ಒಡಂಬಡಿಕೆ ಅನುಷ್ಠಾನದಲ್ಲಿ ನಮ್ಮ ಸರ್ಕಾರ ಮುಂದಿದೆ, 2.83 ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ: ಸಿಎಂ ಬೊಮ್ಮಾಯಿ – Our government is ahead in the implementation of the agreement: cm bommai


ಈ ಬಾರಿ 9.08 ಲಕ್ಷ ಕೋಟಿ ರೂ. ಒಡಂಬಡಿಕೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಡಂಬಡಿಕೆ ಅನುಷ್ಠಾನದಲ್ಲಿ ನಮ್ಮ ಸರ್ಕಾರ ಮುಂದಿದೆ, 2.83 ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಈ ಬಾರಿ 9.08 ಲಕ್ಷ ಕೋಟಿ ರೂ. ಒಡಂಬಡಿಕೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಹೇಳಿದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಡಂಬಡಿಕೆಯ ಅನುಷ್ಠಾನದಲ್ಲಿ ನಮ್ಮ ಸರ್ಕಾರ ಮುಂದಿದೆ. ಅದರಲ್ಲಿ ₹2.83 ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ ಸಿಕ್ಕಿದೆ. ಕಳೆದ ಜಿಮ್ ಸಮಾವೇಶಕ್ಕಿಂತ ನಮ್ಮ ಸರ್ಕಾರ ಒಡಂಬಡಿಕೆಯ ಅನುಷ್ಠಾನದಲ್ಲಿ ಮುಂದಿದೆ. 2009 ಮೊದಲ ಜಿಮ್ ನಡೆದಿತ್ತು.  ಸಮಾವೇಶದಲ್ಲಿ 27 ಸಾವಿರದ 57 ಕೋಟಿ ರೂ ಒಪ್ಪಂದ ಆಗಿದೆ. 12 ಸಾವಿರ ಕೋಟಿ ಮಾತ್ರ ಹೂಡಿಕೆಯ ಅನುಷ್ಠಾನ ಬಂದಿದೆ. ಶೇಕಡಾ 44% ರಷ್ಟು ಅನುಷ್ಠಾನ ಆಗಿದೆ. 2010 ರಲ್ಲಿ 3,94,768 ಕೋಟಿ ಒಡಂಬಡಿಕೆಯಾಗಿದೆ. ಕೇವಲ ಶೇ. 14% ಮಾತ್ರ ಅನುಷ್ಠಾನಕ್ಕೆ ಬಂದಿದೆ. 2012 ರಲ್ಲಿ 6,77,168 ಕೋಟಿ ಒಡಂಬಡಿಕೆಯಾಗಿದೆ. ಕೇವಲ ಶೇ. 8% ಮಾತ್ರ ಅನುಷ್ಠಾನಕ್ಕೆ ಬಂದಿದೆ ಎಂದು ತಿಳಿಸಿದರು.

2016 ರಲ್ಲಿ 3 ಲಕ್ಷದ 5 ಸಾವಿರ ಕೋಟಿ ಒಡಂಬಡಿಕೆಯಾಗಿದೆ. ಶೇಕಡಾ 15% ಮಾತ್ರ ಅನುಷ್ಠಾನಕ್ಕೆ ಬಂದಿದೆ. ಈ ರೀತಿ ಪುನಾರವರ್ತನೆಯಾಗಬಾರದು. ಯಾವುದೇ ರಾಜ್ಯ ಸರ್ಕಾರ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಲ್ಲ. ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾನು ಬಹಿರಂಗಗೊಳಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕರ್ನಾಟಕ ಇಂದು ಯೋಚನೆ ಮಾಡೋದನ್ನು ಭಾರತ ನಾಳೆ ಯೋಚನೆ ಮಾಡುತ್ತೆ: ಸಿಎಂ ಬೊಮ್ಮಾಯಿ

ಬುದ್ದಿಮತ್ತೆ ಮತ್ತು ಪರಿಶ್ರಮ ಯಾರೊಬ್ಬರ ಸ್ವತ್ತಲ್ಲ. ಈ ಸಮಾವೇಶದಲ್ಲಿ ಬಂಡವಾಳ ಹೂಡಿಕೆಯಾಗಿದೆ ಮತ್ತು ಪ್ರೇರಣೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಧಿಕಾರಿ ವರ್ಗ ಬಹಳ ಕೆಲಸ ಮಾಡಿದೆ. ಪ್ರಪಂಚದಲ್ಲಿ ಆರ್ಥಿಕ ಹಿಂಜರಿತ ಇದೆ. ಇಂತಹ ಪರಿಸ್ಥಿತಿಯಲ್ಲಿಯೂ ಹೂಡಿಕೆದಾರರ ಸಮಾವೇಶ ಮಾಡಲು ನಾವು ಧೈರ್ಯ ತೋರಿದೆವು. ನಮ್ಮ ಜನವೇ ನಮಗೆ ಬಲ. ಕೌಶಲ್ಯಯುತ ಜನರೇ ನಮಗೆ ಬಲ. ನಮ್ಮ ನೀತಿಗಳೇ ನಮಗೆ ಬಲ. ಕರ್ನಾಟಕ ಇಂದು ಯೋಚನೆ ಮಾಡೋದನ್ನು ಭಾರತ ನಾಳೆ ಯೋಚನೆ ಮಾಡುತ್ತದೆ. ಬೆಂಗಳೂರಿಗೆ ಪ್ರತಿದಿನ 10 ಸಾವಿರ ಇಂಜಿನಿಯರ್​ಗಳು ಬರುತ್ತಾರೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮ ನೀತಿ, ಚಿಂತನೆಗಳ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕಾರ್ಯದಕ್ಷತೆ ಹೆಚ್ಚಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ಗಲ್ಫ್ ರಾಷ್ಟ್ರಗಳ ಜೊತೆಗೆ ಸ್ಪರ್ಧೆಗೆ ಮುಂದಾಗುತ್ತಿದ್ದೇವೆ ಎಂದು ಹೇಳಿದರು.

TV9 Kannada


Leave a Reply

Your email address will not be published.