್ಯೂಷನ್​ ಲಭ್ಯವಾಗುತ್ತಿದೆ. 5.1 ಸೌಂಡ್​ ಕೂಡ ಇರಲಿದೆ. ಇದು ಒಟಿಟಿ ಪ್ರೇಕ್ಷಕರಿಗೆ ಇನ್ನಷ್ಟು ಥ್ರಿಲ್​ ನೀಡಿದೆ. ಮೇ 19ರ ಮಧ್ಯರಾತ್ರಿಯಿಂದಲೇ ಜೀ5ನಲ್ಲಿ ‘ಆರ್​ಆರ್​ಆರ್​’ ಪ್ರಸಾರ ಆರಂಭ ಆಗಲಿದೆ.

TV9 Kannada


Leave a Reply

Your email address will not be published. Required fields are marked *