ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ-ಕಾರ್ತಿಕ್ ಆರ್ಯನ್​; ಫ್ಯಾನ್ಸ್ ಇಟ್ರು ‘ಆಶಿಕಿ 3’ ಬೇಡಿಕೆ | Rashmika Mandanna And Kartik Aryan Come together for Brand Promotion fans talks about Aashiqui 3


ರಶ್ಮಿಕಾ ಹಾಗೂ ಕಾರ್ತಿಕ್ ಆರ್ಯನ್ ಅವರು ಕ್ರೀಮ್ ಒಂದರ ಪ್ರಮೋಷನ್​ಗೆ ಒಂದಾಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೊಡ್ಡ ಬೇಡಿಕೆ ಸೃಷ್ಟಿ ಆಗಿದೆ. ಹಾಗಂತ ಈವರೆಗೆ ಅವರ ಯಾವುದೇ ಬಾಲಿವುಡ್​ ಸಿನಿಮಾ ರಿಲೀಸ್ ಆಗಿಲ್ಲ. ಆದರೂ ಅವರಿಗೆ ಇರುವ ಬೇಡಿಕೆ ಹೆಚ್ಚುತ್ತಲೇ ಇದೆ. ಇನ್ನು ಕಾರ್ತಿಕ್ ಆರ್ಯನ್ (Kartik Aryan) ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಏನೆಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಈಗ ಇವರಿಬ್ಬರೂ ಒಂದಾಗಿದ್ದಾರೆ. ಹೊಸ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಾಗಂತ ಇದು ಹೊಸ ಸಿನಿಮಾಗಾಗಿ ಅಲ್ಲ, ಬ್ರ್ಯಾಂಡ್ ಒಂದರ ಪ್ರಮೋಷನ್​ಗಾಗಿ.

ಅನೇಕ ಸೆಲೆಬ್ರಿಟಿಗಳು ನಟನೆಯ ಜತೆಗೆ ಬ್ರ್ಯಾಂಡ್ ಪ್ರಚಾರದಲ್ಲಿ ಭಾಗಿ ಆಗುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಅವರಿಗಂತೂ ಈ ರೀತಿಯ ಹಲವು ಆಫರ್​ಗಳು ಬರುತ್ತಿವೆ. ಅವರ ಜನಪ್ರಿಯತೆ ಕಾರಣದಿಂದ ಸಾಕಷ್ಟು ಬ್ರ್ಯಾಂಡ್​ಗಳು ರಶ್ಮಿಕಾ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳುತ್ತಿವೆ. ಇದು ರಶ್ಮಿಕಾಗೆ ಖುಷಿ ನೀಡಿದೆ. ಅಲ್ಲದೆ, ಸಾಕಷ್ಟು ಹಣ ಕೂಡ ಅವರಿಗೆ ಸಿಗುತ್ತಿದೆ.

ರಶ್ಮಿಕಾ ಹಾಗೂ ಕಾರ್ತಿಕ್ ಆರ್ಯನ್ ಅವರು ಕ್ರೀಮ್ ಒಂದರ ಪ್ರಮೋಷನ್​ಗೆ ಒಂದಾಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇವರ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಕಾರಣಕ್ಕೆ ‘ಆಶಿಕಿ 3’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸುವಂತೆ ಫ್ಯಾನ್ಸ್ ಕೋರುತ್ತಿದ್ದಾರೆ.

‘ಆಶಿಕಿ 2’ ಸಿನಿಮಾ ಸೂಪರ್ ಹಿಟ್ ಆಯಿತು. ಅರ್ಜುನ್ ರಾಯ್​ ಕಪೂರ್ ಹಾಗೂ ಶ್ರದ್ಧಾ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸ್ಯಾಡ್ ಎಂಡಿಂಗ್ ಇತ್ತು. ಅನೇಕರು ಕ್ಲೈಮ್ಯಾಕ್ಸ್ ಇಷ್ಟಪಟ್ಟಿದ್ದೂ ಇದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಹಿಟ್ ಆಗಿತ್ತು. ಈಗ ‘ಆಶಿಕಿ 3’ ಸಿನಿಮಾಗೆ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಈ ಕಾರಣಕ್ಕೆ ರಶ್ಮಿಕಾ-ಕಾರ್ತಿಕ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದರೆ ಉತ್ತಮ ಎಂಬುದು ಫ್ಯಾನ್ಸ್ ಕೋರಿಕೆ.

TV9 Kannada


Leave a Reply

Your email address will not be published.